ಪ್ರಕಾಶ ರೈ ಏನು ಚಡ್ಡಿ ಹಾಕೊಳ್ಳದೇ ಓಡಾಡ್ತಾರಾ? ಬಿಜೆಪಿ ಸಂಸದ ಜಾಧವ್‌ ಪ್ರಶ್ನೆ

By Kannadaprabha News  |  First Published Sep 13, 2023, 8:48 AM IST

ಪ್ರಕಾಶ ರೈ ಏನು ಚಡ್ಡಿ ಹಾಕೊಳ್ಳದೇ ಓಡಾಡ್ತಾರಾ? ಎಲ್ಲರೂ ಚಡ್ಡಿ ಹಾಕೊಳ್ಳೋರೆ. ಈ ಬಗ್ಗೆ ಬೇರೆ ಅರ್ಥ ಇಟ್ಟುಕೊಂಡು ಮಾತಾಡೋದು ಸರಿಯಲ್ಲ, ಪ್ರಕಾಶ ರೈ ಈ ರೀತಿ ಮಾತನಾಡಬಾರದು, ಭಾರತದಲ್ಲಿ ಹುಟ್ಟಿ ಭಾರತದ ಸನಾತನ ಧರ್ಮದ ಬಗ್ಗೆ ಮಾತಾಡೋದು ನಿಮಗೆ ಗೌರವ ತರೋದಿಲ್ಲ: ಡಾ.ಉಮೇಶ ಜಾಧವ್‌ 


ಕಲಬುರಗಿ(ಸೆ.13):  ನಟ ಪ್ರಕಾಶ್ ರೈ ವಿರುದ್ಧ ಕಲ್ಬುರ್ಗಿ ಸಂಸದ ಉಮೇಶ್ ಜಾದವ್ ಆಕ್ರೋಶ ಹೊರಹಾಕಿದ್ದಾರೆ. 2 ದಿನಗಳ ಹಿಂದೆ ಕಲಬುರಗಿಗೆ ಬಂದಿದ್ದ ಪ್ರಕಾಶ ರೈ ಚೆಡ್ಡಿ ಹಾಕಿಕೊಳ್ಳೋರಿಗೆ ದೇಶದ ಸಮಸ್ಯೆ ಕಾಣೋದಿಲ್ಲ ಎಂದು ತಿವಿದಿದ್ದರು. ಈ ಮಾತಿಗೆ ಆಕ್ರೋಶ ಹೊರಹಾಕಿರುವ ಡಾ. ಉಮೇಶ ಜಾಧವ್‌ ಪ್ರಕಾಶ ರೈ ಚೆಡ್ಡಿ ಹಾಕಿಕೊಳ್ಳೋದಿಲ್ಲವೆ, ಹಾಗೇ ಓಡಾಡುತ್ತಾರಾ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಪ್ರಕಾಶ ರೈ ಏನು ಚಡ್ಡಿ ಹಾಕೊಳ್ಳದೇ ಓಡಾಡ್ತಾರಾ? ಎಲ್ಲರೂ ಚಡ್ಡಿ ಹಾಕೊಳ್ಳೋರೆ. ಈ ಬಗ್ಗೆ ಬೇರೆ ಅರ್ಥ ಇಟ್ಟುಕೊಂಡು ಮಾತಾಡೋದು ಸರಿಯಲ್ಲ, ಪ್ರಕಾಶ ರೈ ಈ ರೀತಿ ಮಾತನಾಡಬಾರದು, ಭಾರತದಲ್ಲಿ ಹುಟ್ಟಿ ಭಾರತದ ಸನಾತನ ಧರ್ಮದ ಬಗ್ಗೆ ಮಾತಾಡೋದು ನಿಮಗೆ ಗೌರವ ತರೋದಿಲ್ಲ. ಕಲಬುರಗಿಯಲ್ಲಿ ಬಂದು ನೀವು ಈ ರೀತಿ ಮಾತಾಡಿದ್ದು ಸರಿಯಲ್ಲ ಎಂದು ಪ್ರಕಾಶ ರೈ ವಿರುದ್ಧ ಸಂಸದ ಉಮೇಶ ಜಾಧವ್ ಕೋಪದಲ್ಲೇ ಎಚ್ಚರಿಕೆಯ ಮಾತನ್ನು ಹೇಳಿದರು.

Tap to resize

Latest Videos

undefined

ಸನಾತನ ಧರ್ಮದವರನ್ನು ಕಾಗೆಗಳಿಗೆ ಹೋಲಿಸಿದ ಪ್ರಕಾಶ್ ರಾಜ್!

ದಲಿತರ ಆಸ್ತಿ ಕಬಳಿಸಿ ಸಚಿವ ಸುಧಾಕರರಿಂದ ಗೂಂಡಾಗಿರಿ ವಿಚಾರವಾಗಿಯೂ ಸಂಸದ ಉಮೇಶ್ ಜಾದವ್ ಮಾತನಾಡಿ, ಕಲ್ಬುರ್ಗಿ ಸೇರಿದಂತೆ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕೆಟ್ಟು ಹೋಗಿದೆ. ಯಾರ ವಿರುದ್ಧ ಎಫ್ಐಆರ್ ಮಾಡಬೇಕು ಮಾಡಲ್ಲ, ಯಾರ ವಿರುದ್ಧ ಮಾಡಬಾರದು ಮಾಡ್ತಾರೆ, ದಲಿತರಿಗೆ ಅನ್ಯಾಯ ಮಾಡಿದವರು ಯಾರೇ ಇರಲಿ ಅವರ ವಿರುದ್ಧ ಕ್ರಮ ಆಗಲಿ, ಕಾನೂನಿಗಿಂತ ಮಿಗಿಲಾದವರು ಯಾರು ಇಲ್ಲ ಎಂದರು.

ಎಂತಹ ದೊಡ್ಡ ವ್ಯಕ್ತಿಯಾಗಿರಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಗೃಹ ಸಚಿವರು ಈ ಬಗ್ಗೆ ಕೂಡಲೇ ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಬ್ಬ ಸಚಿವರಾಗಿ ಈ ರೀತಿ ಮಾತನಾಡುವುದು ಸರಿ ಅಲ್ಲವೇ ಅಲ್ಲ. ಅವರ ಪಕ್ಷದವರು ಕೂಡ ಸಚಿವರಿಗೆ ಬುದ್ದಿ ಮಾತು ಹೇಳಬೇಕು. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಂಡು ದಲಿತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದರು.

click me!