ಮಂಡ್ಯ : ಜೆಡಿಎಸ್ ಮುಖಂಡಗೆ ಮಹತ್ವದ ಪಟ್ಟ

By Kannadaprabha NewsFirst Published Sep 17, 2019, 11:33 AM IST
Highlights

ಬಿಜೆಪಿ ಅಧಿಕಾರ  ಪಡೆಯಲು ಹರಸಾಹಸ ಮಾಡುತ್ತಿರುವ ಬೆನ್ನಲ್ಲೇ ಮಂಡ್ಯದಲ್ಲಿ ಜೆಡಿಎಸ್ ಮುಖಂಡ ಮಹತ್ವದ ಹುದ್ದೆ ಪಡೆದುಕೊಂಡಿದ್ದಾರೆ.

ಪಾಂಡವಪುರ [ಸೆ.17]:  ಪಟ್ಟಣದ ಮನ್ಮುಲ್ ಉಪಕಚೇರಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮನ್ಮುಲ್ ನೂತನ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ತಿಳಿಸಿದರು.

ಪಟ್ಟಣದ ಮನ್ಮುಲ್ ಉಪ ಕಚೇರಿಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಪಟ್ಟಣದಲ್ಲಿರುವ ಮನ್ಮುಲ್ ಉಪಕಚೇರಿಗೆ ಸ್ವಂತಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ನಮ್ಮ ಕ್ಷೇತ್ರದ ಶಾಸಕರಾದ ಸಿ.ಎಸ್‌.ಪುಟ್ಟರಾಜು ಸಹಕಾರ ಪಡೆದುಕೊಂಡು ಕಚೇರಿಗೆ ಸ್ವಂತ ನಿವೇಶನ ಗುರುತಿಸಿ ಕಟ್ಟಡವನ್ನು ನಿರ್ಮಿಸಿ ಅನುಕೂಲ ಮಾಡಿಕೊಡಬೇಕು ಎನ್ನುವುದು ನನ್ನ ಕನಸಾಗಿದೆ ಎಂದು ಹೇಳಿದರು. ಮನ್ಮುಲ್ ಒಕ್ಕೂಟದಲ್ಲಿ ಜೆಡಿಎಸ್‌ ಆಡಳಿತ ಮಂಡಳಿಯೇ ರಚನೆಯಾಗುವುದರಿಂದ ಮನ್ಮುಲ್‌ಗೆ ನಮ್ಮ ಪಕ್ಷದ ಹೈಕಮಂಡ್‌ ಯಾರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತಾರೋ ಅವರೇ ಅಧ್ಯಕ್ಷರಾಗುತ್ತಾರೆ.  ನಮ್ಮ ನಾಯಕರು, ನಮ್ಮ ಪಕ್ಷದ ವರಿಷ್ಠರ ಸೂಚನೆಯಂತೆ ನಾವು ನಡೆದುಕೊಳ್ಳುತ್ತೇವೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಮಚಂದ್ರು ಅವರನ್ನು ಮನ್ಮುಲ್ ಉಪವ್ಯವಸ್ಥಾಪಕ ಡಾ.ಮೋಹನ್‌ ಕುಮಾರ್‌, ಅಧಿಕಾರಿ, ಸಿಬ್ಬಂದಿ ಹಾಗೂ ವಿವಿಧ ಪಕ್ಷದ ಮುಖಂಡರು, ಬೆಂಬಲಿಗರು ಸಹ ರಾಮಚಂದ್ರು ಅವರನ್ನು ಸನ್ಮಾನಿಸಿದರು. ಈ ವೇಳೆ ಜೆಡಿಎಸ್‌ ಅಧ್ಯಕ್ಷ ಧರ್ಮರಾಜು, ಮನ್ಮುಲ್ ಮಾಜಿ ಅಧ್ಯಕ್ಷ ಕೆ.ವೈರಮುಡಿಗೌಡ, ಮುಖಂಡರಾದ ಹೊಸಕೋಟೆಪುಟ್ಟಣ್ಣ, ಕೆಂಚನಹಳ್ಳಿ ಕೆಂಪೇಗೌಡ, ಕುಳ್ಳೇಗೌಡ, ಧನಂಜಯ, ಆದರ್ಶ, ವಿರೂಪಾಕ್ಷ, ಸೋಮಣ್ಣ, ಬೋರೇಗೌಡ ಇದ್ದರು.

click me!