ಮೀಸಲಾತಿ ನೀಡದಿದ್ದರೆ ಮತ್ತೆ ಹೋರಾಟ: ಕೂಡಲ ಶ್ರೀ

By Kannadaprabha News  |  First Published Sep 9, 2021, 8:20 AM IST

*   ಅ. 1ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ
*   96 ಒಳಪಂಗಡಗಳ ಬೇಡಿಕೆಗಳನ್ನು ಈಡೇರಿಸಬೇಕು 
*   ರಾಜ್ಯ ಸರ್ಕಾರ ನೀಡಿದ ಗಡುವು ಇದೇ ಸೆ. 15ರಂದು ಮುಗಿಯಲಿದೆ 


ದಾಂಡೇಲಿ(ಸೆ.09): ಲಿಂಗಾಯತ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಬೇಡಿಕೆಯನ್ನು 6 ತಿಂಗಳದೊಳಗೆ ಈಡೇರಿಸುವುದಾಗಿ ರಾಜ್ಯ ಸರ್ಕಾರ ನೀಡಿದ ಗಡುವು ಇದೇ ಸೆ. 15ರಂದು ಮುಗಿಯಲಿದೆ. ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸುವ ಭರವಸೆ ಇದೆ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ನಗರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪ್ರತಿಜ್ಞಾ ಪಂಚಾಯಿತಿ ಬೃಹತ್‌ ರಾಜ್ಯ ಅಭಿಯಾನದ ಕುರಿತು ಮಾತನಾಡಿ, ಸರ್ಕಾರ ಕೊಟ್ಟಿದ್ದ ಮಾತನ್ನು ನೆನಪಿಸಲು ರಾಜ್ಯಾದ್ಯಂತ ಆ. 26ರಿಂದ ಮಲೆ ಮಹದೇಶ್ವರ ಬೆಟ್ಟದ ಶಕ್ತಿಪೀಠದಿಂದ ಮೈಸೂರು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಮೂಲಕ ಬೆಂಗಳೂರಿನ ವಿಧಾನಸೌಧದವರೆಗೆ ನಡೆಯಲಿದೆ. ಅದರ ಭಾಗವಾಗಿ ಅಭಿಯಾನ ದಾಂಡೇಲಿ ಮಾರ್ಗವಾಗಿ ಕಾರವಾರಕ್ಕೆ ಹೊರಟಿದ್ದೇವೆ. ಮೀಸಲಾತಿ ಹೋರಾಟದ ಕುರಿತು ಸಂಧಾನಕಾರರಾಗಿ ಸಚಿವ ಸಿ.ಸಿ. ಪಾಟೀಲ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಕುರುಬ, ವಾಲ್ಮೀಕಿ, ಮಡಿವಾಳ, ಆದಿ ಬಣಜಿಗ ಸೇರಿದಂತೆ ಹಾಗೂ ಇತರ 96 ಒಳಪಂಗಡಗಳ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು.

Tap to resize

Latest Videos

undefined

2ಎ ಮೀಸಲಾತಿ ಸಭೆ: ಕೂಡಲಸಂಗಮ ಜಯಮೃತ್ಯುಂಜಯ ಶ್ರೀ ವಿರುದ್ಧ ಕಿಡಿ 

ಸರ್ಕಾರ ನೀಡಿದ ಭರವಸೆ ಈಡೇರಿಸದಿದ್ದರೆ ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರ ಜನ್ಮದಿನವಾದ ಅ. 1ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪಂಚಮಸಾಲಿ ಸಮುದಾಯದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಕುಟ್ಟರಿ ಹಾಗೂ ದಾಂಡೇಲಿ ಸಮಾಜದ ಅಶೋಕ ಪಾಟೀಲ, ಚಂದ್ರಶೇಖರ ವಸ್ತ್ರದ್‌, ಚನ್ನಬಸಪ್ಪ ಮುರಗೋಡ, ಶಿವಬಸಪ್ಪ ನರೆಗಲ್‌, ಆರ್‌.ಎಚ್‌. ಚೌಗಲೆ, ಗೋಪಾಲಸಿಂಗ್‌ ರಜಪೂತ, ನಾಗರಾಜ ಕಲ್ಲಭಾವಿ ಮುಂತಾದವರು ಇದ್ದರು.
 

click me!