ಕೋವಿಡ್ ಆಸ್ಪತ್ರೆಗೆ ತೆರಳಲು ಜೆಡಿಎಸ್ ಮುಖಂಡ ರಂಪಾಟ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಸೋಂಕು ದೃಢವಾದ್ರೂ ಮಂಡ್ಯದ ಕೋವಿಡ್ ಆಸ್ಪತ್ರೆಗೆ ಬರಲು ಜೆಡಿಎಸ್ ಮುಖಂಡ ಕಿರಿಕ್ ಮಾಡಿದ್ದಾರೆ.
ಮಂಡ್ಯ(ಜು.05): ಕೋವಿಡ್ ಆಸ್ಪತ್ರೆಗೆ ತೆರಳಲು ಜೆಡಿಎಸ್ ಮುಖಂಡ ರಂಪಾಟ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಸೋಂಕು ದೃಢವಾದ್ರೂ ಮಂಡ್ಯದ ಕೋವಿಡ್ ಆಸ್ಪತ್ರೆಗೆ ಬರಲು ಜೆಡಿಎಸ್ ಮುಖಂಡ ಕಿರಿಕ್ ಮಾಡಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲದ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿರುವ ಸೋಂಕಿತ ಮುಖಂಡ ನಾನು ಆಸ್ಪತ್ರೆಗೆ ಬರಲ್ಲ. ಮನೆಯಲ್ಲೇ ಐಸೋಲೇಷನ್ ಆಗುತ್ತೇನೆಂದು ಪಟ್ಟು ಹಿಡಿದಿದ್ದಾರೆ.
ಕೊರೋನಾ ತಡೆಗಾಗಿ 15 ದಿನ ಲಾಕ್ಡೌನ್ಗೆ ಜೆಡಿಎಸ್ ಆಗ್ರಹ
ಆರೋಗ್ಯ ಸಚಿವ ಶ್ರೀರಾಮುಲು ಅವರ ಜತೆ ಮಾತನಾಡಿದ್ದೇನೆ. ನಾನು ಮನೆಯಲ್ಲೇ ಇರುತ್ತೇನೆಂದು ಕಿರಿಕ್ ಮಾಡಿದ್ದಾರೆ. ಮನೆಯ ಮುಂದೆ ಹೈಡ್ರಾಮ ಸೃಷ್ಟಿ ಮಾಡಿದ್ದ ಸೋಂಕಿತ ಮುಖಂಡ ಸಿಬ್ಬಂದಿ ಒತ್ತಾಯಿಸಿದರೂ ಹಠ ಮಾಡಿದ್ದಾರೆ.
ಟಿಎಚ್ಓ ಡಾ.ಧನಂಜಯ್ ಸೇರಿದಂತೆ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರೂ ಒಪ್ಪದೇ ಪಟ್ಟು ಹಿಡಿದಿದ್ದ ಸೋಂಕಿತ ಕೆಲವು ರಾಜಕಾರಣಿಗಳಿಂದ ಅಧಿಕಾರಿಗಳಿಗೆ ಫೋನ್ ಮೂಲಕ ಒತ್ತಡ ಹಾಕಿದ್ದರು.
ಕೊರೋನಾ ಭಯ: ಪ್ರವಾಸಿಗರ ವಾಹನ ತಡೆದು ವಾಪಸ್ ಕಳುಹಿಸಿದ ಗ್ರಾಮಸ್ಥರು
ಸತತ ಒಂದು ಗಂಟೆ ಮನವೊಲಿಕೆ ಬಳಿಕ ಆಸ್ಪತ್ರೆಗೆ ಬರಲು ಒಪ್ಪಿಗೆ ನೀಡಿದ್ದು, ಟಿಎಚ್ಓ ಡಾ.ಧನಂಜಯ ಅವರು ಮನವೊಲಿಸಿದ್ದಾರೆ. ಸಿಬ್ಬಂದಿ ಸುಮಾರು ಒಂದು ಗಂಟೆ ಮನೆಯ ಮುಂದೆ ಆಂಬ್ಯುಲೆನ್ಸ್ ನಿಲ್ಲಿಸಿಕೊಂಡು ನಿಂತಿದ್ದರು.
2 ದಿನದ ಹಿಂದೆ ಪುತ್ರನಿಗೆ ಸೋಂಕು ದೃಢಪಟ್ಟಿತ್ತು. ಬಳಿಕ ಕುಟುಂಬದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ರಿಪೋರ್ಟ್ ನಲ್ಲಿ ಕುಟುಂಬದ 6 ಮಂದಿಗೆ ಸೋಂಕಿರುವುದು ದೃಢವಾಗಿದೆ.