'ಜೆಡಿಎಸ್ ಮಂಡ್ಯ ಅಭಿವೃದ್ಧಿಗೆ ಅಡ್ಡಿಪಡಿಸಿತ್ತಾ..?

Kannadaprabha News   | Asianet News
Published : Aug 24, 2020, 12:17 PM IST
'ಜೆಡಿಎಸ್ ಮಂಡ್ಯ ಅಭಿವೃದ್ಧಿಗೆ ಅಡ್ಡಿಪಡಿಸಿತ್ತಾ..?

ಸಾರಾಂಶ

ಜೆಡಿಎಸ್ ಯಾವುದೇ ಅಭಿವೃದ್ಧಿ ಕಾಮಗಾರಿಗೂ ಅಡ್ಡಿಪಡಿಸಿಲ್ಲ. ಆದರೆ ಕುಮಾರಸ್ವಾಮಿ ಕಾಲದ ಯೋಜನೆಗಳಿಗೆ ಬಿ ಎಸ್ ಯಡಿಯೂರಪ್ಪ ಅನುಮೋದನೇ ನೀಡಿಲ್ಲ ಎಂದು ಜೆಡಿಎಸ್ ಮುಖಂಡರು ವಾಗ್ದಾಳಿ ನಡೆಸಿದ್ದಾರೆ. 

ಕೆ.ಆರ್‌. ಪೇಟೆ (ಆ.24):  ಗೂಡೆಹೊಸಹಳ್ಳಿ ಏತ ನೀರಾವರಿ ಕಾಮಗಾರಿಗೆ ಜೆಡಿಎಸ್‌ ಪಕ್ಷ ಅಡ್ಡಿಪಡಿಸುತ್ತಿಲ್ಲ. ವಿನಾಕಾರಣ ಪಕ್ಷದ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಎಲ….ದೇವರಾಜು ಅಘಲಯ ಮಂಜುನಾಥ್‌ ವಿರುದ್ಧ ಕಿಡಿಕಾರಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಮಗಾರಿಯು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಅನುಮೋದನೆ ದೊರಕಿದೆ. ಆದರೆ, ಕಾವೇರಿ ಟ್ರಿಬುನಲ್‌ನಲ್ಲಿ ಕೇಸ… ಇದ್ದಕಾರಣ ಅನುಮೋದನೆ ದೊರೆತಿರಲಿಲ್ಲ ಎಂದರು.

ಯಡಿಯೂರಪ್ಪ ಸಿಎಂ ಆದ ನಂತರ ಎಚ್‌ಡಿಕೆ ಅವಧಿಯ ಎಲ್ಲಾ ಕಾಮಗಾರಿಗಳ ಅನುಮೋದನೆಯನ್ನು ತಡೆಹಿಡಿಯಲಾಯಿತು. ಕ್ರಮೇಣ ನ್ಯಾಯಾಲಯದ ತೀರ್ಪು ಹೊರಬಿದ್ದು ಕುಡಿಯುವ ನೀರಿಗಾಗಿ ಬಹುಗ್ರಾಮ ಯೋಜನೆಯಡಿ ಕಾಮಗಾರಿಗೆ ಅನುಮತಿ ದೊರಕಿದೆ. ಈ ಕಾಮಗಾರಿಯಲ್ಲಿ ಜೆಡಿಎಸ್‌ ಪಕ್ಷದ ಯಾರೂ ಸಹ ಕಾಮಗಾರಿಗೆ ಅಡ್ಡಿಪಡಿಸಿಲ್ಲ. ಕೆಲಸ ನಿಲ್ಲಿಸಿ ಎಂದು ಹೇಳಿಲ್ಲ. ವಿನಾ ಕಾರಣ ಪಕ್ಷವನ್ನು ಎಳೆದುತರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂಗ್ಲಿಷ್‌ ಬಾರದೆಂಬ ವಿನಂತಿಯೋ ಅಥವಾ ಹಿಂದಿ ಹೇರಬೇಕೆಂಬ ನಾಚಿಕೆ ಇಲ್ಲದ ಉತ್ಸಾಹವೋ'?...

ಕುಮಾರಸ್ವಾಮಿಯವರ ಕಾಲದಲ್ಲಿ ಬಿಡುಗಡೆಯಾಗಿದ್ದ ಅನುದಾನದ ಎಷ್ಟೋ ಕಾಮಗಾರಿಗಳಿಗೆ ಆಗ ಶಾಸಕರಾಗಿದ್ದ ಈಗಿನ ಜಿಲ್ಲಾ ಸಚಿವರು ಭೂಮಿಪೂಜೆ ಮಾಡಲು ಹೋಗಿಲ್ಲ. ತಾಲೂಕಿನ ಅಭಿವೃದ್ಧಿಗೆ ನಮ್ಮ ಆಕ್ಷೇಪ ಇಲ್ಲ. ಆದರೆ, ಜೆಡಿಎಸ್‌ ಕಾಮಗಾರಿಗೆ ಅಡ್ಡಿ ಪಡಿಸುತ್ತಿದೆ ಎಂದು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದರು.

ಗುತ್ತಿಗೆದಾರನಿಗೆ ಮುಂಗಡ ಹಣ ಪಾವತಿ ಮಾಡಿದ ನಂತರ ಯಾವ ಕಾರಣಕ್ಕೆ ಹಣ ನೀಡಲಾಯಿತೋ ಆ ಕೆಲಸ ಇಇನ್ನೂ ಪ್ರಾರಂಭವಾಗಿರುವುದಿಲ್ಲ. ಹಾಗಾದರೆ ಆ ಹಣ ಎಲ್ಲಿ ಹೋಯಿತು. ಪ್ರತೀ ತಿಂಗಳೂ ಸಹ ಕನಿಷ್ಟಎಂದರೂ 36 ಲಕ್ಷ ರು. ಬಡ್ಡಿ ಸರ್ಕಾರಕ್ಕೆ ನಷ್ಟವಾಗಿದೆ. ಇದುವರೆವಿಗೂ ಜಮೀನು ಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಯಾವುದೇ ಯಂತ್ರೋಪಕರಣಗಳನ್ನು ಖರೀದಿಸಿಲ್ಲ ಎಂದರು.

ಕಳೆದ ವರ್ಷ ಪ್ರವಾಹದಿಂದ ಹಾನಿಯುಂಟಾದ ಪ್ರದೇಶಗಳ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಈ ಎಲ್ಲಾ ಕಾಮಗಾರಿಯನ್ನು ಚುನಾವಣೆಯಲ್ಲಿ ಯಾರು ನಿಮಗೆ ಸಹಾಯ ಮಾಡಿದ್ದಾರೋ ಅವರಿಗೆ ಮತ್ತು ನಿಮ್ಮ ಬೆಂಬಲಿಗರಿಗೆ ಮಾತ್ರ ನೀಡಿದ್ದೀರಿ ಎಂದು ಸಚಿವ ನಾರಾಯಣಗೌಡರ ವಿರುದ್ಧ ಕಿಡಿಕಾರಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಪಂ ಉಪಾಧ್ಯಕ್ಷೆ ಗಾಯಿತ್ರಿ, ಸದಸ್ಯರಾದ ಎಚ್‌.ಟಿ.ಮಂಜು, ರಾಮದಾಸ್‌, ತಾಲೂಕು ಜೆಡಿಎಸ್‌ ಅಧ್ಯಕ್ಷ ಜಾನಕೀರಾಂ, ತಾಪಂ ಸದಸ್ಯ ರಾಜು, ಬಿ.ಎನ್‌.ದಿನೇಶ್‌, ಟಿಎಪಿಎಂಎಸ್‌ ನಿರ್ದೇಶಕ ಶಶಿಧರ್‌, ಜೆಡಿಎಸ… ಮುಖಂಡರಾದ ಬಸ್‌ ಕೃಷ್ಣೇಗೌಡ, ವಿಠಲಾಪುರ ಸುಬ್ಬೇಗೌಡ ಇದ್ದರು.

PREV
click me!

Recommended Stories

ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!
ಡಿ.16ರಂದು ಮಂಡ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ, ಜಿಲ್ಲಾಡಳಿತದಿಂದ ಭರದ ಸಿದ್ದತೆ, ಕಟ್ಟುನಿಟ್ಟಿನ ಭದ್ರತೆ