ಕನ್ನಡಿಗರ ಸ್ವಾಭಿಮಾನ ಕೆದಕದಿರಿ: ಮಹಾನಾಯಕರಿಗೆ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

By Kannadaprabha NewsFirst Published Nov 2, 2020, 11:57 AM IST
Highlights

ಪ್ರಧಾನಿ ಮೋದಿ ಮಧ್ಯ ಪ್ರವೇಶಿಸಿ ಉಭಯ ರಾಜ್ಯಗಳ ಮಧ್ಯೆ ಸೌಹಾರ್ದತೆ ತರಲು ಮುಂದಾಗಬೇಕು| ಚೆನ್ನಮ್ಮ, ರಾಯಣ್ಣರಂತೆ ನಾವು ಎಲ್ಲರ ಸ್ನೇಹ ಬಯಸುತ್ತೇವೆ. ಆದರೆ, ಆ ಸ್ನೇಹಕ್ಕೆ ತೊಂದರೆಯಾದರೆ ಸಂಘರ್ಷಕ್ಕಿಳಿಯಬೇಕಾಗುತ್ತೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ| 

ಬೆಳಗಾವಿ(ನ.02): ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಮಲತಾಯಿ ಧೋರಣೆ ಮಾಡಬಾರದು. ಮಹಾರಾಷ್ಟ್ರ ನಾಯಕರು ಹಾಗೂ ಕೆಲ ಸಂಘಟನೆಗಳು ಕನ್ನಡಿಗರ ಸ್ವಾಭಿಮಾನ ಕೆದಕುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಪುಂಡಾಟಿಕೆಯನ್ನು ಕನ್ನಡಿಗರು ಖಂಡಿಸುತ್ತೇವೆ ಎಂದು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಗೌರವಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು, ಇದರಲ್ಲಿ ಪ್ರಧಾನಿ ಮೋದಿ ಮಧ್ಯ ಪ್ರವೇಶಿಸಿ ಉಭಯ ರಾಜ್ಯಗಳ ಮಧ್ಯೆ ಸೌಹಾರ್ದತೆ ತರಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. 

ಬೆಳಗಾವಿಯಲ್ಲಿ MES ಪುಂಡರ ಉದ್ಧಟತನ: ಕನ್ನಡ ಪರ ಹೋರಾಟಗಾರನ ಬಂಧನ, ಭುಗಿಲೆದ್ದ ಆಕ್ರೋಶ

ಮಹಾರಾಷ್ಟ್ರ ಸರ್ಕಾರ ಕರಾಳ ದಿನ ಮಾಡಿರುವ ಕುರಿತು ಮಾತನಾಡಿದ ಶ್ರೀಗಳು, ಚೆನ್ನಮ್ಮ, ರಾಯಣ್ಣರಂತೆ ನಾವು ಎಲ್ಲರ ಸ್ನೇಹ ಬಯಸುತ್ತೇವೆ. ಆದರೆ, ಆ ಸ್ನೇಹಕ್ಕೆ ತೊಂದರೆಯಾದರೆ ಸಂಘರ್ಷಕ್ಕಿಳಿಯಬೇಕಾಗುತ್ತೆ ಎಂದು ಕ್ಯಾತೆ ತೆಗೆದ ಮಹಾನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. 

click me!