ಕೊರೋನಾ ತಡೆ​ಗಾಗಿ 15 ದಿನ ಲಾಕ್‌​ಡೌ​ನ್‌ಗೆ ಜೆಡಿ​ಎಸ್‌ ಆಗ್ರ​ಹ

By Kannadaprabha News  |  First Published Jul 5, 2020, 11:24 AM IST

ಕೊಡಗು ಜಿಲ್ಲೆಯಲ್ಲಿ ಕೊರೋನಾ ತಡೆ​ಗಾಗಿ ಮುನ್ನೆ​ಚ್ಚ​ರಿಕೆ ಕ್ರಮ​ವಾಗಿ 15 ದಿವಸ ಲಾಕ್‌ಡೌನ್‌ ಘೋಷಣೆ ಮಾಡಬೇಕು ಎಂದು ಜಿಡಿಎಸ್‌ ಜಿಲ್ಲಾ ವಕ್ತಾರ ಎಂ.ಟಿ. ಕಾರ್ಯಪ್ಪ ಒತ್ತಾಯಿಸಿದ್ದಾರೆ.


ಮಡಿಕೇರಿ(ಜು.05): ಕೊಡಗು ಜಿಲ್ಲೆಯಲ್ಲಿ ಕೊರೋನಾ ತಡೆ​ಗಾಗಿ ಮುನ್ನೆ​ಚ್ಚ​ರಿಕೆ ಕ್ರಮ​ವಾಗಿ 15 ದಿವಸ ಲಾಕ್‌ಡೌನ್‌ ಘೋಷಣೆ ಮಾಡಬೇಕು ಎಂದು ಜಿಡಿಎಸ್‌ ಜಿಲ್ಲಾ ವಕ್ತಾರ ಎಂ.ಟಿ. ಕಾರ್ಯಪ್ಪ ಒತ್ತಾಯಿಸಿದ್ದಾರೆ.

ಗೋಣಿಕೊಪ್ಪ: ಕೊಡಗು ಜಿಲ್ಲೆಯಲ್ಲಿ ಕೊರೋನಾ ತಡೆ​ಗಾಗಿ ಮುನ್ನೆ​ಚ್ಚ​ರಿಕೆ ಕ್ರಮ​ವಾಗಿ 15 ದಿವಸ ಲಾಕ್‌ಡೌನ್‌ ಘೋಷಣೆ ಮಾಡಬೇಕು ಎಂದು ಜಿಡಿಎಸ್‌ ಜಿಲ್ಲಾ ವಕ್ತಾರ ಎಂ.ಟಿ. ಕಾರ್ಯಪ್ಪ ಒತ್ತಾಯಿಸಿದ್ದಾರೆ.

Tap to resize

Latest Videos

ಕೊರೋನಾ ಭಯ: ಪ್ರವಾ​ಸಿ​ಗರ ವಾಹನ ತಡೆದು ವಾಪಸ್‌ ಕಳು​ಹಿ​ಸಿದ ಗ್ರಾಮ​ಸ್ಥ​ರು

ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಆಗಮಿಸಿದವರಿಂದ ಕೊರೋನಾ ಹರಡುತ್ತಿರುವುದು ಕೊಡಗಿನ ಜನತೆಯಲ್ಲಿ ಆತಂಕ ತಂದಿದೆ. ದಕ್ಷಿಣ ಕೊಡಗಿನ ಗೋಣಿಕೊಪ್ಪ, ಪಾಲಿಬೆಟ್ಟ, ಬಿಟ್ಟಂಗಾಲ, ವಿರಾಜಪೇಟೆ ಭಾಗದಲ್ಲಿ ಹರಡಲು ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.

ಕಾನೂನು ಬಾಹಿರವಾಗಿ ಬರುವ ಪ್ರವಾಸಿಗರನ್ನು ತಡೆಯಬೇಕು. ಇದೀಗ ಕೇರಳ ರಾಜ್ಯದ ಗಡಿ ಭಾಗದಿಂದ ಅನೇಕ ಕಾರ್ಮಿಕರು ತೋಟ ಕೆಲಸಕ್ಕೆ ಬರುತ್ತಿದ್ದು ಕೊರೋನಾ ಹರಡುವ ಸಾಧ್ಯತೆಯಿದೆ. ಕೊಡಗಿನ ಮೀನು ಮಾರಾಟವನ್ನು ಸಂಪೂರ್ಣ ನಿಲ್ಲಿಸಬೇಕು. ರಸ್ತೆ ಬದಿ ಮಾರಾಟ ನಿರ್ಬಂಧಿಸಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

click me!