ಜೋಗಿಮಟ್ಟಿ ಅರಣ್ಯಧಾಮದಲ್ಲಿ ನೀರಿಗಾಗಿ ವನ್ಯಜೀವಿಗಳ ಹಾಹಾಕಾರ; ನೀರಿಗಾಗಿ ನಾಡಿಗೆ ಆಗಮನ!

By Sathish Kumar KH  |  First Published Mar 3, 2024, 6:37 PM IST

ಬೇಸಿಗೆ ಆರಂಭಕ್ಕೂ ಮುನ್ನವೇ ಚಿತ್ರದುರ್ಗದ ಜೋಗಿಮಟ್ಟಿ ಅರಣ್ಯಧಾಮದಲ್ಲಿ ಎಲ್ಲ ವನ್ಯಜೀವಿಗಳಿಗೆ ನೀರಿನ ಹಾಹಾಕಾರ ಶುರುವಾಗಿದೆ. 


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಮಾ.3): ಬೇಸಿಗೆ ಬಂತಂದ್ರೆ ಜನರು ನೀರಿನ ಅಭಾವ ಎದುರಿಸೋದು ಸಹಜ. ಆದ್ರೆ ಚಿತ್ರದುರ್ಗದ ಜೋಗಿಮಟ್ಟಿಯಲ್ಲಿರುವ ವನ್ಯಜೀವಿಗಳಿಗೂ ನೀರಿನ ಹಾಹಾಕಾರ ಶುರುವಾಗಿದೆ. ಹೀಗಾಗಿ ನೀರನ್ನು ಹರಸಿ ಕಾಡಿನಿಂದ ನಾಡಿಗೆ ವನ್ಯಜೀವಿಗಳು ಲಗ್ಗೆ ಇಡ್ತಿದ್ದು, ಜನರಲ್ಲಿ‌ ಆತಂಕ ಮನೆ ಮಾಡಿದೆ‌.

Tap to resize

Latest Videos

undefined

ವನ್ಯಜೀವಿಗಳಿಗೂ ಶುರುವಾದ ನೀರಿನ ಆಹಕಾರ. ಮೂಕಜೀವಿಗಳ ವೇದನೆ ನೋಡಲಾಗದೇ ತಾತ್ಕಲಿಕ‌ ನೀರಿನ ವ್ಯವಸ್ಥೆ ಮಾಡಿದ ಪರಿಸರ ಪ್ರೇಮಿಗಳು. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಚಿತ್ರದುರ್ಗದ ಜೋಗಿಮಟ್ಟಿ ಅರಣ್ಯಧಾಮ. ಹೌದು,10 ಸಾವಿರ ಹೆಕ್ಟೇರ್ ಗುಅಧಿಕ ವಿಸ್ತೀರ್ಣವುಳ್ಳ ಜೋಗಿಮಟ್ಟಿ ಕಾಯ್ದಿಟ್ಟ ಅರಣ್ಯ ಪ್ರದೇಶ ವನ್ಯಮೃಗಗಳ ನೆಚ್ಚಿನ ತಾಣ. ಚಿರತೆ, ಕರಡಿ,ಹೆಬ್ಬಾವು,ಜಿಂಕೆ ಹಾಗು ಮುಳ್ಳುಹಂದಿ ಸೇರಿದಂತೆ ಅನೇಕ ವನ್ಯಜೀವಿಗಳು ಜೋಗಿಮಟ್ಟಿಯಲ್ಲಿಯೇ ನೆಲೆಸಿವೆ.

ರಾಮೇಶ್ವರಂ ಕೆಫೆ ಬ್ಲಾಸ್ಟ್ ಆರೋಪಿ ಬಗ್ಗೆ ಎಕ್ಸ್‌ಕ್ಲ್ಯೂಸಿವ್ ಸಾಕ್ಷಿ ಸಿಕ್ಕಿದೆ; ಗೃಹ ಸಚಿವ ಪರಮೇಶ್ವರ

ಆದರೆ, ಬೇಸಿಗೆ ಬಂತಂದ್ರೆ ಈ ಮೂಕ ಜೀವಿಗಳ ರೋಧನೆ ಹೇಳತೀರದು. ಈ ಕಾಡಲ್ಲಿರುವ ಗಿಡಮರಗಳು ಒಣಗಿ ಭೋಳಾದ ಪರಿಣಾಮ ತಿನ್ನಲು ಆಹಾರ‌ವಿಲ್ಲ.ಆಹಾರ ಇರಲಿ, ಒಂದು ಹನಿ ನೀರು ಸಹ ಕಾಡಲ್ಲಿ ಸಿಗಲಾರದೇ ಪ್ರಾಣಿಪಕ್ಷಿಗಳು ಪರದಾಡುವಂತಾಗಿದೆ. ಹೀಗಾಗಿ ಇದನ್ನೇ ನೆಪವಾಗಿಸಿಕೊಂಡಿರೊ ಅರಣ್ಯ ಇಲಾಖೆ ಕಾಟಾಚಾರಕ್ಕೆ  ಜೋಗಿಮಟ್ಟಿಯ ಮಾರ್ಗ ಮದ್ಯೆ ಜನನಿಬಿಡ ಪ್ರದೇಶಗಳಲ್ಲಿ   ಅವೈಜ್ಞಾನಿಕವಾಗಿ ನಿರ್ಮಾಣ‌ ಮಾಡಿರುವ ನೀರಿನ ತೊಟ್ಟಿಯಲ್ಲಿನ ನೀರು ಕುಡಿಯಲು ಯೋಗ್ಯವಾಗಿಲ್ಲ. ನೀರು ಮಲಿನವಾಗಿ ದುರ್ನಾಥ ಬೀರುತ್ತಿವೆ.ಹೀಗಾಗಿ ನೀರನ್ನು ಹರಸಿ ಕಾಡಿನಿಂದ‌ ನಾಡಿನತ್ತ ವನ್ಯಜೀವಿಗಳು‌ ಮುಖ‌ಮಾಡ್ತಿದ್ದು, ಐಯುಡಿಪಿ‌ ಬಡಾವಣೆ, ಮಾಳಪ್ಪನಹಟ್ಟಿ ಹಾಗು ಚೋಳಗುಡ್ಡದ ನಾಗರೀಕರಲ್ಲಿ‌ ಭಾರಿ ಆತಂಕ ಸೃಷ್ಟಿಸಿವೆ.

ಇನ್ನು ಈ ಬೇಸಿಗೆ ವೇಳೆ ಪ್ರಾಣಿ, ಪಕ್ಷಿಗಳು ನೀರಿಗೆ ಪರದಾಡುವ ಸ್ಥಿತಿ ಕಂಡ ಪರಿಸರ ಪ್ರೇಮಿಗಳು ಅಲ್ಲಲ್ಲಿ  ಮಡಿಕೆ ಹಾಗು ಸಿಮೆಂಟ್ ತೊಟ್ಟಿಗಳನ್ನಿಟ್ಟು‌ ತಾತ್ಕಾಲಿಕ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಆದ್ರೆ  ಬೇಸಿಗೆ ದಣಿವಾರಿಸಿಕೊಳ್ಳಲು ಆ ನೀರಿನಿಂದಾಗದೇ ನಾಡಿನತ್ತ ಬರುತ್ತಿರುವ ವನ್ಯಗಳು ಹಾಗು ಜನರ ಮಧ್ಯೆ ಸಂಘರ್ಷ‌ ನಿರ್ಮಾಣ ವಾಗುವ ಮುನ್ನ  ಅರಣ್ಯ ಇಲಾಖೆ ನೀರಿನ ವ್ಯವಸ್ಥೆ‌ಮಾಡುವಂತೆ ಪರಿಸರವಾದಿಗಳು ಆಗ್ರಹಿಸಿದ್ದಾರೆ. 

ಬೆಂಗಳೂರಲ್ಲಿ ಕ್ರೂರಿ ತಾಯಿ; ತೊದಲು ನುಡಿಯೋ ಮಗುವಿನ ಮೈತುಂಬಾ ಗಾಯಗಳು, ಜನನಾಂಗವನ್ನೂ ಬಿಟ್ಟಿಲ್ಲ!

ಒಟ್ಟಾರೆ ಜೋಗಿಮಟ್ಟಿ‌ ಅರಣ್ಯ ಧಾಮದಲ್ಲಿ‌ ನೀರಿನ ಆಹಾಕಾರ‌ ಮುಗಿಲು‌ ಮುಟ್ಟಿದೆ. ಹೀಗಾಗಿ ನೀರನ್ನು ಹರಸಿ ವನ್ಯಜೀವಿಗಳು ಕಾಡಿನಿಂದ ನಾಡಿನತ್ತ ಮುಖ ಮಾಡ್ತಿದ್ದು, ನಾಗರೀಕರಲ್ಲಿ ಆತಂಕ ಮನೆ ಮಾಡಿದೆ. ಇನ್ನಾದ್ರು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಮೂಕ ಜೀವಿಗಳಿಗೆ ನೀರಿನ ಸೌಲಭ್ಯ ಕಲ್ಪಿಸಬೇಕಿದೆ.

click me!