'ಅನರ್ಹ ಶಾಸಕರಿಗೆ ಮತದಾರರು ತಕ್ಕಪಾಠ ಕಲಿಸಲಿದ್ದಾರೆ'

By Web DeskFirst Published Nov 21, 2019, 8:25 AM IST
Highlights

ಅನರ್ಹ ಶಾಸಕರಿಗೆ ಹಾಗೂ ಅವರ ಬೆಂಬಲಿಗರಿಗೆ ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಮತದಾರರು ತುದಿಗಾಲ ಮೇಲೆ ನಿಂತಿದ್ದಾರೆ ಎಂದ  ಕೆ.ಬಿ. ಕೋಳಿವಾಡ| ಕಾಂಗ್ರೆಸ್‌ ಕಾರ್ಯಕರ್ತರೊಂದಿಗೆ ಕೋಳಿವಾಡ ಸಮಾಲೋಚನೆ| ಈ ಬಾರಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯಥಿಯಾಗಿರುವ ತಮಗೆ ಮತ ನೀಡಲು ಕ್ಷೇತ್ರದ ಮತದಾರರು ನಿರ್ಧರಿಸಿರುವುದು ಕಂಡು ಬಂದಿದೆ ಎಂದ ಕೋಳಿವಾಡ|

ಕುಮಾರಪಟ್ಟಣ(ನ.21): ಅನರ್ಹ ಶಾಸಕರಿಗೆ ಹಾಗೂ ಅವರ ಬೆಂಬಲಿಗರಿಗೆ ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಮತದಾರರು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಹಾಗೂ ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ. ಕೋಳಿವಾಡ ಅವರು ಹೇಳಿದ್ದಾರೆ. 

ಡಿ. 5 ರಂದು ನಡೆಯಲಿರುವ ವಿಧಾನಸಭೆ ಉಪ ಚುನಾವಣೆ ನಿಮಿತ್ತ ಸಮೀಪದ ದೇವಗೋಂಡನಕಟ್ಟಿ, ತರೇದಹಳ್ಳಿ, ಹನುಮನಹಳ್ಳಿ, ಮುದೇನೂರು, ಮಲಕನಹಳ್ಳಿ, ಮುಷ್ಠೂರು, ಮಣಕೂರು, ಲಿಂಗದಹಳ್ಳಿ, ನಂದಿಹಳ್ಳಿ ಗ್ರಾಮಗಳಲ್ಲಿ ಮತಯಾಚಿಸಿದ ನಂತರ ಕಮದೋಡ ಗ್ರಾಮದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರೊಂದಿಗೆ ಸಮಾಲೋಚನೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಚುನಾವಣೆಯ ನಿಮಿತ್ತ ನಾನು ಈಗಾಗಲೆ ರಾಣಿಬೆನ್ನೂರು ನಗರ ಹಾಗೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸುತ್ತ ಮತಯಾಚಿಸುತ್ತಿದ್ದು, ಕ್ಷೇತ್ರದ ವ್ಯಾಪ್ತಿಯಲ್ಲಿನ ಅನೇಕ ಮತದಾರರು ಅನರ್ಹಗೊಂಡಿರುವವರಿಗೆ ಮತ ನೀಡಿದ್ದರ ಫಲವಾಗಿ ತಮಗಾಗಿರುವ ತಪ್ಪಿನ ಅರಿವನ್ನು ತಮ್ಮೆದುರು ಹೇಳಿಕೊಂಡಿದ್ದಾರಲ್ಲದೆ, ಈ ಬಾರಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯಥಿಯಾಗಿರುವ ತಮಗೆ ಮತ ನೀಡಲು ಕ್ಷೇತ್ರದ ಮತದಾರರು ನಿರ್ಧರಿಸಿರುವುದು ಕಂಡು ಬಂದಿದೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣತಮ್ಮಣ್ಣ ಭಾರ್ಕಿ, ಚಂದ್ರಶೇಖರ ಬಣಕಾರ, ಶಾಂತನಗೌಡ ಪಾಟೀಲ, ಆರ್‌.ಎಸ್‌. ರಂಗರಡ್ಡಿ, ಕೆಪಿಸಿಸಿ ಸದಸ್ಯರಾದ ಬಸನಗೌಡ ಮರದ, ತಿರುಪತಿ ಅಜ್ಜನವರ, ಗ್ರಾಮ ಪಂಚಾಯಿತಿ ಸದಸ್ಯ ಯಲ್ಲಪ್ಪ ಕೆಂಚರಡ್ಡಿ, ಸುಶೀಲಮ್ಮ ಬನ್ನಿಕೋಡ, ಸೋಮಣ್ಣ ರಂಗರಡ್ಡಿ, ಮಂಜುನಾಥ ಜಕ್ಕರಡ್ಡಿ, ಅಡಿವೆಪ್ಪ ಹಳೆಮನಿ, ಗಂಗಮ್ಮ ಪೂಜಾರ, ರಮೇಶ ಬಿದರಿ ಸೇರಿದಂತೆ ಹಲವರಿದ್ದರು.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ. 

click me!