
ಕಲಬುರಗಿ (ಅ.25): ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗ 8 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾದ ದುರಂಟ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬುರವಾಡಿಯಲ್ಲಿ ನಡೆದಿದೆ.
ರೈತರಾದ ರುದ್ರಪ್ಪ, ಭೀಮಶಂಕರ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ನಡೆದಿದೆ. ಮೊದಲಿಗೆ ವಿದ್ಯುತ್ ಟಿಸಿ ಬಳಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ತಕ್ಷಣ ನಂದಿಸುವಲ್ಲಿ ವಿಳಂಬಂದಿದ್ದಾಗಿ ನೋಡನೋಡುತ್ತಿದ್ದಂತೆ ಪಕ್ಕದ ಕಬ್ಬಿನ ಗದ್ದೆಗೆ ಬೆಂಕಿ ಹೊತ್ತಿಕೊಂಡಿದೆ. ಕಬ್ಬಿನ ಗದ್ದೆಗೆ ಹೊತ್ತಿಕೊಂಡ ಬಳಿಕ ಬೆಂಕಿಯ ಕೆನ್ನಾಲೆಗೆ ಮುಗಿಲೆತ್ತರಕ್ಕೆ ಎದ್ದು ಇಡೀ ಎಂಟು ಎಕರೆ ಜಮೀನು ವ್ಯಾಪಿಸಿ ಹೊತ್ತಿ ಉರಿದಿದೆ.
ಒಂದು ಕಡೆ ಬರಗಾಲ ಆವರಿಸಿದೆ. ಇಂಥ ಬರಗಾಲದಲ್ಲೂ ಕಷ್ಟಪಟ್ಟು ಸಾಲ ಮಾಡಿಕೊಂಡು ಬೆಳೆದಿದ್ದ ಕಬ್ಬು ಬೆಂಕಿ ಆಹುತಿಯಾಗಿರುವುದು ಕಂಡು ರೈತರು ಕಂಗಾಲಾಗಿದ್ದಾರೆ. ಹಸಿರಾಗಿ ಬೆಳೆದುನಿಂತಿದ್ದ ಕಬ್ಬಿನ ಗದ್ದೆ ಬೆಂಕಿಗೆ ಸುಟ್ಟು ಕರಕಲಾಗಿದ್ದು ಕಂಡು ರೈತರು ಕಣ್ಣೀರು ಸುರಿಸಿದದ್ದಾರೆ.
ಘಟನೆ ಮಾಹಿತಿ ಬಳಿಕ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದಾವಿಸಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲು ಹರಸಾಹಸಪಟ್ಟರಾದರೂ ಅಷ್ಟರಲ್ಲೇ ಬೆಂಕಿ ಇಡೀ ಜಮೀನಿಗೆ ವ್ಯಾಪಿಸಿ ಸುಟ್ಟು ಕರಕಲಾಗಿತ್ತು. ಕೈಗೆ ಬಂದ ತುತ್ತು ಬಾಯಿಗೆ ಬರಲಿ. ಸಾಲ ಮಾಡಿಕೊಂಡು ಬೆಳೆದಿದ್ದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿವೆ.