
ಬೆಳಗಾವಿ(ಜೂ.03): ಭಾರತ ರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಜಿಲ್ಲೆಯ ಚಿಕ್ಕೋಡಿ ನ್ಯಾಯಾಲಯದಲ್ಲಿ ವಾದ ಮಾಡಲು ಬಂದಾಗ ಅವರನ್ನು ಆರೈಕೆ ಮಾಡಿದ್ದ ತಾಲೂಕಿನ ಕರೋಶಿ ಗ್ರಾಮದ ವೃದ್ಧೆ ಜಿಗನಬಿ ಬಾಪುಲಾಲ್ ಪಟೇಲ(108) ಮಂಗಳವಾರ ರಾತ್ರಿ ವಿಧಿವಶರಾಗಿದ್ದಾರೆ.
1927ರಲ್ಲಿ ಮಹಾರಾಷ್ಟ್ರದ ಔರವಾಡ ಗ್ರಾಮದ ದೇವಸ್ಥಾನದ ಜಮೀನು ಕುರಿತು ದೇವಸ್ಥಾನ ಸಮಿತಿ ಹಾಗೂ ಪಟೇಲ ಕುಟುಂಬದ ನಡುವೆ ವ್ಯಾಜ್ಯ ನಡೆದಿತ್ತು. ಅಂದಿನ ಬಾಂಬೆ ಹೈಕೋರ್ಟ್‌ನ ಸುಪ್ರಸಿದ್ಧ ನ್ಯಾಯವಾದಿಯಾಗಿದ್ದ ಡಾ.ಅಂಬೇಡ್ಕರ್ ಅವರು ಪಟೇಲ ಕುಟುಂಬದ ಪರ ವಾದ ಮಂಡಿಸಲು ಸಮ್ಮತಿ ಸೂಚಿಸಿದ್ದರಯ. ಹೀಗಾಗಿ ಅಂದು ಪಟೇಲ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.
ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: 'ಉಮೇಶ್ ಕತ್ತಿ ಪಕ್ಷದ ವೇದಿಕೆಯಲ್ಲಿ ಮಾತನಾಡಲಿ'
ಅಂದು 9 ವರ್ಷದ ಬಾಲಕಿ ಇದ್ದ ಜಿಗನಬಿ ಅವರು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಊಟ, ಉಪಚಾರ ಮಾಡಿದ್ದರು. ಆದರೆ, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಜಿಗನಬಿ ಬಾಪುಲಾಲ್ ಪಟೇಲ ಅವರು ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ.