ಸಮಾಜದಲ್ಲಿ ಸರ್ವರಿಗೂ ಗೌರವ ನೀಡಿ ಸೌಹಾರ್ದತೆ ಮತ್ತು ಪ್ರೀತಿಯಿಂದ ಬದುಕುವ ಕಲೆ ಮೈಗೂಡಿಸಿಕೊಳ್ಳಬೇಕು. ಒಗ್ಗಟ್ಟು ಇದ್ದಲ್ಲಿ ಅಭಿವೃದ್ಧಿಗೆ ಯಾವುದೇ ತಡೆಯಾಗದು: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್
ಮಂಗಳೂರು(ಆ.07): ಸಮಾಜದಲ್ಲಿ ಸರ್ವರಿಗೂ ಗೌರವ ನೀಡಿ ಸೌಹಾರ್ದತೆ ಮತ್ತು ಪ್ರೀತಿಯಿಂದ ಬದುಕುವ ಕಲೆ ಮೈಗೂಡಿಸಿಕೊಳ್ಳಬೇಕು. ಒಗ್ಗಟ್ಟು ಇದ್ದಲ್ಲಿ ಅಭಿವೃದ್ಧಿಗೆ ಯಾವುದೇ ತಡೆಯಾಗದು ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ಗುರುಪುರ ಕೈಕಂಬದ ಖಾಸಗಿ ಸಭಾಗೃಹದಲ್ಲಿ ಶನಿವಾರ ಎಂಜಿಎಂ ತಾಲೀಮ್ ಸ್ಪೋಟ್ಸ್‌ರ್ ಸಂಸ್ಥೆಯು ಗುರುಪುರ ಮತ್ತು ಅಡ್ಡೂರು ಸಮಸ್ತ ನಾಗರಿಕರ ಪರವಾಗಿ ಆಯೋಜಿಸಿದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು: ನಳಿನ್ ಕುಮಾರ್ ಕಟೀಲ್
ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಹಾಜಿ ಎಂ.ಎಚ್. ಮೊಹಿದ್ದೀನ್, ಹಿರಿಯರಾದ ಅಬ್ದುಲ್ ಕರೀಂ ಅಡ್ಡೂರು, ಅಂತಾರಾಷ್ಟ್ರೀಯ ಖ್ಯಾತಿಯ ಹೋಸ್ಟ್ ದೋಸ್ತ್ ಶಾಹಿಲ್ ಝಾಹಿರ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಕೆಪಿಸಿಸಿ ಸದಸ್ಯ ಪೃಥ್ವಿರಾಜ್, ಉದ್ಯಮಿ ಡಾ. ಶಾಫಿ ಬಬ್ಬುಕಟ್ಟೆ ಪ್ರಸ್ತಾವಿಕ ಮಾತನಾಡಿದರು.
ಕೊರೊನಾ ವಾರಿಯರ್ ಖ್ಯಾತಿಯ ವೈದ್ಯ ಡಾ.ಇ.ಕೆ.ಎ. ಸಿದ್ದೀಕ್ ಅಡ್ಡೂರು ಸ್ವಾಗತಿಸಿದರು. ಬಹುಭಾಷಾ ಕವಿ ಮೊಹಮ್ಮದ್ ಬಡ್ಡೂರು ಪ್ರಾರ್ಥಿಸಿದರು. ತಾಲೀಮ್ ಮಾಸ್ಟರ್ ಎಂ.ಜಿ. ಶಾಹುಲ್ ಹಮೀದ್, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಕೆಪಿಸಿಸಿ ಸದಸ್ಯ ಪೃಥ್ವಿರಾಜ್, ಮೆಲ್ವಿನ್ ಡಿಸೋಜ ನೀರುಮಾರ್ಗ, ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ, ಮೆಲ್ವಿನ್ ಗುರುಪುರ, ಸಾಹುಲ್ ಹಮೀದ್ ಮೆಟ್ರೋ, ಯುವ ಉದ್ಯಮಿ ಅಬ್ದುಲ್ ಲತೀಫ್ ಗುರುಪುರ ಮತ್ತಿತರರು ಇದ್ದರು.