ಜೆಡಿಎಸ್‌ ತೆಕ್ಕೆಗೆ ಒಲಿಯಿತು ಅಧಿಕಾರ

Kannadaprabha News   | Asianet News
Published : Feb 02, 2021, 12:11 PM IST
ಜೆಡಿಎಸ್‌ ತೆಕ್ಕೆಗೆ ಒಲಿಯಿತು ಅಧಿಕಾರ

ಸಾರಾಂಶ

JDS ಅಧಿಕಾರ ಗಳಿಸುಕೊಳ್ಳುವಲ್ಲಿ ಸಫಲವಾಗಿದೆ. ಕಡಿಮೆ ಸಂಖ್ಯೆಯಲ್ಲಿ ಸ್ಥಾನಬಲ ಹೊಂದಿದ್ದರೂ ಅಧಿಕಾರ ಪಡೆದುಕೊಂಡಿದೆ. 

ಬೇಲೂರು (ಫೆ.02):  14 ಸದಸ್ಯ ಬಲವುಳ್ಳ ತೊಳಲು ಗ್ರಾಮ ಪಂಚಾಯಿತಿಯಲ್ಲಿ 6 ಸದಸ್ಯರ ಬಲವುಳ್ಳ ಜೆಡಿಎಸ್‌ ಅ​ಧಿಕಾರ ಪಡೆಯಲು ಯಶಸ್ವಿಯಾಯಿತು.

ತೊಳಲು ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 14 ಜನ ಸದಸ್ಯರ ಬಲವಿದ್ದು 6 ಜೆಡಿಎಸ್‌, 8 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಶೀಲರಾಗಿದ್ದರು.

ಅಧ್ಯಕ್ಷರ ಮೀಸಲು ಪ್ರಕಟವಾದ ಬಿಸಿಎಂ ಎ ವರ್ಗಕ್ಕೆ ಮೀಸಲಿದ್ದಿದ್ದರಿಂದ ಒಟ್ಟು ಮೂರು ಬಿಸಿಎಂ ಎ ಸದಸ್ಯರು ಒಂದೇ ಪಕ್ಷದಲ್ಲಿ ಇದ್ದಿದ್ದರಿಂದ ಹಾಗೂ ಅಧ್ಯಕ್ಷರ ಸ್ಥಾನಕ್ಕೆ ಎನ್‌ ನಿಡಗೋಡು ಕ್ಷೇತ್ರದ ರಂಜಿತಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.

'ಬಿಜೆಪಿಯನ್ನು ಟೀಕಿಸುತ್ತಿರುವ ವಿಶ್ವನಾಥ್ ಯಾವ ಪಕ್ಷಕ್ಕೆ ಹೋಗ್ತಾರೆ'?

ಉಪಾಧ್ಯಕ್ಷೆ ಸ್ಥಾನಕ್ಕೆ ಚುನಾವಣೆ ನಡೆದು ಸುಜಾತಾ ಹಾಗೂ ರಮ್ಯಾ ಇಬ್ಬರೂ ನಾಮಪತ್ರ ಸಲ್ಲಿಸಿದ್ದರಿಂದ ಸುಜಾತಾ 8 ಮತಗಳನ್ನು ಪಡೆಯುವ ಮೂಲಕ ಉಪಾಧ್ಯಕ್ಷ ರಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಎಚ್‌ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಎ.ನಾಗರಾಜ್‌, ಈ ಗ್ರಾಪಂ ಈ ಹಿಂದಿನಿಂದಲೂ ಜೆಡಿಎಸ್‌ ತಮ್ಮ ತೆಕ್ಕೆಯಲ್ಲಿದ್ದು, ತೊಳಲು ಗ್ರಾಮಪಂಚಾಯಿತಿ ಎ ಗ್ರೇಡ್‌ ಆಗಿರುವುದರಿಂದ ಹೆಚ್ಚು ಅನುದಾನ ಬರುವುದರಿಂದ ಯಾವುದೇ ತಾರತಮ್ಯ ಇಲ್ಲದೆ ಅಭಿವೃದ್ಧಿ ಮಾಡಲಾಗುವುದು. ಅಲ್ಲದೆ ನಮ್ಮ ವರಿಷ್ಠರ ತೀರ್ಮಾನದಂತೆ ನಮ್ಮಲ್ಲಿ ಮೂರು ಜನ ಬಿಸಿಎಂ ಇದ್ದು, ಮುಂದೆ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿ ಸಿಹಿ ಹಂಚಿದರು.

ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಎಚ್‌.ಮಹೇಶ್‌, ಗ್ರಾಪಂ ಸದಸ್ಯರಾದ ಚಂದ್ರಶೇಖರ್‌, ಚಂದ್ರು, ಗೀತಾ, ರಮ್ಯ, ಸುಧಾ ಸುರೇಶ್‌, ಜಯರಾಂ, ಪ್ರಸನ್ನ, ನಾಗರಾಜ್‌, ವೆಂಕಟೇಶ್‌ ಮಂಜೇಗೌಡ ಇದ್ದರು.

ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆಯಾಗದಿದ್ದರೂ ಉಪಾಧ್ಯಕ್ಷ ರಾಗಿ ನಮ್ಮ ಪಕ್ಷದ ಸುಜಾತಾ ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ತಾರತಮ್ಯ ಇಲ್ಲದೆ ಈ ಗ್ರಾಮವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಬಿಜೆಪಿ ಮುಖಂಡ ಸಂತೋಷ್‌ ತಿಳಿಸಿದರು.

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು