ಸಸಿಕಾಂತ್ ಸೆಂಥಿಲ್ ರಾಜೀನಾಮೆ, ಒಂದೇ ದಿನದಲ್ಲಿ ದಕ್ಷಿಣ ಕನ್ನಡಕ್ಕೆ ಹೊಸ ಡಿಸಿ

Published : Sep 06, 2019, 10:59 PM ISTUpdated : Sep 06, 2019, 11:04 PM IST
ಸಸಿಕಾಂತ್ ಸೆಂಥಿಲ್ ರಾಜೀನಾಮೆ, ಒಂದೇ ದಿನದಲ್ಲಿ ದಕ್ಷಿಣ ಕನ್ನಡಕ್ಕೆ ಹೊಸ ಡಿಸಿ

ಸಾರಾಂಶ

ದಕ್ಷಿಣ ಕನ್ನಡಕ್ಕೆ ಹೊಸ ಜಿಲ್ಲಾಧಿಕಾರಿ ನೇಮಕ/ ಸಸಿಕಾಂಥ್ ಸೆಂಥಿಲ್ ರಾಜೀನಾಮೆ ನೀಡಿದ್ದರು/ ಸಿಂಧೂ ಬಿ.ರೂಪೇಶ್ ನೂತನ ಜಿಲ್ಲಾಧಿಕಾರಿ

ಮಂಗಳೂರು[ಸೆ. 06]  ದಕ್ಷಿಣ ಕನ್ನಡಕ್ಕೆ ನೂತನ ಜಿಲ್ಲಾಧಿಕಾರಿಯ ನೇಮಕವಾಗಿದೆ.  ಐಎಎಸ್ ಸೇವೆಗೆ ರಾಜೀನಾಮೆ ಸಲ್ಲಿಸಿದ್ದ ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಜಾಗಕ್ಕೆ ಸಿಂಧೂ ಬಿ.ರೂಪೇಶ್ ಅವರನ್ನು ನೇಮಕ ಮಾಡಲಾಗಿದೆ.

ಉಡುಪಿ ಜಿಲ್ಲಾ ಪಂಚಾಯತ್ ಸಿಇಓ ಆಗಿದ್ದ ಸಿಂಧೂ ಬಿ.ರೂಪೇಶ್ ಅವರು ಇನ್ನು ಮುಂದೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಲಿದ್ದಾರೆ.

ಸಸಿಕಾಂತ್ ಸೆಂಥಿಲ್ ದಿಢೀರ್ ರಾಜೀನಾಮೆ ಹಿಂದಿನ ಅಸಲಿ ಸತ್ಯ ಬಹಿರಂಗ

2009ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ 2017ರ ಅಕ್ಟೋಬರ್ 10ರಿಂದ ದ‌.ಕ ಜಿಲ್ಲಾಧಿಕಾರಿಯಾಗಿ ಸೇವೆ ಆರಂಭಿಸಿದ್ದರು. ದಕ್ಷ ಅಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ತಮ್ಮ ರಾಜೀನಾಮೆ ವೈಯಕ್ತಿಕ ನಿರ್ಧಾರ ಎಂದು ಹೇಳಿ ಕೆಲ ಸವಾಲುಗಳನ್ನು ಉಲ್ಲೇಖಿಸಿದ್ದರು.

 

PREV
click me!

Recommended Stories

ಮಂಡ್ಯ ಶಾಕಿಂಗ್: ನಾಗಮಂಗಲ ಒಂದರಲ್ಲೇ 2000 ಅಕ್ರಮ ಬಾಂಗ್ಲಾ ವಲಸಿಗರು? ಚುನಾವಣಾ ಆಯೋಗಕ್ಕೆ ದೂರು
Rain deficit in Karnataka: ರಾಜ್ಯದ 5862 ಕೆರೆಗಳಲ್ಲಿ ಇದೀಗ ಹನಿ ನೀರೂ ಇಲ್ಲ!