ಚಿಕ್ಕಮಗಳೂರಿನ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕ್ಷಾಂಕಿ ಆಗಿರುವ ವೈ.ಎಸ್.ವಿ. ದತ್ತಾಗೆ ಚುನಾವಣೆ ಖರ್ಚಿಗೆ ಎಂದೇ ಅಭಿಮಾನಿಯೊಬ್ಬರು 101 ರೂಪಾಯಿ ಹಣವನ್ನು ನೀಡಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮಾ.13): ಚಿಕ್ಕಮಗಳೂರು ಜಿಲ್ಲೆಯಲ್ಲಿ ದಿನದಿಂದಕ್ಕೆ ಚುನಾವಣಾ ಅಖಾಡ ರಂಗೇರುತ್ತಿದೆ. ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕ್ಷಾಂಕಿ ಆಗಿರುವ ವೈ.ಎಸ್.ವಿ. ದತ್ತಾಗೆ ಚುನಾವಣೆ ಖರ್ಚಿಗೆ ಎಂದೇ ಅಭಿಮಾನಿಯೊಬ್ಬರು 101 ರೂಪಾಯಿ ಹಣವನ್ನು ನೀಡಿದ್ದಾರೆ.
101 ರೂಪಾಯಿ ದಾನ ನೀಡಿದ ಅಭಿಮಾನಿಯಿಂದ ಶುಭಹಾರೈಕೆ :
ಜಿಲ್ಲೆಯ ಕಡೂರು ತಾಲೂಕಿನ ಶಾಸಕ ಹಾಗೂ ದತ್ತ ಮೇಷ್ಟ್ರು ಎಂದೇ ಖ್ಯಾತಿಯಾಗಿರುವ ವೈ.ಎಸ್.ವಿ. ದತ್ತ ಅವರಿಗೆ ಚುನಾವಣೆ ಖರ್ಚಿಗಾಗಿ ಅಭಿಮಾನಿಯೊಬ್ಬ 101 ರೂಪಾಯಿ ಹಣ ನೀಡಿ ಶುಭ ಕೋರಿದ್ದಾರೆ. ಕಳೆದ 50 ವರ್ಷಗಳಿಂದ ಜೆಡಿಎಸ್ ನ ಕಟ್ಟಾಳಾಗಿದ್ದ ವೈ.ಎಸ್.ವಿ.ದತ್ತ ಮಾಜಿ ಪ್ರಧಾನಿ ದೇವೇಗೌಡರ ಮಾನಸ ಪುತ್ರನಂತೆಯೇ ಇದ್ದರು. ಆದರೆ, ಆದರೆ, ಕಳೆದ ಎರಡು ತಿಂಗಳ ಹಿಂದೆ ಜೆ.ಡಿ.ಎಸ್. ತೊರೆದು ಕಾಂಗ್ರೆಸ್ ಸೇರಿದ್ದರು. ಈಗ ಕಡೂರಿನ ಕಾಂಗ್ರೆಸ್ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದಾರೆ. ಹಾಗಾಗಿ, ಕಡೂರು ತಾಲೂಕಿನ ಗಿರಿಯಾಪುರ ಮೂಲದ ವ್ಯಕ್ತಿಯೊಬ್ಬರು 101 ರೂಪಾಯಿ ದಾನ ನೀಡಿ ಚುನಾವಣೆಗೆ ಶುಭ ಕೋರಿದ್ದಾರೆ.
Party Rounds: ಮಗನಿಗೆ ಟಿಕೆಟಿಲ್ಲ ಅಂದಿದಕ್ಕೆ ಕೋಪ, ಬಿಜೆಪಿ ತೊರೆಯುತ್ತಾರಾ ಸೋಮಣ್ಣ?
ಅಂಚೆ ಮೂಲಕ ಪತ್ರದ ಜೊತೆ ಹಣ ಕಳಿಸಿರುವ ಅಭಿಮಾನಿ:
ಕ್ಷೇತ್ರ ಹಾಗೂ ಮತದಾರರ ಮೇಲೆ ನಿಮಗೆ ಇದ್ದ ಪ್ರೀತಿ, ಕಾಳಜಿ, ಅಭಿಮಾನ ಹಾಗೂ ನೀವು ಮಾಡಿದ ಅಭಿವೃದ್ಧಿ ನೆನಪಿನಲ್ಲಿ ಉಳಿಯುವಂತದ್ದು. ಆಳ್ವಾಸ್ ನುಡಿಸಿರಿಯಲ್ಲಿ ಅಖಂಡ ಕರ್ನಾಟಕದ ವಿಷಯವಾಗಿ ನೀವು ಬಿತ್ತರಿಸಿದ ನಾಡಿನ ಅಖಂಡತೆಯ ವಿಚಾರಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ನಿಮಗಿರುವ ಮಳೆ ನೀರು ಶೇಖರಣೆ ಹಾಗೂ ಪ್ರಕೃತಿ ಉಳಿಸುವ ಪರಿಕಲ್ಪನೆ ಜನರನ್ನ ಆಕರ್ಷಿಸಿದೆ. ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವ ನಿಮ್ಮ ವ್ಯಕ್ತಿತ್ವಕ್ಕೆ ಜನ ನಿಮ್ಮ ಜೊತೆಗಿದ್ದಾರೆ. ನಿಮಗೆ ಜನಸಾಮಾನ್ಯರ ಸಮಸ್ಯೆಯನ್ನ ಬಗೆಹರಿಸುವ ಹೊಸ ಜವಾಬ್ದಾರಿ ಇದೆ, ಅದನ್ನ ನಿರ್ವಹಿಸುತ್ತೀರಾ ಎಂದು ನಂಬಿದ್ದೇವೆ ಎಂದು ಪತ್ರ ಬರೆದಿದ್ದಾರೆ.
PARTY ROUNDS: ಧ್ರುವನಾರಾಯಣ ನಿಧನರಾದ ಬೆನ್ನಲ್ಲೇ ಕಗ್ಗಂಟಾದ ನಂಜನಗೂಡು ಟಿಕೆಟ್!
ನಾನು ಆರ್ಥಿಕವಾಗಿ ಶಕ್ತಿವಂತನಲ್ಲ. ಹಾಗಾಗಿ, ನಿಮಗೆ ಚಿಕ್ಕ ಕಾಣಿಕೆ ನೀಡಿದ್ದೇನೆ. ನಮ್ಮ ಮನೆಯವರ ಎಲ್ಲಾ ಮತಗಳು ನಿಮಗೆ. ಸಮಾನಮನಸ್ಕರಾದ ಜೊತೆ ಮಾತನಾಡಿ ತಮ್ಮ ಕೈ ಬಲಗೊಳ್ಳಲು ಸಹಕರಿಸುತ್ತೇವೆ ಎಂದು ಪತ್ರ ಬರೆದು, 101 ರೂಪಾಯಿ ಹಣ ನೀಡಿ ವೈ.ಎಸ್.ವಿ. ದತ್ತ ಅವರಿಗೆ ಶುಭ ಕೋರಿದ್ದಾರೆ.