ಹೊಸ ರಾಜಕೀಯ ಬೆಳವಣಿಗೆ ಸುಳಿವು ನೀಡಿದ JDS ಶಾಸಕ

By Kannadaprabha News  |  First Published Sep 6, 2019, 11:08 AM IST

ಹೊಸ ರಾಜಕೀಯ ಬೆಳವಣಿಗೆಯೊಂದರ ಬಗ್ಗೆ ಜೆಡಿಎಸ್ ಶಾಸಕರೋರ್ವರು ಪರೋಕ್ಷ ಸುಳಿವು ನೀಡಿದ್ದಾರೆ. ಅಲ್ಲದೇ ಆಪರೇಷನ್ ಕಮಲದ ಆಫರ್ ಬಗ್ಗೆ ದೂರು ನೀಡುವ ಸಾಧ್ಯತೆ ಇದೆ. 


ಕೋಲಾರ [ಸೆ.06]: ‘ಆಪರೇಷನ್‌ ಕಮಲ’ ಹೆಸರಿನಲ್ಲಿ ಕೋಲಾರದ ಜೆಡಿಎಸ್‌ ಶಾಸಕ ಶ್ರೀನಿವಾಸ್‌ ಗೌಡ ಅವರಿಗೆ ಬಿಜೆಪಿ ಒಡ್ಡಿತ್ತು ಎನ್ನಲಾದ ಹಣದ ಆಮಿಷದ ಬಗ್ಗೆ ಜಾರಿ ನಿರ್ದೇಶನಾಲಯ(ಇ.ಡಿ)ಕ್ಕೆ ದೂರು ಸಲ್ಲಿಕೆಯಾಗುವ ಸಂಭವ ಇದೆ ಎನ್ನ​ಲಾ​ಗಿ​ದೆ. 

ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಮತ್ತು ಶಾಸಕ ಕೆ.ಶ್ರೀನಿವಾಸಗೌಡ ಸೇರಿ ಐದಾರು ಮಂದಿ ಶುಕ್ರವಾರ ದೆಹಲಿಗೆ ತೆರಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ರನ್ನು ಭೇಟಿ ಮಾಡಲಿದ್ದಾರೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಡಿಕೆಶಿ ಭೇಟಿ ನಂತರ ಇಡಿ ಕಚೇರಿಗೆ ತೆರಳಿ ಆಪ​ರೇಷನ್‌ ಕಮ​ಲದ ಕುರಿತು ದೂರು ನೀಡಲಿದ್ದಾರೆ ಎನ್ನ​ಲಾ​ಗು​ತ್ತಿ​ದೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ಶಾಸಕ ಕೆ.ಶ್ರೀನಿವಾಸಗೌಡ, ಶುಕ್ರವಾರ ಹೊಸ ರಾಜಕೀಯ ಬೆಳವಣಿಗೆ ನಡೆ​ಯ​ಲಿದೆ ಎಂದು ಈ ಕುರಿತು ಪರೋಕ್ಷ ಸುಳಿವನ್ನೂ ನೀಡಿದರು.

click me!