ಉಪಚುನಾವಣೆ: ಗೋಕಾಕ್‌ನಲ್ಲಿ ಮತ 'ಭಿಕ್ಷೆ' ಬೇಡುತ್ತಿರುವ ಜೆಡಿಎಸ್ ಅಭ್ಯರ್ಥಿ!

By Web DeskFirst Published Nov 25, 2019, 11:45 AM IST
Highlights

ಇಂದಿನಿಂದ ಗೋಕಾಕ್ ಮತಕ್ಷೇತ್ರದಲ್ಲಿ ಜೆಡಿಎಸ್ ಪ್ರಚಾರ ಕಾರ್ಯ ಆರಂಭ| ಜೋಳಿಗೆ ಹಿಡಿದು ಮನೆಮನೆಗೆ ತೆರಳಿ ಮತಯಾಚನೆ ಮಾಡುತ್ತಿರುವ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ| ಗೋಕಾಕ ನಗರದ ಅಂಬಿಗೇರ ಓಣಿಯಲ್ಲಿ ಅಶೋಕ್ ಪೂಜಾರಿ ಮನೆಮನೆಗೆ ತೆರಳಿ ಮತಭಿಕ್ಷೆ ಬೇಡುತ್ತಿದ್ದಾರೆ| ಈ ವೇಳೆ ಮತದಾರರು 10 ರೂಪಾಯಿಯಿಂದ 2 ಸಾವಿರ ರು. ವರೆಗೆ ಹಣವನ್ನು ಜೋಳಿಗೆಯಲ್ಲಿ ಹಾಕುತ್ತಿದ್ದಾರೆ| ಹಣದ ಜೊತೆ ಅಕ್ಕಿ, ರೊಟ್ಟಿ, ಧವಸಧಾನ್ಯವನ್ನು ಕೂಡ ಜೋಳಿಗೆಯಲ್ಲಿ ಹಾಕುತ್ತಿದ್ದಾರೆ|

ಬೆಳಗಾವಿ(ನ.25): ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಕಾಂಗ್ರೆಸ್- ಬಿಜೆಪಿ ಅಭ್ಯರ್ಥಿಗಳ ಪರ ಘಟಾನುಘಟಿ ನಾಯಕರು ಬಂದು ಮತದಾರರನ್ನು ಸೆಳೆಯಲು ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಆದರೆ, ಗೋಕಾಕ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಮತದಾರನ್ನು ಸೆಳೆಯಲು ವಿನೂತನ ರೀತಿಯಲ್ಲಿ ಪ್ರಚಾರ ಆರಂಭಿಸಿದ್ದಾರೆ. 

ಹೌದು, ಇಂದಿನಿಂದ(ಸೋಮವಾರ) ಗೋಕಾಕ್ ಮತಕ್ಷೇತ್ರದಲ್ಲಿ ಜೆಡಿಎಸ್ ಪ್ರಚಾರ ಕಾರ್ಯ ಆರಂಭಿಸಿದೆ. ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಅವರು, ಜೋಳಿಗೆ ಹಿಡಿದು ಮನೆಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.  
ಗೋಕಾಕ ನಗರದ ಅಂಬಿಗೇರ ಓಣಿಯಲ್ಲಿ ಅಶೋಕ್ ಪೂಜಾರಿ ಮನೆಮನೆಗೆ ತೆರಳಿ ಮತಭಿಕ್ಷೆ ಬೇಡುತ್ತಿದ್ದಾರೆ. ಈ ವೇಳೆ ಮತದಾರರು 10 ರೂಪಾಯಿಯಿಂದ 2 ಸಾವಿರ ರು. ವರೆಗೆ ಹಣವನ್ನು ಜೋಳಿಗೆಯಲ್ಲಿ ಹಾಕುತ್ತಿದ್ದಾರೆ. ಹಣದ ಜೊತೆ ಅಕ್ಕಿ, ರೊಟ್ಟಿ, ಧವಸಧಾನ್ಯವನ್ನು ಕೂಡ ಜೋಳಿಗೆಯಲ್ಲಿ ಹಾಕುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ವೇಳೆ ಮಾತನಾಡಿದ ಅಶೋಕ್ ಪೂಜಾರಿ ಅವರು, ಚುನಾವಣೆ ಗೆಲ್ಲಬೇಕಂದ್ರೆ ಹಣಬಲ ತೋಲ್ಬಲ ಬೇಕೆನ್ನುವ ಸ್ಥಿತಿ ಗೋಕಾಕ್‌ದಲ್ಲಿದೆ, ಜನರು ಹಣ ಬಲದ ಜೊತೆ, ಅನ್ನವನ್ನು ಸಹ ನೀಡುತ್ತಿದ್ದಾರೆ. ಚುನಾವಣೆ ಪ್ರಚಾರದಲ್ಲಿ ತೊಡಗುವ ನಮ್ಮ ಕಾರ್ಯಕರ್ತರಿಗೆ ಇದು ಸಹಾಯವಾಗುತ್ತದೆ. ಜನರು ನನ್ನ ಹೋರಾಟದ ಜೊತೆ ಕೈ ಜೋಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

click me!