ಅನರ್ಹ ಶಾಸಕ ವಿಶ್ವನಾಥ್‌ ವಿರುದ್ಧ ಗಂಭೀರ ಆರೋಪ

Published : Sep 17, 2019, 11:01 AM ISTUpdated : Sep 17, 2019, 02:31 PM IST
ಅನರ್ಹ ಶಾಸಕ  ವಿಶ್ವನಾಥ್‌ ವಿರುದ್ಧ ಗಂಭೀರ ಆರೋಪ

ಸಾರಾಂಶ

ಅನರ್ಹ ಶಾಸಕ ಎಚ್. ವಿಶ್ವನಾಥ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ವಿಶ್ವನಾಥ್ ದ್ವೇಷದ ರಾಜಕಾರಣ ನಡೆಸುತ್ತಿದ್ದಾರೆ ಎಂದು ಹಲವು ನಾಯಕರು ದೂರಿದ್ದಾರೆ. 

ಭೇರ್ಯ [ಸೆ.17]:  ಶ್ರೀರಾಮ ಸಕ್ಕರೆ ಕಾರ್ಖಾನೆ ದುಸ್ಥಿತಿಗೆ ಅನರ್ಹ ಶಾಸಕ ಎಚ್‌. ವಿಶ್ವನಾಥ್‌ ಅವರ ದ್ವೇಷದ ರಾಜಕಾರಣವೇ ಕಾರಣ ಎಂದು ಗ್ರಾಪಂ ಅಧ್ಯಕ್ಷರ ಒಕ್ಕೂಟಗಳ ಮಾಜಿ ಅಧ್ಯಕ್ಷ ಮಂಜೇಗೌಡ ಮತ್ತು ಗ್ರಾಪಂ ಮಾಜಿ ಸದಸ್ಯ ಮು.ರಾ. ಹರ್ಷಕುಮಾರ್‌ ಗೌಡ ಹೇಳಿದರು.

ಮಾಜಿ ಸಚಿವ ಸಾ.ರಾ. ಮಹೇಶ್‌ ಅವರು ಎಚ್‌.ಡಿ. ಕುಮಾರಸ್ವಾಮಿ ಸರ್ಕಾರದ 2006ರ ಅವಧಿಯಲ್ಲಿ ಶ್ರೀರಾಮ ಸಕ್ಕರೆ ಕಾರ್ಖಾನೆ ಪುನಾರಂಭಿಸಲು ಗುತ್ತಿಗೆ ಕೊಡಿಸಿ, ನಂತರ ರೈತರ ಮತ್ತು ನೌಕರರ ಹಿತವನ್ನು ಕಾಪಾಡಿದರು. ಹಲವಾರು ವರ್ಷಗಳಿಂದ ರೈತರ ಕಬ್ಬಿನ ಬಾಕಿ ಹಣವನ್ನು ಕೊಡಿಸಿ, ಕಾರ್ಖಾನೆಯ ನೌಕರರು ಸಂಬಳವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇದ್ದಾಗ ನೌಕರರ ವೇತನವನ್ನು ಕೊಡಿಸಿದರು ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನೀವು ತಾಲೂಕಿನಲ್ಲಿ ಶಾಸಕರಾಗಿದ್ದ ವೇಳೆಯಲ್ಲಿ ಜಾತಿ ಜಾತಿಗಳನ್ನು ಎತ್ತಿಕಟ್ಟಿಹೊಡೆದಾಡಿದ ಕೀರ್ತಿ ನಿಮಗೆ ಸಲ್ಲುತ್ತದೆ ಎಂದು ಆರೋಪಿಸಿದರು. ನಿಮ್ಮ ಈ ವರ್ತನೆಯಿಂದ ತಾಲೂಕಿನ ಜನರು ಸೋಲಿಸಿದ್ದು, ನಮ್ಮ ನಾಯಕರಾದ ಸಾ.ರಾ. ಮಹೇಶ್‌ ಅವರು ಶಾಸಕರಾಗಿ ಆಯ್ಕೆಯಾದ ಮೇಲೆ ಯಾವುದೇ ಘರ್ಷಣೆಗಳಾಗಲಿ ಅಥವಾ ಕೋಮುಗಲಭೆಗಳು ನಡೆದಿಲ್ಲ ಎಂದು ಹೇಳಿದರು.

PREV
click me!

Recommended Stories

Karnataka News Live: ಮುಂದುವರಿದ ಸಿಎಂ ಕುರ್ಚಿ ಕದನ ಜನವರಿ 6ಕ್ಕೆ ಡಿಕೆಶಿ ಸಿಎಂ: ಮತ್ತೆ ಆಪ್ತ ಶಾಸಕರ ಬಾಂಬ್
ವನ್ಯಜೀವಿ ಸಂರಕ್ಷಣೆ: ಏಷ್ಯಾನೆಟ್ ಸುವರ್ಣ ನ್ಯೂಸ್ & ಕನ್ನಡಪ್ರಭದ ಅಭಿಯಾನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸಾಥ್!