ಕುದುರೆ ವ್ಯಾಪಾರ ಪ್ರಜಾಪ್ರಭುತ್ವಕ್ಕೆ ಮಾರಕ: ಕೆ.ಸಿ.ವೇಣುಗೋಪಾಲ್

By Web DeskFirst Published Dec 2, 2019, 11:18 AM IST
Highlights

ಗುಜರಾತ್, ಮಹಾರಾಷ್ಟ್ರ ಉಪಚುನಾವಣೆಯಲ್ಲಿ ಪಕ್ಷಾಂತರಿಗಳಿಗೆ ಪಾಠ ಕಲಿಸಲಾಗಿದೆ| ಕರ್ನಾಟಕದಲ್ಲೂ ಪಕ್ಷಾಂತರಿಗಳಿಗೆ ಜನ ಪಾಠ ಕಲಿಸುತ್ತಾರೆ| ರಾಜ್ಯ ಸರ್ಕಾರ ಸರಿಯಾಗಿ ನೆರೆಸಂತ್ರಸ್ತರ ಸಹಾಯಕ್ಕೆ ಧಾವಿಸಿಲ್ಲ| ಸತೀಶ್ ಜಾರಕಿಹೊಳಿ‌ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ್ದರು| ಕರ್ನಾಟಕದಲ್ಲಿ ಶಾಸಕರ ಕುದುರೆ ವ್ಯಾಪಾರ ಅಮಿತ್ ಶಾ ನೇತೃತ್ವದಲ್ಲಿ ನಡೆದಿದೆ|

ಬೆಳಗಾವಿ(ಡಿ.02): ಅನರ್ಹ ಶಾಸಕರು ಕಾಂಗ್ರೆಸ್ ಪಕ್ಷದ ಬೆನ್ನಿಗೆ ಚೂರಿ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದು ಆಯ್ಕೆಯಾಗಿ ಮೋಸ  ಮಾಡಿದ್ದಾರೆ. ಇವರೆಲ್ಲ ಕುದುರೆ ವ್ಯಾಪಾರದ ಒಂದು ಭಾಗವಾಗಿದ್ದಾರೆ. ಹೀಗಾದರೆ ಪ್ರಜಾಪ್ರಭುತ್ವದ ಅರ್ಥ ಏನು? ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಹೇಳಿದ್ದಾರೆ. 

ಸೋಮವಾರ ಗೋಕಾಕ್‌ನಲ್ಲಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಬಾರಿ ಗುಜರಾತ್, ಮಹಾರಾಷ್ಟ್ರ ಉಪಚುನಾವಣೆಯಲ್ಲಿ ಪಕ್ಷಾಂತರಿಗಳಿಗೆ ಅಲ್ಲಿನ ಜನ ಒಳ್ಳೆಯ ಪಾಠವನ್ನು ಕಲಿಸಲಾಗಿದೆ. ಅದೇ ರೀತಿ ಕರ್ನಾಟಕದಲ್ಲೂ ಪಕ್ಷಾಂತರಿಗಳಿಗೆ ಜನ ಪಾಠ ಕಲಿಸುತ್ತಾರೆ. ಕುದುರೆ ವ್ಯಾಪಾರ ನಡೆಯುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರವಾಹದಿಂದ ಬೆಳಗಾವಿ ಜಿಲ್ಲೆ ಅದರಲ್ಲೂ ಗೋಕಾಕ್ ನಲ್ಲಿ ಜನ ಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಸರಿಯಾಗಿ ನೆರೆಸಂತ್ರಸ್ತರ ಸಹಾಯಕ್ಕೆ ಧಾವಿಸಿಲ್ಲ. ಸತೀಶ್ ಜಾರಕಿಹೊಳಿ‌ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ್ದರು. ಆ ವೇಳೆ ಗೋಕಾಕ್ ಬಿಜೆಪಿ ಅಭ್ಯರ್ಥಿ ಪ್ರವಾಹ ವೇಳೆ ಎಲ್ಲಿ ಹೋಗಿದ್ದರು. ಮುಂಬೈನಲ್ಲಿ ಐಶಾರಾಮಿ ಹೋಟೆಲ್ ನಲ್ಲಿ ಹಾಯಾಗಿ ಕಾಳ ಕಳೆದಯುತ್ತಿದ್ದರು. ಕರ್ನಾಟಕದಲ್ಲಿ ಶಾಸಕರ ಕುದುರೆ ವ್ಯಾಪಾರ ಅಮಿತ್ ಶಾ ನೇತೃತ್ವದಲ್ಲಿ ನಡೆದಿದೆ ಎಂದು ಕೆ.ಸಿ.ವೇಣುಗೋಪಾಲ್ ಆರೋಪಿಸಿದ್ದಾರೆ. 

ಮಹಾರಾಷ್ಟ್ರದಲ್ಲಿ ಕೊನೆಗೂ ಪ್ರಜಾಪ್ರಭುತ್ವದ ಗೆಲುವಾಗಿದೆ. ಅದೇ ರೀತಿ ಕರ್ನಾಟಕದಲ್ಲೂ ಆಗುತ್ತೆ, ನಮ್ಮ ನಿಲುವು ಸ್ಪಷ್ಟವಾಗಿದೆ. ನಾವು ಬಿಜೆಪಿ ವಿರುದ್ಧ ಇದ್ದೇವೆ, ಅಧಿಕಾರದ ಬಿಜೆಪಿಯನ್ನ ದೂರವಿಡಲು ಎಲ್ಲ ರೀತಿ ದಾರಿಗಳು ತೆರೆದಿವೆ ಎಂದು ಹೇಳಿದ್ದಾರೆ. 

ಮತ್ತೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಆದ್ರೆ ಸಿದ್ದರಾಮಯ್ಯ ಹೊರಗಿಬೇಕು ಅಂತಾ ಜೆಡಿಎಸ್ ಪ್ರಸ್ತಾಪ ಇಟ್ಟಿದೆಯಾ ಅಂತಾ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಹಾಗೂ ಪರಮೇಶ್ವರ್ ಎಲ್ಲರೂ ಒಗ್ಗಟ್ಟಾಗಿದ್ದಾರೆ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

click me!