ಶಿರೂರು ದುರ್ಘಟನೆ ನಡೆದು 12 ದಿನವಾದ್ರೂ ಸಿಗದ ಜಗನ್ನಾಥ್ ಮೃತದೇಹ, ಈಗಲೂ ತಂದೆಗಾಗಿ ಕಾಯುತ್ತಿರೋ ಪುತ್ರಿಯರು..!

Published : Jul 27, 2024, 05:07 PM ISTUpdated : Jul 29, 2024, 03:47 PM IST
ಶಿರೂರು ದುರ್ಘಟನೆ ನಡೆದು 12 ದಿನವಾದ್ರೂ ಸಿಗದ ಜಗನ್ನಾಥ್ ಮೃತದೇಹ, ಈಗಲೂ ತಂದೆಗಾಗಿ ಕಾಯುತ್ತಿರೋ ಪುತ್ರಿಯರು..!

ಸಾರಾಂಶ

ಜಗನ್ನಾಥ್ ಮೃತದೇಹ ಹುಡುಕಾಟ ಮಾಡಲು ನಿರ್ಲಕ್ಷ್ಯ ವಹಿಸಲಾಗ್ತಿದೆ ಎಂದು ಜಗನ್ನಾಥ್ ಪತ್ನಿ ಹಾಗೂ ಪುತ್ರಿಯರು ಆರೋಪಿದ್ದಾರೆ. ಎಲ್ಲರೂ ಅರ್ಜುನ್ ಅರ್ಜುನ್ ಅಂತಿದ್ದಾರೆ, ನಮ್ಮ ತಂದೆಯ ವಿಚಾರ ಯಾರೂ ಎತ್ತುತ್ತಿಲ್ಲ, ಹುಡುಕಾಡ್ತಿಲ್ಲ. ದಯವಿಟ್ಟು ಜಗನ್ನಾಥ್ ಮೃತದೇಹ ಹುಡುಕಿಕೊಡಿ ಎಂದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.  

ಕಾರವಾರ(ಜು.27):  ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿತ ದುರ್ಘಟನೆ ನಡೆದು 12 ದಿನವಾದ್ರೂ ಜಗನ್ನಾಥ್ ಮೃತದೇಹ ಇನ್ನೂ ಸಿಕ್ಕಿಲ್ಲ. ಮೃತ ಜಗನ್ನಾಥ್ ನಾಯ್ಕ್‌ಗಾಗಿ ಅವರ ಪತ್ನಿ ಹಾಗೂ ಪುತ್ರಿಯರು ಈಗಲೂ ಕಾಯುತ್ತಿದ್ದಾರೆ. ಮೃತ ಜಗನ್ನಾಥ್ ಕುಟುಂಬ ಏಷಿಯಾನೆಟ್ ಸುವರ್ಣ ನ್ಯೂಸ್ ಜತೆ ನೋವು ತೋಡಿಕೊಂಡಿಕೊಂಡಿದ್ದಾರೆ. 

ಶಿರೂರು ದುರ್ಘಟನೆಯಲ್ಲಿ ಕ್ಯಾಂಟೀನ್ ಮಾಲೀಕ ಲಕ್ಷ್ಮಣ ನಾಯ್ಕ್ ಕುಟುಂಬದ ಜತೆ ಜಗನ್ನಾಥ್ ನಾಯ್ಕ್ ಸಾವಿಗೀಡಾಗಿದ್ದರು. ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಹುಡುಕಾಟ ಮಾತ್ರ ಮಾಡುತ್ತಿದ್ದಾರೆ ನಮ್ಮ ತಂದೆಯ ಹುಡುಕಾಟ ಮಾತ್ರ ಮಾಡುತ್ತಿಲ್ಲ. ನಮ್ಮ ತಂದೆಯ ಮೂಳೆ ಸಿಕ್ಕರೂ ಸಾಕು ಮುಂದಿನ ಕಾರ್ಯ ಮಾಡುತ್ತೇವೆ ಎಂದು ಹತಾಶೆಯಿಂದ ತಮ್ಮ ನೋವು ತೋಡಿಕೊಂಡಿದ್ದಾರೆ. 

ಉತ್ತರಕನ್ನಡ: ಶಿರೂರು ಗುಡ್ಡ ಕುಸಿತ ದುರ್ಘಟನೆಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆ

ಶಾಸಕರು ನಮ್ಮ ತಂಗಿಗೆ ಕೆಲಸ ಕೊಡಿಸುವುದಾಗಿ ಹೇಳಿದ್ದಾರೆ. ಮೊದಲು ನಮ್ಮ ತಂದೆಯನ್ನು ಹುಡುಕಿ ಕೊಡಲಿ ಎಂದು ತಂದೆಗಾಗಿ ಕಾದು ಕುಳಿತ ಪುತ್ರಿಯರಾದ ಮನೀಷ, ಪಲ್ಲವಿ, ಕೃತಿಕ ಹೇಳಿದ್ದಾರೆ. 

ಜಗನ್ನಾಥ್ ಮೃತದೇಹ ಹುಡುಕಾಟ ಮಾಡಲು ನಿರ್ಲಕ್ಷ್ಯ ವಹಿಸಲಾಗ್ತಿದೆ ಎಂದು ಜಗನ್ನಾಥ್ ಪತ್ನಿ ಹಾಗೂ ಪುತ್ರಿಯರು ಆರೋಪಿದ್ದಾರೆ. ಎಲ್ಲರೂ ಅರ್ಜುನ್ ಅರ್ಜುನ್ ಅಂತಿದ್ದಾರೆ, ನಮ್ಮ ತಂದೆಯ ವಿಚಾರ ಯಾರೂ ಎತ್ತುತ್ತಿಲ್ಲ, ಹುಡುಕಾಡ್ತಿಲ್ಲ. ದಯವಿಟ್ಟು ಜಗನ್ನಾಥ್ ಮೃತದೇಹ ಹುಡುಕಿಕೊಡಿ ಎಂದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ