ಮೈಸೂರಲ್ಲಿ ಇಳಿದ ಕೊರೋನಾ : ಡಿಸಿ ಕೈಗೊಂಡ ಮಾಸ್ಟರ್ ಪ್ಲಾನ್ ವರ್ಕೌಟ್

Kannadaprabha News   | Asianet News
Published : Nov 02, 2020, 11:56 AM ISTUpdated : Nov 02, 2020, 03:56 PM IST
ಮೈಸೂರಲ್ಲಿ  ಇಳಿದ ಕೊರೋನಾ : ಡಿಸಿ ಕೈಗೊಂಡ ಮಾಸ್ಟರ್ ಪ್ಲಾನ್ ವರ್ಕೌಟ್

ಸಾರಾಂಶ

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಏನದು..? 

ಮೈಸೂರು (ನ.02):  ಜಿಲ್ಲೆಯಲ್ಲಿ ಕೊರೋನಾವನ್ನು ನಿಯಂತ್ರಣ ತರುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

ಕೊರೋನಾ ಸಾವಿನ ಪ್ರಮಾಣವು ಜಿಲ್ಲೆಯಲ್ಲಿ ಹೆಚ್ಚಾಗಿದ್ದು ತ್ವರಿತ ಚಿಕಿತ್ಸೆ ಸಿಗದ ಕಾರಣ. ಈ ಬಗ್ಗೆ ನಾವು ಹೆಚ್ಚಿನ ಗಮನ ನೀಡಲಾಯಿತು. ತಾಲೂಕು ಕೇಂದ್ರದಲ್ಲಿ ಹೆಚ್ಚಿನ ವ್ಯವಸ್ಥೆ ಕಲ್ಪಿಸಲಾಯಿತು. ಹೆಚ್ಚು ಹೆಚ್ಚು ಟೆಸ್ವ್‌ ಹಾಗೂ ಆಕ್ಸಿಜನ್‌ ಬೆಡ್‌ ವ್ಯವಸ್ಥೆ ಮಾಡಲಾಯಿತು. ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್… ಹಾಕಿಕೋಳ್ಳಬೇಕು. ಆಗಷ್ಟೇ ನಾವು ಕೊರೋನಾ ನಿಯಂತ್ರಣ ಮಾಡಲು ಸಾಧ್ಯ ಎಂದರು.

'ವಿಜ್ಞಾನಕ್ಕೆ ಸವಾಲಾದ ಅಲಮೇಲಮ್ಮನ ಶಾಪ' ..

ಜಿಲ್ಲೆಯ ಪ್ರವಾಸಿ ತಾಣಗಳು ಹಾಗೂ ಜಿಲ್ಲಾ ಗಡಿಗಳನ್ನ ಬಂದ್‌ ಮಾಡುವುದಿಲ್ಲ. ಅದಕ್ಕಾಗಿ ಅರಮನೆ, ಮೃಗಾಲಯದಲ್ಲಿ ಕೋವಿಡ್‌ ಟೆಸ್ಟ್‌ ಮಾಡುತ್ತಿದ್ದೇವೆ. ಇದಕ್ಕೆ ಜನರು ಸಹಕರಿಸಬೇಕು. ಜಿಲ್ಲೆಯಲ್ಲಿ ಆಕ್ಸಿಜನ್‌ ಬೆಡ್‌ ಕೊರತೆ ಇಲ್ಲ. ಜೊತೆಗೆ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲೂ ಆಕ್ಸಿಜನ್‌ ಬೆಡ್‌ ವ್ಯವಸ್ಥೆ ಮಾಡಲಾಗಿದೆ. ಕೋವಿಡ್‌ ಟೆಸ್ಟ್‌ ಹೆಚ್ಚಳ ಮಾಡಿರುವುದು ಹಾಗೂ ತಕ್ಷಣ ಕೊರೋನಾ ಚಿಕಿತ್ಸೆ ನೀಡುತ್ತಿರುವುದರಿಂದ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ಅವರು ಹೇಳಿದರು.

ಜನರು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್‌ ಹಾಕಿಕೊಳ್ಳುವ ಮೂಲಕ ಕೋವಿಡ್‌ ಮಾರ್ಗಸೂಚಿ ಪಾಲಿಸಬೇಕು. ಆಗ ಮಾತ್ರ ಸೋಂಕು ಹರಡುವಿಕೆ ನಿಯಂತ್ರಣ ಮಾಡಲು ಸಾಧ್ಯ ಎಂದರು.

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ