ರೈತರು ಬದುಕಿದ್ದಾಗ ಪರಿಹಾರ ನೀಡಿ: ಸ್ವಾಮೀಜಿಗಳೊಂದಿಗೆ ಬರ ಅಧ್ಯಯನ ಮಾಡಿದ ಜೆಡಿಎಸ್

By Govindaraj S  |  First Published Nov 23, 2023, 9:23 PM IST

ಅಧಿಕಾರಿಗಳನ್ನು ಕರೆದು ಕೊಂಡು ಕಾಂಗ್ರೆಸ್ ಶಾಸಕ ಸಚಿವರು ಬರ ಅಧ್ಯಯನ ಮಾಡಿದ್ರು.. ಕಾರ್ಯಕರ್ತರ ಜೊತೆಗೆ ಬಿಜೆಪಿ ನಾಯಕರು ಕೂಡ ಬರ ಅಧ್ಯಯನ ಮಾಡಿದ್ದು ಆಯ್ತು..ಇದೀಗ ಸ್ವಾಮಿಜೀಗಳನ್ನು ಕರೆದುಕೊಂಡು ಜೆಡಿಎಸ್ ನಾಯಕರು ಇದೀಗ ಬರ ಅಧ್ಯಯನ ಮಾಡ್ತಿದ್ದಾರೆ.


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಬಳ್ಳಾರಿ

ಬಳ್ಳಾರಿ (ನ.23): ಅಧಿಕಾರಿಗಳನ್ನು ಕರೆದು ಕೊಂಡು ಕಾಂಗ್ರೆಸ್ ಶಾಸಕ ಸಚಿವರು ಬರ ಅಧ್ಯಯನ ಮಾಡಿದ್ರು.. ಕಾರ್ಯಕರ್ತರ ಜೊತೆಗೆ ಬಿಜೆಪಿ ನಾಯಕರು ಕೂಡ ಬರ ಅಧ್ಯಯನ ಮಾಡಿದ್ದು ಆಯ್ತು..ಇದೀಗ ಸ್ವಾಮಿಜೀಗಳನ್ನು ಕರೆದುಕೊಂಡು ಜೆಡಿಎಸ್ ನಾಯಕರು ಇದೀಗ ಬರ ಅಧ್ಯಯನ ಮಾಡ್ತಿದ್ದಾರೆ. ಎಲ್ಲರೂ ತಂಡೋಪ ತಂಡವಾಗಿ ಬಂದು ಬರ ಅಧ್ಯಯನ ಮಾಡೋರೆ, ಆದರೆ ಸರ್ಕಾರದಿಂದ ಈವರೆಗೂ ಬಿಡಿಗಾಸು ಬಂದಿಲ್ಲ ಎನ್ನುವದು ರೈತರ ಯೋಚನೆಯಾಗಿದೆ. 

Tap to resize

Latest Videos

undefined

ಮಠಾಧೀಶರ ಪರಿಷತ್ತಿನೊಂದಿಗೆ ಜೆಡಿಎಸ್ ಶಾಸಕ ಬರ ಅಧ್ಯಯನ: ಎಲ್ಲರೂ ಬಂದು ಬರ ಅದ್ಯಯನ ಮಾಡೋದೇ ಆಯ್ತು. ಈವರೆಗೂ ಒಂದು ರೂಪಾಯಿ ಪರಿಹಾರ ಬಂದಿಲ್ಲ. ಪರಿಹಾರ ವಿಳಂಬ ಮಾಡುತ್ತಿರೋ ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ಮಾಡಿದ ಸ್ವಾಮೀಜಿಗಳು..  ಹೌದು, ಈಗಾಗಲೇ ಕಳೆದೊಂದು ತಿಂಗಳಿಂದ ಮೊದಲಿಗೆ ಬಿಜೆಪಿ ನಾಯಕರು ನಂತರ ಕಾಂಗ್ರೆಸ್ ಸಚಿವರು ಮತ್ತು ಶಾಸಕರು ಬರ ಅಧ್ಯಯನ ಮಾಡಿದ್ರು. ಅಧ್ಯಯನದ ವೇಳೆ ಪರಸ್ಪರ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ಮಾಡಿದ್ರು. 

ಮಹಮ್ಮದ್ ಪೈಗಂಬರ್ ವಿರುದ್ಧ ಮಾತನಾಡಿ ವಿವಾದ ಮೈಮೇಲೆ ಎಳೆದುಕೊಂಡು ಅತಿಥಿ ಉಪನ್ಯಾಸಕ!

ಆದರೆ, ಇದೀಗ ತಡವಾಗಿಯಾಗಿದ್ರೂ ಎಚ್ಚತ್ತು ಕೊಂಡಿರೋ ಜೆಡಿಎಸ್ ನಾಯಕರು ಇದೀಗ ಬರ ಅಧ್ಯಯನ ಮಾಡಲು ಮುಂದಾಗಿದ್ದಾರೆ. ವಿಶೇಷವೆಂದ್ರೇ, ಅವಳಿ ಜಿಲ್ಲೆಯ ಏಕೈಕ ಜೆಡಿಎಸ್ ಶಾಸಕ ನೇಮಿರಾಜ್ ನಾಯ್ಕ ತಾವೊಬ್ಬರೇ, ಹೋಗದೆ, ಬಳ್ಳಾರಿಯ ಮಠಾಧೀಶರ ಪರಿಷತ್ತಿನ ಸ್ವಾಮಿಜಿಗಳೊಂದಿಗೆ  ಬರ ಅಧ್ಯಯನ ಮಾಡಿದ್ದಾರೆ. ಬಳ್ಳಾರಿ ಮಠಾಧೀಶರ ಪರಿಷತ್ತಿನ ಸ್ವಾಮೀಜಿಗಳ ಜೊತೆ ಬಳ್ಳಾರಿ ಮತ್ತು ವಿಜಯ ನಗರ ಜಿಲ್ಲೆಯ ಹತ್ತು ತಾಲೂಕಿನಲ್ಲಿ ಬರ ಅಧ್ಯಯನ ಮಾಡೋದ್ರ ಜತೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪುಕ್ಕಟ್ಟೆ ಭಾಗ್ಯ ಕೊಡೋ ಬದಲು ರೈತರಿಗೆ ಪರಿಹಾರ ಕೊಡಿ ಎಂದು ಹಗರಿಬೊಮ್ಮನ ಹಳ್ಳಿ  ಶಾಸಕ ನೇಮಿರಾಜ್ ನಾಯ್ಕ  ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸತ್ತ ಮೇಲೆ ಹಣ ನೀಡೋ ಬದಲು ಬದುಕಿದ್ದಾಗ ನಷ್ಟ ಪರಿಹಾರ ನೀಡಿ ಎಂದು ಸ್ವಾಮೀಜಿ: ಈಗಾಗಲೇ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಬಳ್ಳಾರಿ ಮತ್ತು ವಿಜಯನಗರ ಎರಡು ಜಿಲ್ಲೆಯ ಎಲ್ಲ ಹತ್ತು ತಾಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಇಷ್ಟು ದಿನ ತುಂಗಭದ್ರಾ ಜಲಾಶಯದ ಕಾಲೂವೆಯಿಂದ ಬರೋ ನೀರಿನಿಂದ ಒಂದಷ್ಟು ರೈತರು ಬೆಳೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ರೇ, ಕೆಳ ಭಾಗದ ರೈತರು ಮಾತ್ರ ಮಳೆಯಿಲ್ಲದೇ ಕಾಲೂವೆಯಲ್ಲಿ ನೀರು ಕೂಡ ಇಲ್ಲದೇ ಪರದಾಡುತ್ತಿದ್ದಾರೆ.  ಇನ್ನೂ ಸರ್ಕಾರಕ್ಕೆ ಅನ್ನಭಾಗ್ಯದ ಅಕ್ಕಿ ನೀಡಲು ಕೂಡ ರೈತ ಬೆಳೆಯಬೇಕಲ್ವವೇ...? ಎಂದು ಬರ ಅಧ್ಯಯನದ ವೇಳೆ ಮಠಾಧೀಶರ ಪರಿಷತ್ತಿನ ಅಧ್ಯಕ್ಷರಾದ ಕಲ್ಯಾಣ  ಸ್ವಾಮೀಜಿಗಳು ಪ್ರಶ್ನೆ ಮಾಡಿದ್ದಾರೆ. ರೈತರು ಸತ್ತ ಮೇಲೆ ಅವರ ಮನೆಗೆ ಹೋಗಿ ಪರಿಹಾರ ನೀಡೋ ಬದಲು ಬದುಕಿದ್ದಾಗ ಪರಿಹಾರ ನೀಡಿ ಧೈರ್ಯ ತುಂಬಿ ರೈತರನ್ನು ಕಾಪಾಡಿ ಎನ್ನುತ್ತಿದ್ದಾರೆ. 

ಎಚ್‌ಡಿಕೆ ಹೇಳಿದಂತೆ ಕೀಳುಮಟ್ಟಕ್ಕೆ ಇಳಿದಿದ್ರೆ ರಾಜಕೀಯ ನಿವೃತ್ತಿ: ಡಿ.ಕೆ.ಶಿವಕುಮಾರ್‌

ಪರಿಹಾರ ನೀಡೋದು ಯಾವಾಗ..?: ಒಬ್ಬರ ಹಿಂದೆ ಒಬ್ಬರಂತೆ ಮೂರು ಪಕ್ಷದ ನಾಯಕರು ಪೈಪೋಟಿಗೆ ಬಿದ್ದವರಂತೆ ಬರ ಅಧ್ಯಯನ ಹೆಸರಲ್ಲಿ ಎಲ್ಲ ತಾಲೂಕಿನಲ್ಲಿನ ಬೆಳೆ ಹಾನಿ ಬಗ್ಗೆ ಪರಿಶೀಲನೆ ಮಾಡಿದ್ದಾರೆ. ಎಲ್ಲರೂ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ ಎನ್ನುತ್ತಿದ್ದಾರೆ. ಆದರೆ ರೈತರಿಗೆ ಯಾವಾಗ ಪರಿಹಾರ ಬರುತ್ತದೆ ಎಂದು ನಿಖರವಾಗಿ ಯಾವೊಬ್ಬ ನಾಯಕರು ಹೇಳುತ್ತಿಲ್ಲ ಎನ್ನುವದೇ ದುರ್ದೈವದ ಸಂಗತಿಯಾಗಿದೆ.

click me!