ಕೊರೋನಾ ಲಸಿಕೆ ಪಡೆದ ಬಳಿಕ ವೈದ್ಯಗೆ ತಲೆಸುತ್ತು

By Kannadaprabha News  |  First Published Jan 17, 2021, 10:03 AM IST

ಕೊರೋನಾ ಲಸಿಕೆ ಪಡೆದ ಬಳಿಕ ವೈದ್ಯರೋರ್ವರಿಗೆ ತಲೆ ಸುತ್ತು ಕಾಣಿಸಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ


ತುಮಕೂರು (ಜ.17):  ರಾಜ್ಯದಲ್ಲಿ ಈಗಾಗಲೇ ಕೊರೋನಾ ಲಸಿಕಾ ಪ್ರಕ್ರಿಯೆ ಆರಂಭವಾಗಿದೆ. ಹಲವೆಡೆ ಲಸಿಕೆ ವಿತರಣೆಯೂ ನಡೆಯುತ್ತಿದೆ. 

ಕೊರೋನಾ ಲಸಿಕೆ ಹಾಕಿಸಿಕೊಂಡ ಬಳಿಕ ದಂತ ವೈದ್ಯರೊಬ್ಬರಿಗೆ ತಲೆ ಸುತ್ತು ಬಂದಿರುವ ಘಟನೆ ಕೊರಟಗೆರೆ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

Tap to resize

Latest Videos

ಲಸಿಕೆ ಹಾಕಿಸಿಕೊಂಡ ಬಳಿಕ ತಲೆ ಸುತ್ತು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ತಪಾಸಣೆಗೆ ಒಳಪಡಿಸಿದಾಗ ಲಸಿಕೆಯಿಂದ ಯಾವುದೇ ರಿಯಾಕ್ಷನ್‌ ಆಗಿರಲಿಲ್ಲ. ಗಾಬರಿಗೆ ಈ ರೀತಿ ಆಗಿದೆ ಎಂದು ಡಿಹೆಚ್‌ಓ ನಾಗೇಂದ್ರಪ್ಪ ಕನ್ನಡಪ್ರಭ ಕ್ಕೆ ತಿಳಿಸಿದ್ದಾರೆ.

ಕೋವಿಡ್‌ ಲಸಿಕೆ ಪಡೆಯಲು ನಾನು ಸಿದ್ಧ: ಬಿಎಸ್‌ವೈ ..

ನಾನೇ ಖುದ್ದಾಗಿ ಕೊರಟಗೆರೆ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ್ದು ಆ ದಂತ ವೈದ್ಯರು ಈಗ ಆರಾಮಾಗಿ ತಮ್ಮ ದೈನಂದಿನ ಕೆಲಸದಲ್ಲಿ ತೊಡಗಿಕೊಂಡಿರುವುದಾಗಿ ತಿಳಿಸಿದರು.

click me!