ಸಾ.ರಾ. ಮೇಲಿನ ದ್ವೇಷದಿಂದ ಆರೋಪ ಮಾಡಿದರಾ ರೋಹಿಣಿ ಸಿಂಧೂರಿ..?

Kannadaprabha News   | Asianet News
Published : Jun 15, 2021, 03:10 PM IST
ಸಾ.ರಾ.  ಮೇಲಿನ ದ್ವೇಷದಿಂದ ಆರೋಪ ಮಾಡಿದರಾ ರೋಹಿಣಿ ಸಿಂಧೂರಿ..?

ಸಾರಾಂಶ

ಶಾಸಕ ಸಾ.ರಾ. ಮಹೇಶ್‌ ಅವರ ಮೇಲಿನ ದೇಷದಿಂದ ಕಾನೂನಿಗೆ ವಿರುದ್ಧವಾದ ಆದೇಶ  ಕೀಲ ಹಾಗೂ ಜೆಡಿಎಸ್‌ ವಕ್ತಾರ ಎನ್‌.ಆರ್‌. ರವಿಚಂದ್ರೇಗೌಡ ಪ್ರಶ್ನೆ ಸಾ.ರಾ. ಮಹೇಶ್‌ ಅವರ ಮೇಲೆ ಸಲ್ಲದ ಆರೋಪ ಮಾಡಿದ್ದಾರೆ ಎಂದು ಟೀಕೆ

 ಮೈಸೂರು (ಜೂ.15):  ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ಶಾಸಕ ಸಾ.ರಾ. ಮಹೇಶ್‌ ಅವರ ಮೇಲಿನ ದೇಷದಿಂದ ಕಾನೂನಿಗೆ ವಿರುದ್ಧವಾದ ಆದೇಶ ಹೊರಡಿಸಿರುವುದು ಸರಿಯೇ ಎಂದು ವಕೀಲ ಹಾಗೂ ಜೆಡಿಎಸ್‌ ವಕ್ತಾರ ಎನ್‌.ಆರ್‌. ರವಿಚಂದ್ರೇಗೌಡ ಪ್ರಶ್ನಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಅವರ ಅವಧಿ ಪೂರ್ಣಗೊಳ್ಳಲು 2 ತಿಂಗಳು ಬಾಕಿ ಇರುವಾಗಲೇ ವರ್ಗಾವಣೆ ಮಾಡಿದ್ದರಿಂದ ಸಿಎಟಿ ಮೊರೆ ಹೋಗಿದ್ದರು. ಆದರೆ ಐಎಎಸ್‌ ಅಧಿಕಾರಿ ಶರತ್‌ ಅವರನ್ನು 29 ದಿನವಾಗುತ್ತಿದ್ದಂತೆಯೇ ವರ್ಗಾಯಿಸಿ, ಅವರು ಬಂದಿದ್ದು ಸರಿಯೇ? ಅಲ್ಲದೆ ಆಡಳಿತಾತ್ಮಕ ಲೋಪವನ್ನು ಸಾ.ರಾ. ಮಹೇಶ್‌ ಅವರು ಎತ್ತಿ ತೋರಿಸಿದ್ದರಿಂದ ಮತ್ತು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ್ದರಿಂದ ಸಾ.ರಾ. ಮಹೇಶ್‌ ಅವರ ಮೇಲೆ ಸಲ್ಲದ ಆರೋಪ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ರೋಹಿಣಿ ಸಿಂಧೂರಿಯಿಂದ ಸರ್ಕಾರಕ್ಕೆ ಸುಳ್ಳು ವರದಿ .

ಸಾ.ರಾ. ಕಲ್ಯಾಣ ಮಂಟಪದಲ್ಲಿ ವಿಚಾರದಲ್ಲಿ ಅವರು ನೀಡಿರುವ ಹೇಳಿಕೆ ಕುರಿತು ಈಗಾಗಲೇ ತನಿಖೆ ಪ್ರಗತಿಯಲ್ಲಿದೆ. ಇನ್ನು ಲಿಂಗಾಬುದಿ ಕೆರೆ ಬಳಿಯ 2 ಎಕರೆ ಬಳಿಯ 2 ಎಕರೆ ಜಮೀನಿನಲ್ಲಿ ರೆಸಾರ್ಟ್‌ ನಿರ್ಮಿಸಲು ಪ್ರಯತ್ನಿಸುತ್ತಿರುವುದಾಗಿ ಮತ್ತು ಕೆರೆಯಿಂದ 70 ಮೀಟರ್‌ ವ್ಯಾಪ್ತಿವರೆಗೂ ಯಾವುದೇ ನಿರ್ಮಾಣ ಕೈಗೊಳ್ಳುವಂತಿಲ್ಲ ಎಂದು ಆದೇಶಿಸಿದ್ದಾರೆ. ಇಷ್ಟಕ್ಕೂ ಆ ಜಮೀನು ಸಾ.ರಾ. ಮಹೇಶ್‌ ಅವರ ಹೆಸರಿನಲ್ಲಿದ್ದು, ಮನೆ ನಿರ್ಮಿಸಲು ಅನುಮತಿ ಪಡೆಯಲಾಗಿದೆ. ಈ ವಿಷಯ ತಿಳಿದಿದ್ದರೂ ಕಾನೂನಿಗೆ ವಿರುದ್ಧವಾಗಿ ಈ ಆದೇಶ ಹೊರಡಿಸಿದ್ದಾರೆ ಎಂದು ಅವರು ದೂರಿದ್ದಾರೆ.

PREV
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!