ಮತ್ತೆ ರೋಹಿಣಿ ಸಿಂಧೂರಿಗೆ ಸಂಕಷ್ಟ : JDS ಮುಖಂಡರಿಂದ ತನಿಖೆಗೆ ಆಗ್ರಹ

By Kannadaprabha News  |  First Published Oct 30, 2021, 3:01 PM IST
  • ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಅವಧಿಯಲ್ಲಿ ಖರೀದಿಸಿದ್ದ ಬಟ್ಟೆ ಬ್ಯಾಗ್ 
  • ಬಟ್ಟೆ ಬ್ಯಾಗ್ ಗಳಿಗೆ ಹಣ ನೀಡಬಾರದು ಮತ್ತು ಈ ಹಗರಣದ ಬಗ್ಗೆ ಲೋಕಾಯುಕ್ತ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹ

  ಕೆ.ಆರ್. ನಗರ (ಅ.30):  ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ (Rohini Sinduri) ಅವರ ಅವಧಿಯಲ್ಲಿ ಖರೀದಿಸಿದ್ದ ಬಟ್ಟೆ ಬ್ಯಾಗ್ (Cloth Bag) ಗಳಿಗೆ ಹಣ (Money) ನೀಡಬಾರದು ಮತ್ತು ಈ ಹಗರಣದ ಬಗ್ಗೆ ಲೋಕಾಯುಕ್ತ (Lokayukta) ತನಿಖೆಗೆ ಒಪ್ಪಿಸಬೇಕು ಎಂದು ಪುರಸಭೆಯ ಜೆಡಿಎಸ್ (JDS) ಸದಸ್ಯರು ಪಟ್ಟು ಹಿಡಿದ ಘಟನೆ ನಡೆಯಿತು. 

ಪಟ್ಟಣದ ಪುರಸಭೆಯ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ  ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರಾದ ಕೆ.ಎಲ್. ಜಗದೀಶ್, ಉಮೇಶ್, ತೋಂಟದಾರ್ಯ, ಸಂತೋಷ್‌ಗೌಡ ಮತ್ತು ಇತರ ಜೆಡಿಎಸ್ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು. 

Latest Videos

undefined

ಸದನದಲ್ಲೂ ರೋಹಿಣಿ ಸಿಂಧೂರಿ ವಿರುದ್ಧ ಸಮರ ಸಾರಿದ ಶಾಸಕ ಸಾರಾ ಮಹೇಶ್

ಜೆಡಿಎಸ್ ಮತ್ತು ಕಾಂಗ್ರೆಸ್ (Congress) ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತಲ್ಲದೆ, ಅಂತಿಮ ತೀರ್ಮಾನವನ್ನು ಅಧ್ಯಕ್ಷ ಕೆ.ಜಿ. ಸುಬ್ರಹ್ಮಣ್ಯ ಕಾಯ್ದಿರಿಸಿದರು. ಜೆಡಿಎಸ್ ಸದಸ್ಯ ತೋಂಟದಾರ್ಯ ಮಾತನಾಡಿ, ನಮ್ಮ ವಿರೋಧ ಬ್ಯಾಗ್‌ಗಳಿಗೆ ಹೆಚ್ಚು ದರ ನಿಗದಿ ವಿಚಾರಕ್ಕೆ ಸಂಬಂಧಿಸಿದಕ್ಕೆ ಜಿಲ್ಲಾಧಿಕಾರಿ (DC) ವಿರುದ್ದವಲ್ಲ. ಆದರೆ ಕಾಂಗ್ರೆಸ್ ಸದಸ್ಯರು ಇದನ್ನು ಪಕ್ಷ ರಾಜಕಾರಣಕ್ಕೆ (Politics) ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು. 

ಸಭೆ ಆರಂಭವಾಗುತ್ತಿದ್ದಂತೆ ಪಕ್ಷಾತೀತವಾಗಿ ಎಲ್ಲ ಸದಸ್ಯರು ಕಳೆದ ಹತ್ತು ತಿಂಗಳಿನಿಂದ ಸಾಮಾನ್ಯ ಸಭೆ ಕರೆಯದ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದಲ್ಲದೆ, ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳು ಪುನರಾವರ್ತನೆ ಆಗದಂತೆ ಕ್ರಮಕೈಗೊಳ್ಳಬೇಕೆಂದು ತಾಕೀತು ಮಾಡಿದರು. 

ರೋಹಿಣಿ ವಿರುದ್ಧ ಮತ್ತೆ ಜೆಡಿಎಸ್‌ ವರಾತ : ಮತ್ತಷ್ಟು ಆರೋಪ

ಸದಸ್ಯ ಪ್ರಕಾಶ್ ಮಾತನಾಡಿ, ಕಳೆದ ಎರಡು ತಿಂಗಳಿನಿಂದ ವಿದ್ಯುತ್ (Electricity) ಸಮಸ್ಯೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ 198 ದೂರುಗಳು ಬಂದಿದ್ದು, ಈ ಪೈಕಿ 22 ಸಮಸ್ಯೆಗಳನ್ನು ಬಗೆಹರಿಸಲಾಗಿದೆ, ಆದರೇ ಗುತ್ತಿಗೆದಾರನಿಗೆ 4.50 ಲಕ್ಷ ಹಣವನ್ನು (Money) ಪಾವತಿಸ ಲಾಗಿದೆ ಇದಕ್ಕೆ ಯಾರು ಹೊಣೆ. ಆತನ ಗುತ್ತಿಗೆಯನ್ನು ರದ್ದು ಪಡಿಸಿ ಎಂದು ಒತ್ತಾಯಿಸಿದರು. ಸದಸ್ಯ ಉಮೇಶ್ ಮಾತನಾಡಿ, ಎಲ್ಲ ವಾರ್ಡುಗಳಲ್ಲಿ ಬೀದಿ ದೀಪಗಳನ್ನು ಅಳವಡಿಸದೆ ಇರುವುದರಿಂದ ಇಡೀ ಪಟ್ಟಣ ಕಗ್ಗತ್ತಲಲ್ಲಿ ಮುಳುಗಿದ್ದು, ಇದನ್ನು ಹೇಳುವವರು-ಕೇಳುವವರೇ ಇಲ್ಲ ದಂತಾಗಿದೆ ಎಂದರು. ಜತೆಗೆ ಸರ್ಕಾರದಿಂದ ದೊರೆಯುವ ಅನುದಾನದ ಸದುಪಯೋಗ ಆಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪಟ್ಟಣ (Town) ವ್ಯಾಪ್ತಿಯಲ್ಲಿ ಗ್ರಾಪಂಗೆ ಸೇರಿದ ಒಂದು ಸಾವಿರಕ್ಕೂ ಅಧಿಕ ಮನೆಗಳಿದ್ದು, ಆ ಮನೆಯ ಮಾಲೀಕರು ಪುರಸಭೆಯ ಕಂದಾಯ ಪಾವತಿಸುತ್ತಿಲ್ಲ, ಆದರೆ ನಾವು ಅವರಿಗೆ ಅಗತ್ಯ ಮೂಲಭೂತ ಸೌಲ ಭ್ಯಗಳನ್ನು ಒದಗಿಸುತ್ತಿದ್ದು, ಇದರಿಂದ ಪುರಸಭೆಗೆ ಆರ್ಥಿಕವಾಗಿ ತೊಂದರೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನ ಹರಿಸಬೇಕೆಂದು ತಿಳಿಸಿದರು. 

ಸದಸ್ಯೆ ಕೆ.ಬಿ.ವೀಣಾ ವೃಷಭೇಂದ್ರ ಮಾತನಾಡಿ, ಪುರಸಭೆಯಲ್ಲಿ ಸದಸ್ಯರ ಮಾತಿಗಿಂತ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಇದನ್ನು ತಡೆಗಟ್ಟಲು ಆಡಳಿತ ಮಂಡಳಿಯವರು ನಿರ್ಲಕ್ಷ್ಯವಹಿಸುತ್ತಿದ್ದು, ಪೌತಿ ಖಾತೆ ಮಾಡಿಕೊಡಲು ಅಧಿಕಾರಿಗಳ ವರ್ಷಗಟ್ಟಲೆ ಅಲೆಸುತ್ತಿದ್ದಾರೆ ಎಂದು ಆರೋಪಿಸಿದರು. 

ಇದಕ್ಕೆ ದನಿಗೂಡಿಸಿದ ಸದಸ್ಯ ಸಂತೋಷ್‌ಗೌಡ ಮೊದಲು ಪುರಸಭೆಗೆ ಮಧ್ಯವರ್ತಿಗಳು ಬಾರದಂತೆ ತಡೆಯುವಂತೆ ಒತ್ತಾಯಿಸಿದರು. ಸದಸ್ಯರ ಆರೋಪಗಳಿಗೆ ಸ್ಪಂದಿಸಿದ ಮುಖ್ಯಾಧಿ ಕಾರಿ ಡಿ. ಪುಟ್ಟರಾಜು ಮುಂದಿನ ದಿನಗಳಲ್ಲಿ ಸಾರ್ವಜನಿಕರು ತಮ್ಮ ಕೆಲಸಗಳು ಆಗಬೇಕಿದ್ದಲ್ಲಿ ಕಚೇರಿಗೆ ಅಧಿಕಾರಿಗಳನ್ನು ಸಂಪರ್ಕಿಸುವುದರ ಜತೆಗೆ ಯಾರಾದರೂ ಲಂಚ ಕೇಳಿದರೆ ನನ್ನ ಗಮನಕ್ಕೆ ತನ್ನಿ ಎಂದು ತಿಳಿಸಿದರು. 

ಸದಸ್ಯ ಕೆ.ಪಿ. ಪ್ರಭುಶಂಕರ್ ಮಾತನಾಡಿ, ಅಭಿ ವೃದ್ಧಿ ಕಾರ್ಯಕೈಗೊಳ್ಳಲು ಹಣವಿಲ್ಲದೆ ಪುರಸಭೆ ಸರ್ವನಾಶವಾಗಿದೆ. ಆದ್ದರಿಂದ ನಾವು ಜನರ ಮುಂದೆ ತಲೆತಗ್ಗಿಸುವಂತಾಗಿದ್ದು, ಅಧ್ಯಕ್ಷರು ಕನಿಷ್ಠ ಗುಂಡಿಬಿದ್ದ ರಸ್ತೆಗಳಿಗೆ ಮಣ್ಣು ಹಾಕಿಸುವ ಕೆಲಸ ಮಾಡಿ ಎಂದು ಒತ್ತಾಯ ಮಾಡಿದರು.

 ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಟರಾಜು, ಸದಸ್ಯರಾದ ಶಾರದಾ ನಾಗೇಶ್, ವಹೀದಾಬಾನು, ಶಂಕರ್, ವಸಂತಮ್ಮ, ಶಿವುನಾಯಕ್, ಶಂಕರ್, ಸೈಯದ್ ಸಿದ್ದಿಕ್, ಜಾವೀದ್ ಪಾಷಾ, ಮಂಜುಳ ಚಿಕ್ಕವೀರು, ಮುಖ್ಯಾಧಿಕಾರಿ ಡಿ. ಪುಟ್ಟರಾಜು ಇದ್ದರು.  

click me!