Chikkaballapura 5 ಕ್ಷೇತ್ರಗಳಿಗೆ ಜೆಡಿಎಸ್‌ ಅಭ್ಯರ್ಥಿ ಪಟ್ಟಿಪ್ರಕಟ

By Kannadaprabha News  |  First Published Dec 20, 2022, 5:38 AM IST

ರಾಜ್ಯದಲ್ಲಿ ಮುಂಬರುವ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಇನ್ನು ಆರು ತಿಂಗಳು ಬಾಕಿ ಇರುವಾಗಲೇ ಜೆಡಿಎಸ್‌ ಸೋಮವಾರ 93 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪ್ರಕಟಿಸಿದ್ದು ಜಿಲ್ಲೆಯ 5 ಕ್ಷೇತ್ರಗಳಿಗೆ ಹುರಿಯಾಳುಗಳನ್ನು ಅಧಿಕೃತವಾಗಿ ಪ್ರಕಟಿಸುವ ಮೂಲಕ ಚುನಾವಣೆಗೆ ರಣಕಹಳೆ ಮೊಳಗಿಸಿದೆ.


  ಚಿಕ್ಕಬಳ್ಳಾಪುರ (ಡಿ.20): ರಾಜ್ಯದಲ್ಲಿ ಮುಂಬರುವ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಇನ್ನು ಆರು ತಿಂಗಳು ಬಾಕಿ ಇರುವಾಗಲೇ ಜೆಡಿಎಸ್‌ ಸೋಮವಾರ 93 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪ್ರಕಟಿಸಿದ್ದು ಜಿಲ್ಲೆಯ 5 ಕ್ಷೇತ್ರಗಳಿಗೆ ಹುರಿಯಾಳುಗಳನ್ನು ಅಧಿಕೃತವಾಗಿ ಪ್ರಕಟಿಸುವ ಮೂಲಕ ಚುನಾವಣೆಗೆ ರಣಕಹಳೆ ಮೊಳಗಿಸಿದೆ.

ಸದ್ಯ ಜಿಲ್ಲೆಯ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಸತತ ಎರಡು ಬಾರಿ ಜೆಡಿಎಸ್‌ ಶಾಸಕರು ಗೆಲ್ಲುವು ಸಾಧಿಸಿಕೊಂಡು ಬರುತ್ತಿರುವುದು ಬಿಟ್ಟರೆ ಶಿಡ್ಲಘಟ್ಟ, ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದಿತ್ತು. ಬಾಗೇಪಲ್ಲಿ ಕ್ಷೇತ್ರದಲ್ಲಿ ಮೂರನೇ ಸ್ಥಾನ ಪಡೆದಿತ್ತು.

Tap to resize

Latest Videos

ಆದರೆ ಈ ಬಾರಿ 123 ಸೀಟು ಗೆಲ್ಲುವ ಗುರಿಯೊಂದಿಗೆ ಜೆಡಿಎಸ್‌ ಚುನಾವಣೆಗೆ ಒಂದು ವರ್ಷ ಇರುವಾಗಲೇ ಜನತಾ ಜಲಧಾರೆ ನಡೆಸಿ ಯಶಸ್ವಿಗೊಂಡ ಬೆನ್ನಲೇ ತಿಂಗಳಿಂದ ಪಂಚರತ್ನ ರಥಯಾತ್ರೆ ಮೂಲಕ ಮತದಾರರ ಭೇಟೆ ಮುಂದವರಿಸಿದ್ದು ಜಿಲ್ಲೆಯಲ್ಲಿ ಕೂಡ 5 ದಿನಗಳ ಪಂಚರತ್ನ ರಥಯಾತ್ರೆಯು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದಿತ್ತು. ಇದೀಗ ಚುನಾವಣೆಗೆ ಸಜ್ಜಾಗುವ ನಿಟ್ಟಿನಲ್ಲಿ ಜಿಲ್ಲೆಯ 5 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಮುಂಚಿತವಾಗಿಯೆ ಪ್ರಕಟಿಸುವ ಮೂಲಕ ಕಾಂಗ್ರೆಸ್‌, ಬಿಜೆಪಿಗೆ ಸೆಡ್ಡು ಹೊಡೆಯಲು ಮುಂದಾಗಿರುವ ಜೆಡಿಎಸ್‌ ಅಭ್ಯರ್ಥಿಗಳ ಅಂತಿಮ ಪಟ್ಟಿಪ್ರಕಟಿಸುವ ಮೂಲಕ ಚುನಾವಣೆಗೆ ಭರ್ಜರಿ ತಯಾರಿಗೆ ಮುಂದಾಗಿದೆ.

ಅಲ್ಲದೇ ಪಂಚರತ್ನ ರಥಯಾತ್ರೆ ವೇಳೆ ಘೋಷಿಸಿರುವಂತೆ ಚಿಂತಾಮಣಿ, ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಬಾಗೇಪಲ್ಲಿಯಲ್ಲಿ ಮಾತ್ರ ಪಕ್ಷದ ಅಭ್ಯರ್ಥಿ ಬಗ್ಗೆ ತುಸು ಭಿನ್ನಾಭಿಪ್ರಾಯ ಬಿಟ್ಟರೆ ಬೇರೆ ಯಾವ ಕ್ಷೇತ್ರದಲ್ಲೂ ಕೂಡ ಜೆಡಿಎಸ್‌ಗೆ ಬಂಡಾಯದ ಕಾಟ ಇಲ್ಲ ಎನ್ನುವುದು ವೀಶೇಷ

ದಳದ ಅಧಿಕೃತ ಅಭ್ಯರ್ಥಿಗಳು ಪಟ್ಟಿ

ಚಿಂತಾಮಣಿ ಕ್ಷೇತ್ರ ಜೆಕೆ ಕೃಷ್ಣಾರೆಡ್ಡಿ

ಚಿಕ್ಕಬಳ್ಳಾಪುರ ಕ್ಷೇತ್ರ ಕೆ.ಪಿ.ಬಚ್ಚೇಗೌಡ

ಶಿಡ್ಲಘಟ್ಟ ಕ್ಷೇತ್ರ ರವಿಕುಮಾರ್‌

ಬಾಗೇಪಲ್ಲಿ ಕ್ಷೇತ್ರ ಡಿ.ಜೆ.ನಾಗರಾಜರೆಡ್ಡಿ

ಗೌರಿಬಿದನೂರು ಕ್ಷೇತ್ರ ನರಸಿಂಹಮೂರ್ತಿ

HDK ಹವಾ

ಹಾರೋ​ಹ​ಳ್ಳಿ /ಕನಕಪುರ: (ಡಿ. 19):  ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಹಾಗೂ ಸಂಸದ ಡಿ.ಕೆ.​ಸು​ರೇಶ್‌ ಸಹೋ​ದ​ರರ ಸ್ವಕ್ಷೇತ್ರ ಕನ​ಕ​ಪು​ರ​ದಲ್ಲಿ ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಭಾನು​ವಾರ ಪಂಚ​ರ​ತ್ನ ರಥ​ಯಾತ್ರೆ ಮೂಲಕ ಅಬ್ಬ​ರಿ​ಸಿ​ದರು.

(Ramanagar)  ಕ್ಷೇತ್ರ ವ್ಯಾಪ್ತಿಯ ಹಾರೋ​ಹ​ಳ್ಳಿ - ಮರ​ಳ​ವಾ​ಡಿಯಲ್ಲಿ ಬಹಿ​ರಂಗ ಸಭೆ ಮುಗಿಸಿ ತೊಪ್ಪ​ಗ​ನ​ಹಳ್ಳಿ ಮೂಲಕ ಕನ​ಕ​ಪುರ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ(HD Kumaraswamy)  ಅವ​ರಿಗೆ ಪಕ್ಷದ ಕಾರ್ಯ​ಕ​ರ್ತರು ಹಾಗೂ ಅಭಿ​ಮಾ​ನಿ​ಗಳು ಬೃಹತ್‌ ಗಾತ್ರದ ಹೂವಿನ ಹಾರ ಹಾಕುವ ಮೂಲಕ ಅದ್ಧೂರಿಯಾಗಿ ಬರಮಾಡಿ​ಕೊಂಡರು.

ನೂರಾರು ಯುವಕರ ಗುಂಪಿನೊಂದಿಗೆ ಬೈಕ್‌ ಜಾಥಾದೊಂದಿಗೆ ತೊಪ್ಪಗನಹಳ್ಳಿ ಬಳಿಯಿಂದ ಹೊರಟ ರಥಯಾತ್ರೆಗೆ ತುಂಗಣಿ, ಛತ್ರ, ಬೂದಿಗುಪ್ಪೆ ಗೇಟ್‌ ಹಾಗೂ ಕನ​ಕ​ಪುರ ನಗರದ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಮಹಿಳೆಯರು ಆರತಿ ಬೆಳಗುವ ಮೂಲಕ ಶುಭ ಕೋರಿದರು.

ನಗರದ ಮುಖ್ಯರಸ್ತೆಯಲ್ಲಿ ಪೂರ್ಣ ಕುಂಭ ಕಳಶ ಹೊತ್ತ ಮಹಿಳೆಯರೊಂದಿಗೆ ಜಾನಪದ ಕಲಾಮೇಳಗಳ ಜೊತೆ ಸಾಗಿದ ಬೃಹತ್‌ ಮೆರವಣಿಗೆಯಲ್ಲಿ ಪಂಚರತ್ನ ಯೋಜನೆಯ ಉದ್ದೇಶ ಸಾರುವ ಟ್ಯಾಬ್ಲೋಗಳು ಸಂಚ​ರಿ​ಸಿ​ದವು. ಕಲಾ​ವಿ​ದರು ಪೂಜಾ​ಕು​ಣಿ​ತ​ದಲ್ಲಿ ಕುಮಾ​ರ​ಸ್ವಾಮಿ ಭಾವ​ಚಿತ್ರ ಹೊತ್ತು ಅಭಿ​ಮಾ​ನ​ದಿಂದ ಕುಣಿ​ದರು. ಮಾರ್ಗ​ದುದ್ದಕ್ಕೂ ಮಾಜಿ ಪ್ರಧಾನಿ ದೇವೇಗೌಡ, ಕುಮಾರಸ್ವಾಮಿ ಹಾಗೂ ಯುವ ಮುಖಂಡ ನಿಖಿಲ… ಕುಮಾರಸ್ವಾಮಿಯವರ ಬೃಹತ್‌ ಕಟೌಚ್‌ಗಳು ರಾರಾ​ಜಿ​ಸು​ತ್ತಿದ್ದವು. ಹೆಜ್ಜೆ ಹೆಜ್ಜೆಗೂ ಕಾರ್ಯ​ಕ​ರ್ತರು ಪಟಾಕಿ ಸಿಡಿಸಿ ಜಯಘೋಷ ಮೊಳಗಿಸುತ್ತಿ​ದ್ದರು.

ಚನ್ನಬಸಪ್ಪ ವೃತ್ತದ ವರೆಗೂ ಬೃಹತ್‌ ಮೆರವಣಿಗೆಯ ಮೂಲಕ ಆಗ​ಮಿ​ಸಿ​ದ ಕುಮಾರಸ್ವಾಮಿ ಹಾಗೂ ಮುಖಂಡರಿಗೆ ಅಭಿಮಾನಿಗಳು ಬೃಹತ್‌ ರೇಷ್ಮೆ ಹಾಗೂ ಬಾಳೆ ಹಣ್ಣಿನ ಹಾರವನ್ನು ಹಾಕಿ ಅಭಿಮಾನ ಮೆರೆ​ದರು. ಬಿ.ಎಸ್‌.ದೊ​ಡ್ಡಿಯ ಚಿಕ್ಕಣ್ಣ ಎಂಬು​ವರು ಪಕ್ಷ ಸಂಘ​ಟ​ನೆ​ಗಾಗಿ 5 ಸಾವಿರ ಕಾಣಿಕೆ ನೀಡಿ​ದರು. ಟಿ.ಬೇಕುಪ್ಪೆ ವೃತ್ತದ ಮೂಲಕ ಕೋಡಿಹಳ್ಳಿ ನಂತರ ಹೂಕುಂದ ಮಾರ್ಗವಾಗಿ ಡಿ.ಕೆ.ಶಿವಕುಮಾರ್‌ ರವ​ರ ಹುಟ್ಟೂರು ದೊಡ್ಡಾಲಹಳ್ಳಿ ತಲುಪಿದರು.

click me!