ಗುಬ್ಬಿ ಎಚ್ಎಎಲ್‌ನಲ್ಲಿ ಉದ್ಯೋಗವಕಾಶ ವದಂತಿ: ಆಕಾಂಕ್ಷಿಗಳಿಂದ ಹಣ ಪೀಕುವ ಹುನ್ನಾರ

By BK Ashwin  |  First Published Feb 20, 2023, 2:29 PM IST

ನಮ್ಮವರು ಪ್ರಯತ್ನ ಪಡೆಯದೆ ಹೋದರೆ ಉತ್ತರ ಭಾರತದ ರಾಜ್ಯಗಳಿಂದ ಕೆಲಸಕ್ಕೆ ಬರುತ್ತಾರೆ, ಕನ್ನಡಿಗರು ಉದ್ಯೋಗದಿಂದ ವಂಚಿತರಾಗುತ್ತಾರೆ. 


ತುಮಕೂರು: ಗುಬ್ಬಿ ಬಳಿ ಎಚ್‌ಎಎಲ್ ಘಟಕ ಉದ್ಘಾಟನೆಗೊಂಡಿದ್ದು, ಇದನ್ನೇ ನೆಪವಾಗಿಟ್ಟುಕೊಂಡಿರುವ ಕೆಲ ವಂಚಕರು ಎಚ್‌ಎಎಲ್‌ನಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನಿಸಲಾಗಿದೆ , ಕೂಡಲೇ ಸಂಪರ್ಕಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸುತ್ತಿದ್ದಾರೆ ಘಟಕಕ್ಕೆ ಐಟಿಐ , ಡಿಪ್ಲೊಮಾ ಯಾರಾದರೂ ಆಗಿರುವವರು ಇದ್ದಲ್ಲಿ ಅರ್ಜಿ ಸಲ್ಲಿಸಿ , ಸ್ಥಳೀಯರು ಮತ್ತು ನಿಮ್ಮ ಅಕ್ಕಪಕ್ಕದವರಿಗೆ ತಿಳಿಸಿ ಎಂದು ಮನವಿ ಮಾಡುತ್ತಿರುವ ಮೆಸೇಜ್ ಫಾರ್ವಡ್ ಮಾಡಲಾಗುತ್ತಿದೆ .

ನಮ್ಮವರು ಪ್ರಯತ್ನ ಪಡೆಯದೆ ಹೋದರೆ ಉತ್ತರ ಭಾರತದ ರಾಜ್ಯಗಳಿಂದ ಕೆಲಸಕ್ಕೆ ಬರುತ್ತಾರೆ , ಕನ್ನಡಿಗರು ಉದ್ಯೋಗದಿಂದ ವಂಚಿತರಾಗುತ್ತಾರೆ. ಆದ ಕಾರಣ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗಬೇಕು ಎಂದೆಲ್ಲಾ ಬರೆದುಕೊಂಡು ವಾಟ್ಸ್‌ಆ್ಯಪ್ , ಫೇಸ್‌ಬುಕ್‌ಗಳಲ್ಲಿ ಹರಿಬಿಡುತ್ತಿದ್ದಾರೆ. ವ್ಯವಸ್ಥಾಪಕ ಶಿವಕುಮಾರ್‌ ಎಂಬ ಹೆಸರು ಸೇರಿ ಇತರ ಕೆಲವರ ಹೆಸರನ್ನು ಹಾಕಿಕೊಂಡು ಒಂದೆರಡು ಮೊಬೈಲ್ ಸಂಖ್ಯೆಗಳನ್ನೂ ನಮೂದಿಸಿದ್ದಾರೆ. ಇಂತಹ ಸಂದೇಶಗಳನ್ನು ನಂಬಿ ಉದ್ಯೋಗ ಆಕಾಂಕ್ಷಿಗಳು ವಂಚನೆಗಳೊಗಾಗಬಾರದು ಎಂದು ಕೌಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮನವಿ ಮಾಡಿದ್ದಾರೆ.

Tap to resize

Latest Videos

ಇದನ್ನು ಓದಿ: ವಿನೂತನ ಸೂಪರ್‌ಸಾನಿಕ್ ಜೆಟ್ ಟ್ರೈನರ್ ವಿನ್ಯಾಸ ಪ್ರದರ್ಶಿಸಿದ ಎಚ್‌ಎಎಲ್‌

ಫೆಬ್ರವರಿ 6 ರಂದು ಪ್ರಧಾನಿ ನರೇಂದ್ರ ಮೋದಿ ಎಚ್.ಎ.ಎಲ್‌ ಘಟಕಕ್ಕೆ ಚಾಲನೆ ನೀಡಿದರು. ಈ ಬೆನ್ನಲ್ಲೇ ತುಮಕೂರು ಜಿಲ್ಲೆಯ ಉದ್ಯೋಗಾಂಕ್ಷಿಗಳಲ್ಲಿ ಭರವಸೆ ಮೂಡಿತ್ತು.‌ ಸ್ಥಳೀಯವಾಗಿ ಕೆಲಸ ಸಿಗುತ್ತೆ ಅನ್ನೋ ವಿಶ್ವಾಸ ಮೂಡಿದ್ದು, ಕೆಲ ವಂಚಕರು ಇದ್ದನ್ನೇ ಬಂಡವಾಳ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಇದನ್ನೂ ಓದಿ: HAL ಹೆಸರಿನಲ್ಲಿ ಕುಟುಕಿದವರಿಗೆ ಗುಬ್ಬಿ ಹೆಲಿಕಾಪ್ಟರ್ ಘಟಕ ಉತ್ತರ, ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ!

click me!