ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆಯ ಏರಿಳಿತ, ಹೆಚ್ಚು ಕೊಬ್ಬರಿ ಖರೀದಿಯ ತಾಕತ್ತು, ಕೊಬ್ಬರಿ ರವಾನೆ ಹಾಗೂ ದೇಶಾವರಿ ಕೊಬ್ಬರಿ ಮಾರುಕಟ್ಟೆಬೆಲೆಯ ನಾಡಿಮಿಡಿತವನ್ನು ಹೆಚ್ಚು ಅರಿತಿರುವ ಮಾಜಿ ಶಾಸಕ ಬಿ. ನಂಜಾಮರಿಯವರು ರು. 10700ಕ್ಕೆ ಟೆಂಡರ್ ಹಾಕುವ ಮೂಲಕ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಒಂದೇ ದಿನಕ್ಕೆ ರು. 1200 ಹೆಚ್ಚಳವಾಗುವಂತೆ ನೋಡಿಕೊಂಡರು.
ತಿಪಟೂರು : ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆಯ ಏರಿಳಿತ, ಹೆಚ್ಚು ಕೊಬ್ಬರಿ ಖರೀದಿಯ ತಾಕತ್ತು, ಕೊಬ್ಬರಿ ರವಾನೆ ಹಾಗೂ ದೇಶಾವರಿ ಕೊಬ್ಬರಿ ಮಾರುಕಟ್ಟೆಬೆಲೆಯ ನಾಡಿಮಿಡಿತವನ್ನು ಹೆಚ್ಚು ಅರಿತಿರುವ ಮಾಜಿ ಶಾಸಕ ಬಿ. ನಂಜಾಮರಿಯವರು ರು. 10700ಕ್ಕೆ ಟೆಂಡರ್ ಹಾಕುವ ಮೂಲಕ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಒಂದೇ ದಿನಕ್ಕೆ ರು. 1200 ಹೆಚ್ಚಳವಾಗುವಂತೆ ನೋಡಿಕೊಂಡರು.
ಇದೇ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಮುಂಬರಲಿರುವ ಯಲ್ಲಿ ತಿಪಟೂರು ಸೇರಿದಂತೆ ತೆಂಗು ಬೆಳೆಯುವ ಎಲ್ಲ ಕ್ಷೇತ್ರಗಳಲ್ಲಿ ತೆಂಗು ಬೆಳೆಗಾರನಿಗೆ ಶಕ್ತಿ ತುಂಬುವಂತಹ ಶಾಸಕರನ್ನು ಮಾತ್ರ ಆರಿಸಬೇಕು. ಇಲ್ಲಿ ಆಯ್ಕೆಯಾಗುವ ಮನಸ್ಸು ಮಾಡಿದರೆ ಸದಾ ಕಾಲ ಕೊಬ್ಬರಿ ಬೆಲೆ ಸ್ಥಿರವಾಗಿರುವಂತೆ ಮಾಡಬಹುದು. ಈ ಹಿಂದೆ ನಾನು 2 ಬಾರಿ ಶಾಸಕನಾಗಿ ಕೊಬ್ಬರಿ ಬೆಲೆ ಕಡಿಮೆಯಾಗದಂತೆ ನೋಡಿಕೊಂಡಿರುವುದು ತಾಲೂಕಿನ ಜನತೆಗೆ ತಿಳಿದಿದೆ.
undefined
ನಾನು ಶಾಸಕನಾಗಲು ನನ್ನ ಕೊಬ್ಬರಿ ವ್ಯಾಪಾರವೇ ಕಾರಣ. ಮೊದಲಿನಿಂದಲೂ ಕೊಬ್ಬರಿ ವ್ಯಾಪಾರಿಗಳೇ ಇಲ್ಲಿ ಶಾಸಕರಾಗಿರುವುದು ನಡೆದುಕೊಂಡು ಬಂದಿದೆ. ಹಾಗಾಗಿ ನಾನು ಈ ಬಾರಿ ಸ್ಪರ್ಧೆ ಮಾಡಬೇಕೋ ಬೇಡವೋ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸುತ್ತದೆ. ನೇರವಾಗಿ ನಾನು ಸ್ಪರ್ಧೆ ಮಾಡಲು ಆಗದಿದ್ದರೆ, ಯಾರಿಗೆ ಬೆಂಬಲ ಕೊಡಬೇಕು ಎಂಬುದನ್ನ ಮುಂದಿನ ದಿನಗಳಲ್ಲಿ ತಿಳಿಸುವೆ ಎಂದರು.
ಮೇ ತಿಂಗಳಿಗೆ ಕೊಬ್ಬರಿಗೆ ಬೆಲೆ ಬರಲಿದೆ: ನನ್ನ ಅನುಭವದ ಪ್ರಕಾರ ಮುಂದಿನ ಮೇ ತಿಂಗಳಿನಿಂದ ಕೊಬ್ಬರಿ ಬೆಲೆ ಮತ್ತಷ್ಟುಏರಿಕೆಯಾಗಲಿದೆ. ಅಲ್ಲಿಯವರೆಗೂ ರೈತರು ಬೆಂಬಲ ಬೆಲೆಗೆ ಸರ್ಕಾರ ಕೊಬ್ಬರಿ ಖರೀದಿಸಲು ನಫೆಡ್ ಖರೀದಿ ಕೇಂದ್ರ ತೆರೆದಿದ್ದು, ಅಲ್ಲಿಗೆ ಮಾರುವಂತೆ ಸಲಹೆ ನೀಡಿದರು. ಅಲ್ಲದೆ ರೈತರು ಉತ್ತಮ ಗುಣÜಮಟ್ಟದ ಕೊಬ್ಬರಿ ಮಾಡುವತ್ತ ಹೆಚ್ಚು ಗಮನ ಹರಿಸಬೇಕು. ಇತ್ತೀಚಿನ 7-8ತಿಂಗಳಿನಿಂದ ರೈತರು ಗುಣಮಟ್ಟಹಾಳುಮಾಡಿದ್ದಾರೆ. ಕೊಬ್ಬರಿ ಮಾಡಲು ರೈತರು ಇತ್ತೀಚೆಗೆ ನೆಲಕ್ಕೆ ಹತ್ತಿರವಿರುವಂತಹ ನೆಲ ಅಟ್ಟಗಳನ್ನು ಮಾಡಿಕೊಂಡಿರುವುದರಿಂದ ಕೊಬ್ಬರಿ ಗುಣಮಟ್ಟಹಾಳಾಗುತ್ತಿದೆ. ಹಾಗಾಗಿ ರೈತರು ಭೂಮಿಗಿಂತ 8-10 ಅಡಿ ಎತ್ತರದ ಕಾಯಿ ಅಟ್ಟಗಳನ್ನು ಮಾಡಿಕೊಂಡು ಗುಣಮಟ್ಟದ ಕೊಬ್ಬರಿ ತಯಾರಿಸಬೇಕು. ತಿಪಟೂರು ಕೊಬ್ಬರಿಗೆ ಉತ್ತರ ಭಾರತ ಸೇರಿದಂತೆ ವಿದೇಶಗಳಲೂ ಭಾರೀ ಬೇಡಿಕೆ ಇರುವುದರಿಂದ ಕೊಬ್ಬರಿ ಬೆಲೆ 20 ಸಾವಿರ ದಾಟಲಿದೆ ಎಂದು ಅವರು ರೈತರಿಗೆ ಕಿವಿ ಮಾತು ಸಹ ಹೇಳಿದರು. ಉತ್ತಮ ಗುಣಮಟ್ಟದ ಕೊಬ್ಬರಿ ತಯಾರಿ ಬಗ್ಗೆ ತೋಟಗಾರಿಕೆ ಇಲಾಖೆಯವರು ಹಾಗೂ ಕೆವಿಕೆ ವಿಜ್ಞಾನಿಗಳು ತೆಂಗು ಬೆಳೆಗಾರರಿಗೆ ಉತ್ತಮ ತರಬೇತಿ ನೀಡುವಂತೆಯೂ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾರುಕಟ್ಟೆಯ ಕೊಬ್ಬರಿ ವರ್ತಕರು, ರವಾನೆದಾರರು ಹಾಗೂ ತೆಂಗು ಬೆಳೆಗಾರರು ಹಾಜರಿದ್ದರು.