ಕಾಂಗ್ರೆಸ್ ಮುಖಂಡಗೆ ಜೆಡಿಎಸ್ ಬೆಂಬಲ : ಎಚ್‌ಡಿಕೆಯಿಂದ ಭರವಸೆ

Kannadaprabha News   | Asianet News
Published : Mar 05, 2021, 12:50 PM ISTUpdated : Mar 05, 2021, 01:48 PM IST
ಕಾಂಗ್ರೆಸ್ ಮುಖಂಡಗೆ ಜೆಡಿಎಸ್ ಬೆಂಬಲ : ಎಚ್‌ಡಿಕೆಯಿಂದ ಭರವಸೆ

ಸಾರಾಂಶ

ಕಾಂಗ್ರೆಸ್ ಮುಖಂಡ ತಬ್ಬಲಿಯಾದರೆ ಜೆಡಿಎಸ್ ಬೆಂಬಲ ನೀಡಲಿದೆ. ಸದಾ ಅವರ ಬೆಂಬಲಕ್ಕೆ ನಿಲ್ಲಲಿದ್ದೇವೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು. 

ಮೈಸೂರು (ಮಾ.05):  ಮೈಸೂರು ಮೇಯರ್ ಚುನಾವಣೆ ಮೈತ್ರಿ ವಿಚಾರ ತನ್ವೀರ್ ಸೇಠ್ ರಾಜಕೀಯವಾಗಿ ತಬ್ಬಲಿಯಾದರೆ ಜೆಡಿಎಸ್ ರಕ್ಷಣೆ ಕೊಡಲಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು. 

ಮೈಸೂರಿನಲ್ಲಿಂದು ಮಾತನಾಡಿದ ಮಾಜಿ‌ ಸಿಎಂ ಕುಮಾರಸ್ವಾಮಿ ತನ್ವೀರ್ ಅವರಿಗೆ ಈಗ ರಕ್ಷಣೆಯ ಅವಶ್ಯಕತೆ ಇಲ್ಲ. ಅವರನ್ನ ಸೋಲಿಸಲು ನಾವು ಪ್ರಯತ್ನ ಪಟ್ಟಿದ್ದೇವೆ, ಬೇರೆಯವರು ಪ್ರಯತ್ನಿಸಿದ್ದಾರೆ.  ಆದ್ರೆ ಆ ಕ್ಷೇತ್ರದಲ್ಲಿ ಅವರದ್ದೆ ಶಕ್ತಿ ಇದೆ ಎಂದರು. 

ನಮ್ಮ ಪಕ್ಷದ ಅಭ್ಯರ್ಥಿಯನ್ನ ಮೇಯರ್ ಮಾಡಲು ಸಹಕರಿಸಿದ ತನ್ವೀರ್‌ಗೆ ಅನಾನುಕೂಲ ಆದರೆ ಜೆಡಿಎಸ್‌ ಜೊತೆ ಇರಲಿದೆ. ತನ್ವೀರ್ ಸೇಠ್ ಕೋಮುವಾದಿಗಳನ್ನ ದೂರ ಇಡಲು ತೆಗೆದುಕೊಂಡ ನಿರ್ಧಾರ ಎಂದು ಹೇಳಿದ್ದಾರೆ.  ಕೋಮುವಾದ, ಜಾತ್ಯಾತೀತವಾದ ಎಲ್ಲ ಡೋಂಗಿ. ನಾನು ಇದ್ಯಾವುದರ ಬಗ್ಗೆಯೂ ಮಾತನಾಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. 

ರಾಸಲೀಲೆ ಕೇಸ್ : 'ಸಿಡಿ ಇದೆ ಅಂತ ಹೆದರಿಸೋರನ್ನ ಒದ್ ಒಳಗೆ ಹಾಕಿ' ...

ಆದ್ರೆ ತನ್ವೀರ್ ನಾವು ಜೊತೆಯಲ್ಲೆ ಇದ್ದೇವೆ.  ಕೆಟ್ಟ ಶಕ್ತಿಗಳನ್ನ ದೂರ ಇಡುವ ನಿಟ್ಟಿನಲ್ಲಿ ಅವರ ನಿರ್ಧಾರ ಸರಿಯಾಗಿದೆ. ಬಿಜೆಪಿ ದೂರ ಇಡಬೇಕು, ಜೆಡಿಎಸ್‌ ದೂರ ಇಡಬೇಕು ಅಂತ ಹೇಳುವವರು ತನ್ವೀರ್ ಸೇಠ್ ನಿರ್ಧಾರದ ಬಗ್ಗೆ ಸರ್ಟಿಫಿಕೇಟ್ ಕೊಡಲು ಹೊರಟಿದ್ದಾರೆ‌. 

ಇದೇಲ್ಲವನ್ನು ನಾನು ಗಮನಿಸಿದ್ದೇವೆ. ಮೇಯರ್ ಚುನಾವಣೆ ವಿಚಾರದಲ್ಲಿ ಜೆಡಿಎಸ್‌ ತನ್ವೀರ್ ಜೊತೆಗಿದೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ.

PREV
click me!

Recommended Stories

ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಡಿ.20ಕ್ಕೆ ಚಿತ್ರಕಲಾ ಸ್ಪರ್ಧೆ: ಎಲ್ಲಿ?
ವಿಶ್ವೇಶ್ವರಯ್ಯ ಟರ್ಮಿನಲ್‌ ರೈಲು ನಿಲ್ದಾಣ ವಿಸ್ತರಣೆ ಕಾರ್ಯ ಆರಂಭ: ಪ್ರಯಾಣಿಕರು ಕಾಯುವ ದುಸ್ಥಿತಿ