ಜೆಡಿಎಸ್ ಪಕ್ಷವನ್ನು ವಿರೋಧಿಗಳು ಪದೇ ಪದೇ ಜಾತಿವಾದಿ ಪಕ್ಷವೆಂದು ಕರೆಯುತ್ತಾರೆ. ಆದರೆ ನಿಜವಾಗಿ ಜೆಡಿಎಸ್ ಜಾತ್ಯತೀತ ಪಕ್ಷವಾಗಿದ್ದು, ನಾಯಕ ಸಮಾಜವನ್ನು ಎಸ್ಟಿಮೀಸಲಾತಿಗೆ ಸೇರಿಸಿದ್ದು, ಅಲ್ಪಸಂಖ್ಯಾತರಿಗೆ ಶೇ.4 ರಷ್ಟುಮೀಸಲಾತಿ ಕೊಡಿಸಿ ನೂರಾರು ನೀರಾವರಿ ಯೋಜನೆ ಜಾರಿಗೊಳಿಸಿ ಮಹಿಳೆಯರಿಗೆ ಶೇ.33ರಷ್ಟುಮೀಸಲಾತಿ ನೀಡಿದ್ದು ಕಣ್ಣ ಮುಂದಿನ ಸಾಕ್ಷಿಯಾಗಿದೆ. ಈ
ಮಧುಗಿರಿ : ಜೆಡಿಎಸ್ ಪಕ್ಷವನ್ನು ವಿರೋಧಿಗಳು ಪದೇ ಪದೇ ಜಾತಿವಾದಿ ಪಕ್ಷವೆಂದು ಕರೆಯುತ್ತಾರೆ. ಆದರೆ ನಿಜವಾಗಿ ಜೆಡಿಎಸ್ ಜಾತ್ಯತೀತ ಪಕ್ಷವಾಗಿದ್ದು, ನಾಯಕ ಸಮಾಜವನ್ನು ಎಸ್ಟಿಮೀಸಲಾತಿಗೆ ಸೇರಿಸಿದ್ದು, ಅಲ್ಪಸಂಖ್ಯಾತರಿಗೆ ಶೇ.4 ರಷ್ಟುಮೀಸಲಾತಿ ಕೊಡಿಸಿ ನೂರಾರು ನೀರಾವರಿ ಯೋಜನೆ ಜಾರಿಗೊಳಿಸಿ ಮಹಿಳೆಯರಿಗೆ ಶೇ.33ರಷ್ಟುಮೀಸಲಾತಿ ನೀಡಿದ್ದು ಕಣ್ಣ ಮುಂದಿನ ಸಾಕ್ಷಿಯಾಗಿದೆ. ಈ
ಪಕ್ಷ ಹುಟ್ಟಿದಾಗಿನಿಂದಲೂ ಪಕ್ಷವಾಗಿ ಉಳಿದುಕೊಂಡಿದೆ. ಇಂದು ಪಕ್ಷದ ಸಿದ್ಧಾಂತ ಹಾಗೂ ದೇವೇಗೌಡರ ,ಕುಮಾರಸ್ವಾಮಿಯವರ ಮಾರ್ಗದರ್ಶನದಲ್ಲಿ ಜೆಡಿಎಸ್ ಪಕ್ಷವು ಕಾರ್ಯಕರ್ತರ ಬಲದಿಂದ ಸದೃಢವಾಗಿ ನಿಂತಿದೆ ಎಂದು ಎಂ.ವಿ.ವೀರಭದ್ರಯ್ಯ ಹೇಳಿದರು.
ತಾಲೂಕಿನ ಮಿಡಿಗೇಶಿ ಹೋಬಳಿಯ ಅವರಗಲ್ಲು ಗ್ರಾಮದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಭೂಮಿ ಪೂಜೆ ನೆರವೇರಿಸಿದ ನಂತರ ತಾ.ಪಂ. ಮಾಜಿ ಸದಸ್ಯ
ಕಾಂಗ್ರೆಸ್‌ನ ಮುಖಂಡ ವೀರಣ್ಣಗೌಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು. ಈ ಬಾರಿ ಕುಮಾರಸ್ವಾಮಿ ಸಿಂ ಆಗಬೇಕೆನ್ನುವ ಬಯಕೆ ಜನತೆಯದ್ದು. ವೀರಣ್ಣ ಗೌಡರು ಇಂದು ಸಿದ್ಧಾಂತವನ್ನು ಮೆಚ್ಚಿ ಪಕ್ಷಕ್ಕೆ ಬಂದಿದ್ದು ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ ಹಾಗೂ ಜನರ ಬೇಡಿಕೆಯಂತೆ ಗ್ರಾಮದ ಕರಿಯಮ್ಮ ದೇವಾಲಯವನ್ನು ಸಮರ್ಪಕವಾಗಿ ಜೀರ್ಣೋದ್ಧಾರ ಮಾಡಿಸಿಕೊಡುತ್ತೇನೆಂದು ಭರವಸೆ ನೀಡಿದರು.
ತಾ.ಪಂ. ಮಾಜಿ ಸದಸ್ಯ ವೀರಣ್ಣಗೌಡ ಮಾತನಾಡಿ, ನಾವು 3 ದಶಕಗಳಿಂದಲೂ ಕಾಂಗ್ರೆಸ್ಸಿಗರು. ಆರ್.ಚಿಕ್ಕಯ್ಯನವರು ಶಾಸಕರಾಗಿದ್ದಾಗಿನಿಂದ ಇಲ್ಲಿಯವರೆಗೂ ಕಾಂಗ್ರೆಸ್‌ಗೆ ದುಡಿದಿದ್ದೇವೆ. ಆದರೆ ನಮ್ಮ ಸೇವೆಗೆ ಇಲ್ಲಿ ಬೆಲೆಯಿಲ್ಲದ ಮೇಲೆ ಇಲ್ಲಿರುವುದು ಸೂಕ್ತವಲ್ಲ ಎಂದು ತೀರ್ಮಾನಿಸಿ ಸರಳತೆಯ ಶಾಸಕರಾದ ವೀರಭದ್ರಯ್ಯಗೆ ಸಂಪೂರ್ಣ ಸಹಕಾರ ನೀಡುವುದಲ್ಲದೆ ಕುಮಾರಸ್ವಾಮಿಯ ಕೈ ಬಲಪಡಿಸಲು ಅಪಾರ ಬಂಧು ಬಳಗದ ಜೊತೆ ಜೆಡಿಎಸ್‌ಗೆ ಸೇರಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ನೂರಾರು ಕಾಂಗ್ರೆಸ್ಸಿಗರು ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ತಾಲೂಕು ಕುಂಚಿಟಿಗ ಒಕ್ಕಲಿಗರ ಸಂಘದ ಅಧ್ಯಕ್ಷ ರಾಜಶೇಖರ್, ಪುರಸಭೆ ಅಧ್ಯಕ್ಷ ತಿಮ್ಮರಾಜು, ತಾಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜು, ಗ್ರಾ.ಪಂ. ಸದಸ್ಯ ಗುಲಾಬಿ ರವಿ, ನಾಗಪ್ಪ, ಮುಖಂಡರಾದ ಡಾಬಾ ರಾಜಣ್ಣ, ಚಿಕ್ಕರಾಮಣ್ಣ, ಪುಟ್ಟರಂಗಪ್ಪ, ಶ್ರೀರಂಗಪ್ಪ ಹಾಗೂ ಇತರರು ಇದ್ದರು.
10ಕೆಎಂಡಿಜಿ1,,,ಮಧುಗಿರಿ ತಾಲೂಕು ಅವರಗಲ್ಲು ಗ್ರಾಮದಲ್ಲಿ ತಾ.ಪಂ. ಮಾಜಿ ಸದಸ್ಯ ವೀರಣ್ಣಗೌಡರು ಕಾಂಗ್ರೆಸ್ ತೊರೆದು ಬೆಂಬಲಿಗರೊಂದಿಗೆ ಶಾಸಕ ಎಂ.ವಿ.ವೀರಭದ್ರಯ್ಯ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾದರು.
ಈ ಬಾರಿ ಕುಮಾರಸ್ವಾಮಿ ಸರ್ಕಾರ ಖಚಿತ
ಹುಣಸೂರು : ಮುಂಬರುವ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಭವಿಷ್ಯ ನುಡಿದರು.
ಪಟ್ಟಣದ ಆಂಜನೇಯಸ್ವಾಮಿ ದೇವಾಲಯದ ಆವರಣದ ಬಳಿ ಭಾನುವಾರ ಆಯೋಜಿಸಿದ್ದ ಜೆಡಿಎಸ್ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಮುಂಬರುವ ವಿಧಾನಸಭಾ ಚುಣಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು 80-85ರ ಆಜುಬಾಜಿನಲ್ಲಿ ಗೆಲ್ಲಬಹುದು. ಇದನ್ನು ಆಯಾ ಪಕ್ಷಗಳ ಮುಖಂಡರೇ ಹೇಳುತ್ತಿದ್ದಾರೆ. ನನ್ನ ಪ್ರಕಾರ ಜೆಡಿಎಸ್ 40-50 ಸ್ಥಾನಗಳನ್ನು ಗಳಿಸಲಿದೆ. ಕುಮಾರಣ್ಣ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು