ಮೇಯರ್ ಸ್ಥಾನ JDS, ಕಾಂಗ್ರೆಸ್ ಮೈತ್ರಿ ಪಾಲು: ಬಿಜೆಪಿಗೆ ಭಾರೀ ಮುಖಭಂಗ

By Suvarna NewsFirst Published Jan 30, 2020, 2:22 PM IST
Highlights

ಮೈಸೂರು ನಗರಸಭೆ ಚುನಾವಣೆಯಲ್ಲಿ ಇತ್ತೀಚೆಗಷ್ಟೇ ಗೆಲುವಿನ ನಗೆ ಬೀರಿದ್ದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ತುಮಕೂರಿನಲ್ಲಿ ಗೆಲುವಿನ ಪತಾಕೆ ಹಾರಿಸುವಲ್ಲಿ ಯಶಸ್ವಿಯಾಗಿದೆ. ಸತತ ಸೋಲುಂಡ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.

ತುಮಕೂರು(ಜ.30): ಮೈಸೂರು ನಗರಸಭೆ ಚುನಾವಣೆಯಲ್ಲಿ ಇತ್ತೀಚೆಗಷ್ಟೇ ಗೆಲುವಿನ ನಗೆ ಬೀರಿದ್ದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ತುಮಕೂರಿನಲ್ಲಿ ಗೆಲುವಿನ ಪತಾಕೆ ಹಾರಿಸುವಲ್ಲಿ ಯಶಸ್ವಿಯಾಗಿದೆ. ಸತತ ಸೋಲುಂಡ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.

ಗುರುವಾರ ಮಹಾನಗರ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆ ನಡೆದಿದ್ದು, ಈ ಬಾರಿಯೂ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮುಂದುವರಿದಿದೆ. ಕಾಂಗ್ರೆಸ್ ಪಕ್ಷದ ಪರೀದ ಬೇಗಂ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಮೈಸೂರು ಮೇಯರ್ ಸ್ಥಾನಕ್ಕೇರಿದ ಮೊದಲ ಮುಸ್ಲಿಮ್ ಮಹಿಳೆ!

ಜೆಡಿಎಸ್ ಪಕ್ಷದ ಶಶಿಕಲಾ ಗಂಗಹನುಮಯ್ಯ ಉಪಮೇಯರ್ ಆಗಿ ಆಯ್ಕೆಯಾಗಿದ್ದು, ತುಮಕೂರು ಪಾಲಿಕೆ ಬಿಜೆಪಿ12, ಕಾಂಗ್ರೆಸ್ 10, ಜೆಡಿಎಸ್ 10,  ಪಕ್ಷೇತರ ಇಬ್ಬರು ಸದಸ್ಯರ ಬಲಾಬಲ ಹೊಂದಿದೆ.

ಕಾಡು ಪ್ರಾಣಿಗಳನ್ನು ಕಟ್ಟಿ ನಾಯಿಗಳಿಂದ ಕಚ್ಚಿಸ್ತಾರೆ..!

ರಾಜ್ಯದಲ್ಲಿ ಜೆಡಿಎಸ್‌ ಕಾಂಗ್ರೆಸ್ ಮೈತ್ರಿ ಮುರಿದುಬಿದ್ದರೂ ಜಿಲ್ಲಾ ಮಟ್ಟದಲ್ಲಿ, ಪಾಲಿಕೆಗಳಲ್ಲಿ ಮೈತ್ರಿಗೆ ಯಾವುದೇ ತೊಂದರೆಯಾಗಿಲ್ಲ. ನಗರಸಭೆ ಚುನಾವಣೆಗಳಲ್ಲಿ ಮೈತ್ರಿ ಜೊತೆಯಾಗಿದ್ದು, ಬಿಜೆಪಿಗೆ ಭಾರಿ ಮುಖಭಂಗವಾಗಿದೆ. ಹಾಲಿ  ಶಾಸಕರು, ಎಂಪಿ ಇದ್ದರೂ ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ.

click me!