ಲಾಕ್‌ಡೌನ್‌ ಎಫೆಕ್ಟ್‌: 'ರಂಜಾನ್‌ ಹಬ್ಬದ ವೇಳೆ ಮನೆಯಲ್ಲೇ ನಮಾಜ್‌ ಮಾಡೋಣ'

By Kannadaprabha NewsFirst Published Apr 19, 2020, 10:05 AM IST
Highlights

ರಂಜಾನ್‌ ಆಚರಣೆಯಲ್ಲಿ ಎಲ್ಲ ಬಾಂಧವರು ಮನೆಯಲ್ಲಿಯೇ ನಮಾಜ್‌| ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿದ ಜುಮ್ಮಾ ಮಸೀದಿ ಕಮಿಟಿ ಮತ್ತು ಜಮೀಯತೆ ಉಲಮಾ ಎ ಹಿಂದ್‌| ರಂಜಾನ್‌ ಆಚರಣೆ ಕುರಿತು ಅಮೀರೆ ಶರಿಯತ್‌ ಅವರ ನಿರ್ದೇಶನದಂತೆ ಪ್ರತಿಯೊಬ್ಬ ಮುಸಲ್ಮಾನ್‌ ಬಾಂಧವರು ಕಟ್ಟುನಿಟ್ಟಾಗಿ ರೋಜಾ ಮಾಡುವುದು| ದಿನದ 5 ಹೊತ್ತು ನಮಾಜ್‌ ಮತ್ತು ತರಾವಿಹ್‌ (20) ರಕಾತ ನಮಾಜ್‌ ಕೂಡ ತಮ್ಮ ಮನೆಯಲ್ಲಿ ಕಡ್ಡಾಯವಾಗಿ ಮಾಡಬೇಕು|
 

ಗದಗ(ಏ.19): ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರ ಘೋಷಿಸಿರುವ ಲಾಕ್‌ಡೌನ್‌ ಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಈ ಸಲದ ರಂಜಾನ್‌ ಆಚರಣೆಯಲ್ಲಿ ಎಲ್ಲ ಬಾಂಧವರು ಮನೆಯಲ್ಲಿಯೇ ನಮಾಜ್‌ ಮಾಡಬೇಕು ಎಂದು ಜುಮ್ಮಾ ಮಸೀದಿ ಕಮಿಟಿ ಮತ್ತು ಜಮೀಯತೆ ಉಲಮಾ ಎ ಹಿಂದ್‌ ಜಿಲ್ಲೆಯ ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿ, ರಂಜಾನ್‌ ಆಚರಣೆ ಕುರಿತು ಅಮೀರೆ ಶರಿಯತ್‌ ಅವರ ನಿರ್ದೇಶನದಂತೆ ಪ್ರತಿಯೊಬ್ಬ ಮುಸಲ್ಮಾನ್‌ ಬಾಂಧವರು ಕಟ್ಟುನಿಟ್ಟಾಗಿ ರೋಜಾ ಮಾಡುವುದು, ದಿನದ 5 ಹೊತ್ತು ನಮಾಜ್‌ ಮತ್ತು ತರಾವಿಹ್‌ (20) ರಕಾತ ನಮಾಜ್‌ ಕೂಡ ತಮ್ಮ ಮನೆಯಲ್ಲಿ ಕಡ್ಡಾಯವಾಗಿ ಮಾಡಬೇಕು.

ಗದಗನಲ್ಲಿ 3ನೇ ಕೊರೋನಾ ಪ್ರಕರಣ: ಜಿಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್‌-19 ಟೆಸ್ಟ್‌ ಆರಂಭ

ನಮಾಜ್‌ ಮಾಡುವಾಗ ತಮ್ಮ ಅಕ್ಕಪಕ್ಕದ ಮನೆಯವರನ್ನು ಸೇರಿಸಿ ಅಥವಾ ಗುಂಪು ಸೇರಿ ಮಾಡಬಾರದು. ರಂಜಾನ್‌ ತಿಂಗಳಿನಲ್ಲಿ ತಮ್ಮ ಜಕಾತಿನ ಒಂದು ಪಾಲನ್ನು ಬಡವರಿಗೆ ಮತ್ತು ಮದರಸಗಳಿಗೆ ದಾನ ಮಾಡಬೇಕು. ಪ್ರತಿಯೊಬ್ಬರು ಸರ್ಕಾರದ ಆದೇಶಗಳನ್ನು ಪಾಲನೆ ಮಾಡಬೇಕು. ಜಿಲ್ಲಾಡಳಿತದ ಕ್ರಮಗಳಿಗೆ ಜುಮ್ಮಾ ಮಸೀದಿಯಿಂದ ಸಂಪೂರ್ಣ ಬೆಂಬಲ ನೀಡಲಾಗುವುದು. ಹಾಗೂ ಎಲ್ಲ ಮುಸ್ಲಿಂ ಸಮುದಾಯದವರು ಇದನ್ನು ಪಾಲಿಸಬೇಕು ಎಂದು ಜುಮ್ಮಾ ಮಸೀದಿ ಕಮಿಟಿ ಅಧ್ಯಕ್ಷ ಸಾಧಿಕ ನರಗುಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿರುವುದಾಗಿ ತಿಳಿಸಲಾಗಿದೆ. 

ಸಭೆಯಲ್ಲಿ ಜುಮ್ಮಾ ಮಸೀದಿ ಕಾರ್ಯದರ್ಶಿ ಮಕ್ಬೂಲ್‌ಸಾಬ್‌ ಶಿರಹಟ್ಟಿ, ಅಕ್ಬರ್‌ಸಾಬ್‌ ಬಬರ್ಚಿ, ಅಬ್ದುಲ್‌ ರಹಿಂಸಾಬ್‌ ಚಂದುನವರ, ಜಕ್ರಿಯಾಸಾಬ್‌ ಖಾಜಿ, ಶಮುಶುದ್ದೀನ್‌ ಅಣ್ಣಿಗೇರಿ, ಆರೀಫ್‌ ಹುಸೇನ್‌ ಧಾರವಾಡ, ಇನಾಯತುಲ್ಲಾ ಬಳಗಾನೂರ, ಶಬ್ಬೀರ್‌, ಹಫೀಜ್‌, ರಿಯಾಜ್‌ ಬ್ಯಾಳಿರೊಟ್ಟಿ, ರಿಯಾಜ್‌, ಅಹ್ಮದ್‌ ಅತ್ತಾರ್‌, ರಶೀದ್‌ ಮದರಂಗಿ, ಇಸ್ಮಾಯಿಲ್‌ ಮದರಂಗಿ, ಬರ್ಕತ್‌ಅಲಿ ಮುಲ್ಲಾ, ಶಫಿಅಹ್ಮದ್‌ ಕುದರಿ, ಅಮ್ಜದ್‌ ಅಲಿ ಮುಲ್ಲಾ, ಶಿರಾಜ್‌ ಬಳ್ಳಾರಿ ಸೇರಿದಂತೆ ಪದಾಧಿಕಾರಿಗಳು ಇದ್ದರು.
 

click me!