ಮಂಡ್ಯದಲ್ಲಿ ಬೃಹತ್ ಉದ್ಯೋಗ ಮೇಳ : 25 ಕಂಪನಿಗಳಿಗೆ ಸೆಲೆಕ್ಷನ್

Suvarna News   | Asianet News
Published : Jan 28, 2021, 02:40 PM ISTUpdated : Jan 28, 2021, 02:50 PM IST
ಮಂಡ್ಯದಲ್ಲಿ ಬೃಹತ್ ಉದ್ಯೋಗ ಮೇಳ : 25 ಕಂಪನಿಗಳಿಗೆ ಸೆಲೆಕ್ಷನ್

ಸಾರಾಂಶ

ಮಂಡ್ಯ ವಿಶ್ವವಿದ್ಯಾಲಯದಲ್ಲಿ ಬೃಹತ್ ಉದ್ಯೋಗ ಮೇಳ 25 ಕ್ಕೂ ಹೆಚ್ಚು ಕಂಪನಿಗಳಿಂದ ನಿರುದ್ಯೋಗಿಗಳಿಗೆ ಉದ್ಯೋಗವಕಾಶ

ಮಂಡ್ಯ  (ಜ.28):  ವಿದ್ಯಾವಂತ ಪದವೀಧರರು ತಾವು ಪಡೆದ ಶಿಕ್ಷಣಕ್ಕೆ ಅನುಗುಣವಾಗಿ ಕೌಶಲ್ಯತೆಯನ್ನು ಸಾಧಿಸುವುದರಿಂದ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಇರಬಹುದು ಎಂದು ಮಂಡ್ಯ ಜಿಲ್ಲಾಧಿಕಾರಿ ವೆಂಕಟೇಶ್ ಹೇಳಿದರು.

ನಗರದ ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪದವಿಗಳಿಸಿದರಷ್ಟೇ ಸಾಲದು. ಪದವಿ ಗಳಿಸಿದ ಬಳಿಕ ಉದ್ಯೋಗ ಪಡೆಯಬೇಕಾದರೆ ಕೌಶಲ್ಯತೆ ಬಹಳ ಮುಖ್ಯ ಎಂದು ಹೇಳಿದರು. 

ವಿದ್ಯಾರ್ಥಿಗಳು ಪದವಿ ಪಡೆದ ನಂತರ ಕುಟುಂಬ ಹಾಗೂ ಸಾಮಾಜಿಕ ಜವಾಬ್ದಾರಿಯ ಒತ್ತಡಕ್ಕೆ ಸಿಲುಕುತ್ತಾರೆ. ಅದಕ್ಕಾಗಿ ಆರಂಭದಲ್ಲಿ ಸಿಗುವ ಉದ್ಯೋಗವನ್ನು ಪಡೆದುಕೊಂಡು ಕೌಶಲ್ಯತೆ ಸಾಧಿಸಿದ ಬಳಿಕ ಅಲ್ಲಿ ಉನ್ನತೀಕರಣ ಸಾಧಿಸಬಹುದು ಎಂದರು.

ಕೆಲಸ ಖಾಲಿ ಇದೆ! 52 ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳುತ್ತಿರುವ ಬಿಇಎಲ್ ...

ಕೊರೋನಾ ಸಂಕಷ್ಟದಿಂದ ಪ್ರತಿ ತಿಂಗಳು ನಡೆಯುತ್ತಿದ್ದ ಉದ್ಯೋಗ ಮೇಳ ಸ್ಥಗಿತಗೊಂಡಿತ್ತು. ನಡೆಯುವ ಇದೀಗ ಉದ್ಯೋಗಮೇಳಕ್ಕೆ ಮತ್ತೆ ಚಾಲೆಂಜಿಂಗ್ ನೀಡಲಾಗಿದ್ದು ಪದವಿ ಪಡೆದಿರುವ ಯುವಕ-ಯುವತಿಯರು ಹಾಗೂ ಎಸೆಸೆಲ್ಸಿ ಪಾಸಾಗಿರುವ ನಿರುದ್ಯೋಗಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿ ಉದ್ಯೋಗಗಳನ್ನು ಪಡೆದು ಉತ್ತಮ ಬದುಕು ನಡೆಸುವಂತೆ ತಿಳಿಸಿದರು.

ಉದ್ಯೋಗಮೇಳದಲ್ಲಿ ಸುಮಾರು 25ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಿದ್ದವು.

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ