ದಟ್ಟಗಳ್ಳಿ ನಂ.133/3ರಲ್ಲಿ 9 ಗುಂಟೆ, ಬೋಗಾದಿಯಲ್ಲಿ 2.11 ಎಕರೆ ಜಾಗ ಕೊಟ್ಟಿದ್ದೀವಿ ಅಂತ ಹೇಳಿದ್ದಾರೆ. ಆ ಎರಡೂ ಜಾಗ ಯಾರ ಹೆಸರಿನಲ್ಲಿದೆ ಎಂಬುದನ್ನು ಹೇಳಿ.ಜನ ನನಗೆ ರೆಸ್ಟ್ ಕೊಟ್ಟಿದ್ದಾರೆ. ಶಿಫಾರಸು ಮಾಡಲು ನಾನು ಶಾಸಕ ಅಲ್ಲ, ಮುಡಾ ಸದಸ್ಯನೂ ಅಲ್ಲ. ಯಾರಿಗೆ ಎಷ್ಟು ಸೈಟ್ ಕೊಟ್ಟಿದ್ದಾರೆ ಅಂತ ತನಿಖೆ ಆಗಲಿ ಎಂದು ಆಗ್ರಹಿಸಿದ ಸಾ.ರಾ.ಮಹೇಶ್
ಮೈಸೂರು(ಜು.27): ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ನನ್ನ ಹೆಸರು ಹೇಳಿದ್ದಾರೆ. ನನ್ನ ಹೆಸರಲ್ಲಿ ಸೈಟ್ ಇದ್ದರೆ ಋಜುವಾತು ಮಾಡಲಿ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಸವಾಲು ಹಾಕಿದ್ದಾರೆ.
ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಾ.ರಾ.ಮಹೇಶ್ ಅವರು, ದಟ್ಟಗಳ್ಳಿ ನಂ.133/3ರಲ್ಲಿ 9 ಗುಂಟೆ, ಬೋಗಾದಿಯಲ್ಲಿ 2.11 ಎಕರೆ ಜಾಗ ಕೊಟ್ಟಿದ್ದೀವಿ ಅಂತ ಹೇಳಿದ್ದಾರೆ. ಆ ಎರಡೂ ಜಾಗ ಯಾರ ಹೆಸರಿನಲ್ಲಿದೆ ಎಂಬುದನ್ನು ಹೇಳಿ.ಜನ ನನಗೆ ರೆಸ್ಟ್ ಕೊಟ್ಟಿದ್ದಾರೆ. ಶಿಫಾರಸು ಮಾಡಲು ನಾನು ಶಾಸಕ ಅಲ್ಲ, ಮುಡಾ ಸದಸ್ಯನೂ ಅಲ್ಲ. ಯಾರಿಗೆ ಎಷ್ಟು ಸೈಟ್ ಕೊಟ್ಟಿದ್ದಾರೆ ಅಂತ ತನಿಖೆ ಆಗಲಿ ಎಂದು ಆಗ್ರಹಿಸಿದ್ದಾರೆ.
undefined
ಮಾಡಲು ಕೆಲಸ ಇಲ್ಲದ್ದಕ್ಕೆ ಮೈಸೂರಿಗೆ ಪಾದಯಾತ್ರೆ: ಬಿಜೆಪಿ ವಿರುದ್ಧ ಸಚಿವ ಸುಧಾಕರ್ ವಾಗ್ದಾಳಿ
ಸುಮಾರು 1100 ಸೈಟ್ 50:50 ಅನುಪಾತದಲ್ಲಿ ಆಗಿದೆ. 500 ಸೈಟ್ ಪ್ರೋತ್ಸಾಹದಾಯಕ ನಿವೇಶನ ಕೊಟ್ಟಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕಾಂತರಾಜು ಮುಡಾ ಆಯುಕ್ತರಾಗಿದ್ದರು. ಸುಮಾರು 10,000 ಸೈಟ್ ಗುರುತಿದ್ದರು. ಆ ಸೈಟ್‌ಗಳು ಏನಾಗಿವೆ ಎಂಬುದು ತನಿಖೆ ಆಗಲಿ. ನಾನು ಶಿಫಾರಸು ಮಾಡಿದ್ದ ಸೈಟ್ ರೈತರಿಗೆ ಆಗಿದ್ದರೆ ವಾಪಸ್ ಮುಡಾ ಬರೆಸಿಕೊಳ್ಳಲಿ. ಕೋತಿ ತಿಂದು ಮೇಕೆ ಬಾಯಿಗೆ ಒರೆಸಿದಂತೆ ಆಗಿದೆ. ನಾನು ನುಣುಚಿಕೊಳ್ಳುವ ವ್ಯಕ್ತಿ ಅಲ್ಲ. ನನಗೆ, ನನ್ನ ಕುಟುಂಬಕ್ಕೆ ಸೈಟ್ ಕೊಟ್ಟಿದ್ದರೆ ವಾಪಸ್ ತೋರಿಸಿ. ಯಾರ‌್ಯಾರು ಎಷ್ಟು ಸೈಟ್ ಕೊಟ್ಟಿದ್ದಾರೆ ಅಂತ ನನಗೂ ಗೊತ್ತಿದೆ. ಮಂತ್ರಿಗಳು ಕೇಳಿದ್ರೆ ನಾನೇ ಲಿಸ್ಟ್ ಕೊಡುತ್ತೇನೆ ಎಂದು ಹೇಳಿದ್ದಾರೆ.
ಜೆಡಿಎಸ್- ಬಿಜೆಪಿಯವರ ಹೆಸರು ಹೇಳಿದ್ದೀರಿ. ಕಾಂಗ್ರೆಸ್‌ನವರು ಯಾರೂ ಇಲ್ವಾ?. ನಮ್ಮ ಸ್ನೇಹಿತ ತನ್ವೀರ್ ಸೇಠ್ ಬಾಯಿ ಬಿಡಬೇಕು ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಟಾಂಗ್ ಕೊಟ್ಟಿದ್ದಾರೆ.