ಮಂಡ್ಯ : ಮೊದಲ ಬಾರಿ ಖಾತೆ ತೆರೆದ BJPಗೆ ಅಧಿಕಾರ ಸಾಧ್ಯತೆ?

By Kannadaprabha NewsFirst Published Sep 9, 2019, 10:13 AM IST
Highlights

ಜೆಡಿಎಸ್ ಹೆಚ್ಚು ಸ್ಥಾನದಲ್ಲಿ ಗೆಲುವು ಪಡೆದಿದ್ದು, ಆದರೆ ಅಧಿಕಾರ ಬಿಜೆಪಿ ಪಾಲಾಗುವ ಸಾಧ್ಯತೆ ಹೆಚ್ಚಾಗಿದೆ. ಮಂಡ್ಯ ಹಾಲು ಒಕ್ಕೂಟ ಚುನಾವಣೆಯಲ್ಲಿ ಕಮಲ ಪಾಳಯ ಮೊದಲ ಬಾರಿ ಖಾತೆ ತೆರೆದಿದೆ. 

ಮಂಡ್ಯ [ಸೆ.09]:  ಮಂಡ್ಯ ಜಿಲ್ಲಾ ಹಾಲು ಒಕ್ಕೂ​ಟದ (ಮನ್‌ಮುಲ್‌) ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾ​ವ​ಣೆ​ಯಲ್ಲಿ ಜೆಡಿಎಸ್‌ ಪಕ್ಷ ಮೇಲುಗೈ ಸಾಧಿಸಿದರೆ, ಬಿಜೆಪಿಯ ರೂಪಾ ಗೆಲುವು ಸಾಧಿಸುವ ಮೂಲಕ ಕಮಲ ಪಕ್ಷ ಮೊದಲ ಬಾರಿ ಖಾತೆ ತೆರೆದಿದೆ.

 ಅಲ್ಲದೇ ಮನ್‌ಮುಲ್‌ನ ನಿರ್ದೇಶಕಿಯಾಗಿ ಆಯ್ಕೆಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಮದ್ದೂರಿನ ರೂಪ ಪಾತ್ರರಾಗಿದ್ದರೆ. ಇದರೊಂದಿಗೆ ಕಳೆದ ಬಾರಿ ಮನ್‌ಮುಲ್‌ನ ಅಧಿಕಾರ ಹಿಡಿದಿದ್ದ ಕಾಂಗ್ರೆಸ್‌ ತೀವ್ರ ಹಿನ್ನಡೆ ಅನುಭವಿಸಿದೆ.

ಮನ್‌ಮುಲ್‌ನ ಒಟ್ಟು 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ 8, ಕಾಂಗ್ರೆಸ್‌ 3 ಹಾಗೂ ಬಿಜೆಪಿ 1 ಸ್ಥಾನ ಪಡೆದುಕೊಂಡಿದೆ. ಇದರೊಂದಿಗೆ 8 ಸ್ಥಾನ ಪಡೆದಿರುವ ಜೆಡಿಎಸ್‌ ಮನ್‌ಮುಲ್‌ ಅಧಿಕಾರ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ, 5 ಸ್ಥಾನಗಳಿಗೆ ರಾಜ್ಯ ಸರ್ಕಾರ ನಾಮ ನಿರ್ದೇಶನ ಮಾಡುವುದು ಬಾಕಿಯಿದೆ. ಪ್ರಸ್ತುತ ಬಿಜೆಪಿ ಅಧಿಕಾರದಲ್ಲಿದ್ದು, ತಮ್ಮವರನ್ನೇ ನೇಮಕ ಮಾಡುವುದು ಬಹುತೇಕ ಖಚಿತ. ಆಗ ಗೆದ್ದಿರುವ ಒಬ್ಬರು ಹಾಗೂ ಐವರು ನಾಮ ನಿರ್ದೇಶಿತರ ಸಂಖ್ಯೆ ಸೇರಿ ಬಿಜೆಪಿ ಬಲ 6ಕ್ಕೆ ಏರಲಿದೆ. ಈ ವೇಳೆ 3 ಸ್ಥಾನ ಗೆದ್ದಿರುವ ಕಾಂಗ್ರೆಸ್‌ ಜತೆಗೂಡಿ ಬಿಜೆಪಿ ಅಧಿಕಾರ ನಡೆಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

click me!