Mandya : JDS ಶಾಸಕರು, ಮುಖಂಡರ ಪಕ್ಷ ತೊರೆಯುವ ಸುಳಿವು ನೀಡಿ ಎಚ್ಚರಿಸಿದ ಮುಖಂಡ

By Kannadaprabha NewsFirst Published Oct 14, 2021, 1:57 PM IST
Highlights
  • ಜಾತ್ಯತೀತ ಜನತಾದಳ ಪಕ್ಷದಲ್ಲಿನ ಜಿಲ್ಲೆಯ ನಾಯಕರಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿ
  • ಬೆಂಕಿಯನ್ನು ನಂದಿಸಲು ಪಕ್ಷದ ವರಿಷ್ಠರು ಮುಂದಾಗದಿದ್ದರೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಪಕ್ಷಕ್ಕೆ ಹಿನ್ನಡೆ

 ಮಂಡ್ಯ (ಅ.14):  ಜಾತ್ಯತೀತ ಜನತಾದಳ (JDS) ಪಕ್ಷದಲ್ಲಿನ ಜಿಲ್ಲೆಯ ನಾಯಕರಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ನಂದಿಸಲು ಪಕ್ಷದ ವರಿಷ್ಠರು ಮುಂದಾಗದಿದ್ದರೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Assembly Election) ಮಂಡ್ಯ (Mandya) ಜಿಲ್ಲೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂದು ಜಾತ್ಯತೀತ ಜನತಾದಳದ ಪರಿಶಿಷ್ಠ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎಲ್. ತುಳಸೀಧರ್ (ML Tulasidar) ಆತಂಕ ವ್ಯಕ್ತಪಡಿಸಿದ್ದಾರೆ. 

ಜಿಲ್ಲೆಯಲ್ಲಿ ಜಾತ್ಯತೀತ ದಳ ಪಕ್ಷಕ್ಕೆ ಕಾರ್ಯಕರ್ತರ ದೊಡ್ಡ ಶಕ್ತಿ ಇದೆ. ಆದರೆ, ನಾಯಕರ ನಡುವೆ ಹೊಂದಾಣಿಕೆ ಇಲ್ಲದಿರುವುದು ಹಾಗೂ ಪಕ್ಷದೊಳಗೆ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಶಾಸಕ ಎಂ.ಶ್ರೀನಿವಾಸ್ (M shrinivas) ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿ ರುವುದು ಪಕ್ಷದಲ್ಲಿನ ಆಂತರಿಕ ಕಚ್ಚಾಟವನ್ನು ಬಹಿರಂಗಗೊಳಿಸಿದೆ ಎಂದು ತಿಳಿಸಿದ್ದಾರೆ. 

ಶೀಘ್ರ ಹಲವು ಬಿಜೆಪಿ-ಜೆಡಿಎಸ್‌ ಮುಖಂಡರು ಕಾಂಗ್ರೆಸ್ : ಅಸಮಾಧಾನವು ಬಹಿರಂಗ

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದಾಗ ಸಮ್ಮಿಶ್ರ ಸರ್ಕಾರದ (Alliance Govt) ಅವಧಿಯಲ್ಲಿ ಜಿಲ್ಲೆಯ ಇಬ್ಬರು ಸಚಿವರಾಗಿದ್ದರೂ ಸಹ ಅಭಿವೃದ್ಧಿಯನ್ನು ಕಡೆಗಣಿಸಲಾಯಿತು. ಇವರ ಕೊಡುಗೆ ಶೂನ್ಯ, ಮಂಡ್ಯ (Mandya) ಕ್ಷೇತ್ರದ ಅಭಿವೃದ್ಧಿಗೆ ಸ್ವಪಕ್ಷದ ಸಚಿವರು ಸ್ಪಂದಿಸಲಿಲ್ಲ, ಜನತೆಗೆ ಅನುಕೂಲವಾಗುವ ಯೋಜನೆಗಳನ್ನು ಕೈ ತಪ್ಪಿಸಿ ಜನತೆಗೆ ವಂಚನೆ ಮಾಡಲಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ಸ್ವಪಕ್ಷೀಯರೇ ಅಡ್ಡಗಾಲು ಆಗಿದ್ದರು ಎಂದು ಎಂ.ಶ್ರೀನಿವಾಸ್ ಅಸಮಾಧಾನ ಸೂಚಿಸಿರುವುದು ಜಿಲ್ಲೆಯ ಜನತೆಗೆ ಜಾತ್ಯತೀತ ದಳ ಪಕ್ಷ ಅಧಿಕಾರದಲ್ಲಿದ್ದಾಗ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂಬ ತಪ್ಪು ಸಂದೇಶ ರವಾನೆಯಾಗಲಿದೆ ಎಂದಿದ್ದಾರೆ. 

ಪಕ್ಷದ ಜಿಲ್ಲಾಧ್ಯಕ್ಷರು ಏಕಪಕ್ಷೀಯವಾಗಿ ವರ್ತಿಸಿ, ಶಾಸಕರ ಬಗ್ಗೆ ನಿರ್ಲಕ್ಷ ತೋರಿ ಅವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಆರೋ ಪಿಸಿರುವ ಜಿಲ್ಲಾ ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಮುಂದಿನ ದಿನಗಳಲ್ಲಿ ಪಕ್ಷ ತೊರೆಯುವುದಾಗಿ ಹೇಳಿರುವುದು ಕಾರ್ಯಕರ್ತರನ್ನು ಗೊಂದಲಕ್ಕೀಡುಮಾಡಿದೆ ಎಂದು ತಿಳಿಸಿದ್ದಾರೆ.

ಜೆಡಿಎಸ್‌ ಪಾಳಯದ ಪ್ರಭಾವಿ ಪತಿ-ಪತ್ನಿ ಕಾಂಗ್ರೆಸ್ಗೆ : ಸಿದ್ದರಾಮಯ್ಯ ನಿವಾಸದಲ್ಲೇ ಸೇರ್ಪಡೆ

 ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ನಡುವೆ ಸಮನ್ವಯತೆ ಸಾಧಿಸಲು ಆಗಾಗ್ಗೆ ಕಾರ್ಯಕಾರಣಿ ಸಭೆಯನ್ನು ಕರೆದು ಸಂಘಟನೆ ವಿಚಾರವಾಗಿ ಚರ್ಚಿಸಬೇಕು. ಆದರೆ,ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ಕಾರ್ಯಕಾರಿಣಿ ಸಭೆ ಇರಲಿ, ಪಕ್ಷದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ (SC-ST) ಸೇರಿದಂತೆ ಯಾವುದೇ ವಿಭಾಗದ ಕಾರ್ಯ ಕಾರಣಿ ಸಭೆ ಇದುವರೆಗೂ ನಡೆದಿಲ್ಲ. ಮುಖಂಡರ ಇಂತಹ ಧೋರಣೆ ಯಿಂದ ಪಕ್ಷ ಸಂಘಟನೆಗೆ ಹಿನ್ನಡೆಯನ್ನುಂಟು ಮಾಡಿದೆ ಎಂದು ಜಿಲ್ಲಾಧ್ಯಕ್ಷ ಡಿ.ರಮೇಶ್ (D Ramesh) ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಮಂತ್ರಿಯಾಗಿದ್ದ ಇಬ್ಬರು ಶಾಸಕರ ಮೇಲೆ ಜಿಲ್ಲಾ ಕೇಂದ್ರದ ಶಾಸಕರೊಬ್ಬರು ಆರೋಪ ಮಾಡಿದ್ದು, ಮುಂದಿನ ದಿನಗಳ ಲ್ಲಿ ಸ್ವಪಕ್ಷದ ಶಾಸಕರ ನಡುವೆ ಮನಸ್ತಾಪಕ್ಕೆ ಎಡೆ ಮಾಡಿಕೊಟ್ಟು ಆಂತ ರಿಕ ಬೇಗುದಿಯಿಂದ ಪಕ್ಷದ ಕಾರ್ಯಕರ್ತರ ಆತ್ಮವಿಶ್ವಾಸಕ್ಕೆ ದಕ್ಕೆ ತರುವ ಸಾಧ್ಯತೆ ಹೆಚ್ಚಾಗುವುದರ ಮೂಲಕ ಪಕ್ಷದ ಮೇಲೆ ದೊಡ್ಡ ಹೊಡೆತ ಬೀಳಲಿದೆ ಎಂದು ಆತಂಕ ತೋರಿದ್ದಾರೆ. ಪಕ್ಷದ ಆಂತರಿಕ ವೇದಿಕೆಯಲ್ಲಿ ಚರ್ಚಿಸಬೇ ಕಾದ ವಿಷಯ ಸಾರ್ವತ್ರಿಕವಾಗಿ ಚರ್ಚೆಯಾಗು ತ್ತಿರುವುದು ಜಿಲ್ಲೆಯ ಜನತೆ ಪಕ್ಷದ ಮೇಲಿಟ್ಟಿರುವ ನಂಬಿಕೆಗೆ ಚ್ಯುತಿ ತರಲಿದ್ದು ಜೊತೆಗೆ ಮುಂದಿನ ದಿನಗಳಲ್ಲಿ ಹಲವು ಅನಾಹುತಕ್ಕೆ ದಾರಿ ಮಾಡಿಕೊಡಲಿದೆ. ಅಲ್ಲದೆ ಶಾಸಕರು ಮತ್ತು ಮುಖಂಡರ ಪಕ್ಷಾಂತರಕ್ಕೆ ಕಾರಣವಾದರೂ ಅಚ್ಚರಿಯಿಲ್ಲ ಎಂದು ಎಚ್ಚರಿಸಿದ್ದಾರೆ. 

ಶಾಸಕರ ನಡುವಿನ ಭಿನ್ನಾಭಿಪ್ರಾಯ ಪಕ್ಷದ ಕಾರ್ಯಕರ್ತರಲ್ಲಿನ ಆತ್ಮ ವಿಶ್ವಾಸ ಕುಗ್ಗಿಸುವ ಮುನ್ನವೇ ಪಕ್ಷದ ವರಿಷ್ಠರು ಮಧ್ಯಪ್ರವೇಶಿಸಿ ಶಾಸಕರು ಮತ್ತು ಮುಖಂಡರ ಅಭಿಪ್ರಾಯ ಆಲಿಸುವ ಮೂಲಕ ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ನಂದಿಸಲು ಮುಂದಾಗಬೇಕಾಗಿದೆ. ಇಲ್ಲದಿದ್ದರೆ ಮುಂಬರುವ 2023ರ ವಿಧಾನಸಭಾ ಚುನಾವಣೆಯನ್ನು (Assembly Election) ಪಕ್ಷದ ಕಾರ್ಯಕರ್ತರು ಸಮರ್ಥವಾಗಿ ಎದುರಿಸು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣಗೊಂಡು ಚುನಾವಣೆಯಲ್ಲಿ ಪ್ರಾಯಶ್ಚಿತ ಅನುಭವಿಸ ಬೇಕಾಗುತ್ತದೆ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ

click me!