ಕೈಗಾ ಯೋಜನೆಗೆ ಬಿಗ್ ರಿಲೀಫ್‌: ಭಾರಿ ವಾಹನಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್,ಆದರೆ ಒಂದು ಷರತ್ತು!

Kannadaprabha News   | Kannada Prabha
Published : Oct 25, 2026, 01:26 PM IST
Kaiga Nuclear Project Gets Green Signal for Heavy Vehicle

ಸಾರಾಂಶ

Kaiga Nuclear Project ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6ನೇ ಘಟಕಗಳ ಕಾಮಗಾರಿಗಾಗಿ ಕೈಗಾ-ಕಾರವಾರ ರಾಜ್ಯ ಹೆದ್ದಾರಿಯಲ್ಲಿ ಭಾರಿ ವಾಹನಗಳ ಸಂಚಾರದ ಮೇಲಿದ್ದ ನಿರ್ಬಂಧ ತೆರವು.. ಆದರೆ ಒಂದ ಷರತ್ತಿದೆ. ರಸ್ತೆ ದುರಸ್ತಿಯ ಜವಾಬ್ದಾರಿಯನ್ನು ಎನ್‌ಪಿಸಿಐಎಲ್ ವಹಿಸಿಕೊಂಡಿದೆ.

ಕಾರವಾರ (ಅ.25): ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6ನೇ ಘಟಕಗಳ ಕಾಮಗಾರಿಗೆ ಅಗತ್ಯವಾದ ನಿರ್ಮಾಣ ಸಾಮಗ್ರಿಗಳ ಸಾಗಣೆಗೆ ಅನುಕೂಲವಾಗುವಂತೆ ಕೈಗಾ- ಕಾರವಾರ ರಾಜ್ಯ ಹೆದ್ದಾರಿ 06ರಲ್ಲಿ ಭಾರಿ ವಾಹನಗಳ ಸಂಚಾರದ ಮೇಲಿದ್ದ ನಿರ್ಬಂಧವನ್ನು ಜಿಲ್ಲಾಧಿಕಾರಿಗಳು ತೆರವುಗೊಳಿಸಿದ್ದಾರೆ.

ತಿ ಆಕ್ಸಲ್‌ಗೆ ಗರಿಷ್ಠ 15 ಮೆಟ್ರಿಕ್ ಟನ್ ಭಾರ ಸಾಗಿಸುವ ಷರತ್ತು

ಆದರೆ, ಪ್ರತಿ ಆಕ್ಸಲ್‌ಗೆ ಗರಿಷ್ಠ 15 ಮೆಟ್ರಿಕ್ ಟನ್ ಭಾರ ಸಾಗಿಸುವ ಷರತ್ತು ವಿಧಿಸಲಾಗಿದ್ದು, ಇದನ್ನು ಪಾಲಿಸುವ ಜವಾಬ್ದಾರಿಯನ್ನು ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ವಹಿಸಿಕೊಂಡಿದೆ.

ರಾಷ್ಟ್ರೀಯ ಪ್ರಾಮುಖ್ಯತೆಯ ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6ನೇ ಘಟಕಗಳ ಕಾಮಗಾರಿಯನ್ನು 2031- 32ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ಹಿನ್ನೆಲೆ ಯೋಜನೆಗೆ ಅಗತ್ಯವಾದ ನಿರ್ಮಾಣ ಸಾಮಗ್ರಿ ಹಾಗೂ ಇತರ ಸರಕುಗಳ ಸಾಗಣೆಗೆ ಕೈಗಾ- ಕಾರವಾರ ರಾಜ್ಯ ಹೆದ್ದಾರಿ ಪ್ರಮುಖ ಸಂಪರ್ಕ ಮಾರ್ಗವಾಗಿದೆ.

ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದ ಡಿಸಿ

ಹಿಂದೆ ರಸ್ತೆಯ ಸ್ಥಿತಿ ಹದಗೆಟ್ಟಿದ್ದ ಹಿನ್ನೆಲೆ ಜಿಲ್ಲಾಧಿಕಾರಿಗಳು ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ, ರಸ್ತೆ ದುರಸ್ತಿ ಮಾಡುವಂತೆ ಎನ್‌ಪಿಸಿಐಎಲ್‌ಗೆ ಸೂಚಿಸಿದ್ದರು. ಅದರಂತೆ ದುರಸ್ತಿ ಕಾರ್ಯ ಪೂರ್ಣಗೊಂಡ ಬಳಿಕ ಜಿಲ್ಲಾ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆ ಪರಿಶೀಲನೆ ನಡೆಸಿದ್ದರು. ಬಳಿಕ ಅ. 16ರಂದು ಜಿಲ್ಲಾಧಿಕಾರಿಗಳು ಸಂಚಾರ ನಿರ್ಬಂಧವನ್ನು ತೆರವುಗೊಳಿಸಿದ್ದಾರೆ.

ಹೆದ್ದಾರಿಯ ಕೆರವಡಿ- ಮಲ್ಲಾಪುರ ನಡುವಿನ ರಸ್ತೆ ಪುನರ್‌ನಿರ್ಮಾಣ ಮತ್ತು ವಿಸ್ತರಣಾ ಕಾಮಗಾರಿಯನ್ನು ಎನ್‌ಪಿಸಿಐಎಲ್ ಗುತ್ತಿಗೆ ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಜಿಲ್ಲಾಧಿಕಾರಿಗಳು ವಿಧಿಸಿರುವ ಷರತ್ತುಗಳಂತೆ ನಿರ್ಮಾಣ ಸಾಮಗ್ರಿ ಸಾಗಿಸುವ ವಾಹನಗಳಲ್ಲಿ ಪ್ರತಿ ಆಕ್ಸಲ್‌ಗೆ 15 ಮೆಟ್ರಿಕ್ ಟನ್ ಮಿತಿಯನ್ನು ಮೀರದಂತೆ ಸಂಸ್ಥೆ ಕ್ರಮ ಕೈಗೊಂಡಿದೆ.

ಮುಂದಿನ ದಿನಗಳಲ್ಲಿ ರಸ್ತೆಗೆ ಮತ್ತೆ ದುರಸ್ತಿ ಅಗತ್ಯವಿದ್ದಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆಯೂ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ ಎಂದು ಎನ್‌ಪಿಸಿಐಎಲ್ ಪ್ರಕಟಣೆ ತಿಳಿಸಿದೆ.

PREV
Read more Articles on
click me!

Recommended Stories

ಸ್ಟಿಂಗ್ ಆಪರೇಷನ್ ತನಿಖೆಯಲ್ಲೇ ವ್ಯವಸ್ಥಿತ ಷಡ್ಯಂತ್ರ, ಇಡೀ ಪ್ರಕರಣ ಉಲ್ಟಾ, ಜೆಡಿಎಸ್ ಸ್ಫೋಟಕ ಆರೋಪ
ಕಲಬುರಗಿ: ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌ನಿಂದ 8 ಎಕರೆ ಕಬ್ಬು ಸುಟ್ಟು ಕರಕಲು, ಬರಗಾಲದ ನಡುವೆ ಬೆಳೆದಿದ್ದ ರೈತ ಕಣ್ಣೀರು!