ಬಚ್ಚೇಗೌಡರ ಪಕ್ಷಾಂತರ..? : ಏನ್ ಹೇಳಿದ್ರು ಮುಖಂಡ?

By Kannadaprabha News  |  First Published Mar 16, 2021, 2:46 PM IST

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿದ್ದು ಇದೇ ವೇಳೆ ಕೆಲವು ಪಕ್ಷಾಂತರಗಳು ಆಗುತ್ತಿದೆ. ಇದರ ಬೆನ್ನಲ್ಲೇ ಮುಖಂಡರೋರ್ವರ ಪಕ್ಷಾಂತರ ಸುದ್ದಿಯೂ ಸದ್ದಾಗಿದೆ. 


ಚಿಕ್ಕಬಳ್ಳಾಪುರ (ಮಾ.16):  ಚುನಾವಣೆ ನಡೆಸುವುದು, ಸ್ಪರ್ಧಿಸುವುದು ಹುಡುಗಾಟಿಕೆ ವಿಚಾರ ಅಲ್ಲ. ಈಗಾಗಲೇ ನಾನು ಮೂರು ಚುನಾವಣೆಗಳನ್ನು ಎದುರಿಸಿದ್ದೇನೆ.   2018ರ ವಿಧಾನಸಭಾ ಚುನಾವಣೆ ವೇಳೆಯು ಸಹ ಇದು ನನ್ನ ಕಡೆ ಚುನಾವಣೆ ಅಂತ ಹೇಳಿ ಸ್ಪರ್ಧಿಸಿದ್ದೆ. ಮುಂದೆ 2023ಕ್ಕೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಪಕ್ಷದ ವರಿಷ್ಠರು ಹಾಗೂ ನಾನು ತೆಗೆದುಕೊಳ್ಳುವ ತಿರ್ಮಾನದ ಮೇಲೆ ಎಲ್ಲವೂ ನಿರ್ಧಾರವಾಗಲಿದೆಯೆಂದು ಕ್ಷೇತ್ರದ ಜೆಡಿಎಸ್‌ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ತಿಳಿಸಿದರು.

ನಗರದಲ್ಲಿ  ಪಕ್ಷದ ನೂತನ ಜಿಲ್ಲಾ ಹಾಗೂ ತಾಲೂಕು ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇವತ್ತಿನ ವ್ಯವಸ್ಥೆಯಲ್ಲಿ ಚುನಾವಣೆ ಎದುರಿಸಬೇಕಾದರೆ ಯಾವ ರೀತಿ ಕಷ್ಟ, ತೊಂದರೆಗಳು ಇವೆ ಎಂಬುದು ನನಗೆ ಚೆನ್ನಾಗಿ ಅರಿವು ಆಗಿದೆ. ನಾನು ಎದುರಿಸಿದ ಮೂರು ಚುನಾವಣೆಗಳಲ್ಲಿ ಅದರ ಅನುಭವ ಆಗಿದೆ. ಆದರೆ ಬೇರೆ ಪಕ್ಷ ಸೇರುತ್ತೇನೆಂಬ ಉಹಾಪೋಹ ತಳ್ಳಿ ಹಾಕಿದರು. ಬಿಜೆಪಿ ಸೇರುವ ವದಂತಿಗೆ ತೆರೆ ಎಳೆದರು.

Tap to resize

Latest Videos

ಬಿಜೆಪಿಯಲ್ಲಿ ಯತ್ನಾಳ್‌ ಉಚ್ಚಾಟನೆಯ ಕೂಗು ಜೋರು..! ...

2019ರ ಉಪ ಚುನಾವಣೆಯಲ್ಲಿ ಕೂಡ ನಾನು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದೇನೆ. ಆದರೆ ನಮ್ಮ ಪಕ್ಷ ಕ್ಷೇತ್ರದಲ್ಲಿ ಪ್ರತಿ ಚುನಾವಣೆಯಲ್ಲಿ ಯಾವಾಗಲು ಮೊದಲ ಅಥವಾ ಎರಡನೇ ಸ್ಥಾನ ಪಡೆಯುತ್ತಿದ್ದ ಪಕ್ಷ. ಉಪ ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆಯಬೇಕಾಯಿತು. ಹೊರಗಿನಿಂದ ಅಭ್ಯರ್ಥಿಯನ್ನು ತಂದ ಪರಿಣಾಮ ಪಕ್ಷದ ಅನೇಕ ಮುಖಂಡರು ಬಿಜೆಪಿ, ಕಾಂಗ್ರೆಸ್‌ ಕಡೆಗೆ ವಾಲಿದರೆಂದರು.

click me!