ಬಿಜೆಪಿ ನಿಲುವಿಗೆ ಜೈಕಾರ ಹಾಕಿದ ಕುಮಾರಸ್ವಾಮಿ : ಜೆಡಿಎಸ್ ನಿಲುವು ಮೀರಿದ ಶಾಸಕ

By Kannadaprabha NewsFirst Published Sep 28, 2020, 11:23 AM IST
Highlights

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿ ನಿಲುವಿಗೆ ಜೈಕಾರ ಹಾಕಿದ್ದು ಆದರೆ ಪಕ್ಷದ ಶಾಸಕರೋರ್ವರು ಪಕ್ಷದ ನಿಲುವಿಗೆ ವಿರೊಧವಾಗಿ ನಡೆದುಕೊಂಡಿದ್ದಾರೆನ್ನಲಾಗಿದೆ

ಮಂಡ್ಯ (ಸೆ.28):  ರಾಜ್ಯ ಸರ್ಕಾರ ಭೂಸು​ಧಾ​ರಣೆ ಮತ್ತು ಎಪಿ​ಎಂಸಿ ಕಾಯಿ​ದೆಗಳಿಗೆ ತಿದ್ದು​ಪಡಿ ತಂದಿ​ರು​ವು​ದನ್ನು ವಿರೋ​ಧಿಸಿ ಕರೆ ನೀಡ​ಲಾ​ಗಿ​ರುವ ಕರ್ನಾಟಕ ಬಂದ್‌ಗೆ ಮಂಡ್ಯ ಜಿಲ್ಲೆ​ಯಲ್ಲಿ ರಾಜ​ಕೀಯ ಪಕ್ಷ​ಗಳು ಮತ್ತು ಕೆಲ ಸಂಘ​ಟ​ನೆ​ಗಳ ತಟಸ್ಥ ಧೋರ​ಣೆಯ ನಡು​ವೆಯೂ ಹಲವು ಸಂಘ​ಟ​ನೆ​ಗಳು ಬಂದ್‌ ಯಶ​ಸ್ವಿ​ಗೊ​ಳಿ​ಸಲು ಮುಂದಾ​ಗಿವೆ.

 ಜೆಡಿಎಸ್‌ ಮುಖಂಡರು ದೂರ

ರೈತ ಪರ ಹೋರಾ​ಟ​ದ ಮೂಲ​ಕವೇ ರಾಜ​ಕೀಯ ಅಸ್ತಿ​ತ್ವ​ವನ್ನು ಕಂಡು​ಕೊಂಡಿ​ರುವ ಜೆಡಿ​ಎಸ್‌ ಸದ​ನದ ಒಳಗೆ ಎಪಿ​ಎಂಸಿ ಮತ್ತು ಭೂಸು​ಧಾ​ರಣಾ ಕಾಯ್ದೆ ತಿದ್ದು​ಪ​ಡಿ​ಗ​ಳನ್ನು ಸ್ವಾಗ​ತಿ​ಸಿ​ದರೆ, ಹೊರಗೆ ವಿರೋ​​​ಧಿಸು​ತ್ತಿ​ರು​ವುದು ರಾಜ​ಕೀಯ ಡ್ರಾಮಕ್ಕೆ ಸಾಕ್ಷಿ​ಯಾ​ಗಿದೆ.

ಸ್ಥಳೀಯ ಶಾಸ​ಕ​ರು ವಿವಿಧ ಕಾರ‍್ಯ​ಕ್ರ​ಮ​ಗ​ಳಲ್ಲಿ ಭೂ ಸುಧಾ​ರಣಾ ಕಾಯ್ದೆ​ಯನ್ನು ಅಧಿವೇ​ಶ​ನ​ದಲ್ಲಿ ವಿರೋ​ಧಿ​ಸು​ವು​ದಾಗಿ ಹೇಳಿ​ದ್ದರು. ಆದರೆ, ಜೆಡಿ​ಎಸ್‌ನ ಪಕ್ಷದ ಶಾಸ​ಕಾಂಗ ನಾಯ​ಕ ಕುಮಾ​ರ​ಸ್ವಾ​ಮಿ​ಯ​ವರೇ ಬಿಜೆ​ಪಿಯ ನಿಲು​ವಿಗೆ ಜೈಕಾರ ಹಾಕಿ​ರು​ವುದು ಪಕ್ಷದ ಶಾಸ​ಕ​ರಿಗೆ ಇರಿಸು ಮುರಿಸು ಉಂಟು​ಮಾ​ಡಿದೆ.

ಬಿಜೆಪಿಯೊಂದಿಗೆ ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ ಎಂದ ಜೆಡಿಎಸ್‌ ನಾಯಕ ...

ಸ್ಥಳೀ​ಯ​ವಾಗಿ ಮದ್ದೂರು ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣ ರೈತ​ರ ಪರ​ವಾಗಿ ನಡೆ​ಸು​ತ್ತಿ​ರುವ ಬಂದ್‌ಗೆ ತಮ್ಮ ಬೆಂಬ​ಲ​ವ​ನ್ನು ವ್ಯಕ್ತ​ಪ​ಡಿ​ಸು​ವು​ದರ ಮೂಲಕ ಪಕ್ಷದ ನಿಲು​ವನ್ನು ಮೀರಿ ರೈತರ ಪರ ನಿಂತಿ​ದ್ದಾ​ರೆಂಬ ಅಭಿ​ಪ್ರಾ​ಯ​ಗಳು ಕೇಳಿ​ಬ​ರು​ತ್ತಿದ್ದು, ಇತರೆ ಶಾಸ​ಕರ ನಿಲು​ವು​ಗಳು ಇಂದಿಗೂ ಸ್ಪಷ್ಟ​ವಾ​ಗಿಲ್ಲ. ವಿಶೇ​ಷ​ವಾಗಿ ಸಾಮಾ​ಜಿಕ ಜಾಲ​ತಾ​ಣ​ದಲ್ಲಿ ಪಕ್ಷದ ಎರಡು ಮತ್ತು ಮೂರನೇ ಹಂತದ ಮುಖಂಡರು ಬಿಜೆಪಿ ಸರ್ಕಾರದ ಕಾಯ್ದೆ ತಿದ್ದು​ಪ​ಡಿ​ ನಿಲು​ವನ್ನು ಖಂಡಿ​ಸು​ವುದರ ಮೂಲಕ ಪಕ್ಷ​ವನ್ನು ಮೀರಿ ತಮ್ಮ ಅಭಿ​ವ್ಯಕ್ತಿ ಸ್ವಾತಂತ್ರ್ಯ​ವನ್ನು ವ್ಯಕ್ತ​ಪ​ಡಿ​ಸು​ತ್ತಿ​ದ್ದಾರೆ.

click me!