ಪಂಚಮಸಾಲಿ ಮೀಸಲಾತಿಗಾಗಿ ವೀರಭದ್ರನಂತೆ ಹೋರಾಡುವೆ: ಜಯಮೃತ್ಯುಂಜಯ ಶ್ರೀ

By Kannadaprabha NewsFirst Published Sep 14, 2023, 8:16 AM IST
Highlights

ನಿಪ್ಪಾಣಿಯಿಂದ ಹೋರಾಟ ಆರಂಭಿಸಿದ್ದು ಸಾರ್ವಜನಿಕವಾಗಿ ಲಿಂಗಪೂಜೆ ಮೂಲಕ, ಅದರಲ್ಲೂ ಹೆದ್ದಾರಿಗಳಲ್ಲಿ ಲಿಂಗಪೂಜೆ ಮಾಡಿ ಜಾಗೃತಿ ಮೂಡಿಸುತ್ತೇನೆ. ಲೋಕಸಭೆ ಚುನಾವಣೆ ಮೊದಲು ನಮಗೆ ಮೀಸಲಾತಿ ಬೇಕು. ಇದು ನಮ್ಮ ಹಕ್ಕೊತ್ತಾಯ: ಜಯಮೃತ್ಯುಂಜಯ ಸ್ವಾಮೀಜಿ 

ಹಾನಗಲ್ಲ(ಸೆ.14): ರೈತರ ಬೆವರಿನ ಅನ್ನಕ್ಕೆ ಬೆಲೆ ಕೊಡದ ಸರ್ಕಾರಗಳ ನಿರ್ಲಕ್ಷ್ಯ ಧೋರಣೆ ಅಸಹಿಷ್ಣುವಾಗಿದ್ದು, ಲಿಂಗಾಯತ ಸಮುದಾಯಕ್ಕೆ ಕೇಂದ್ರದ ಓಬಿಸಿ, ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮಿಸಲಾತಿ ದೊರೆಯುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು. 

ಹಾನಗಲ್ಲ ತಾಲೂಕಿನ ಸಾಂವಸಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದಿನ ಸರ್ಕಾರ 2ಡಿ ಮೀಸಲಾತಿಯ ಆಸೆ ಹಚ್ಚಿ ಮಾಯವಾಯಿತು. ನಾನು ಸಮಾಜಕ್ಕೆ ಮೋಸ ಮಾಡಲು ಸಿದ್ಧನಿಲ್ಲ. ಮೀಸಲಾತಿ ಸಿಗುವವರೆಗೆ ವಿರಮಿಸುವುದಿಲ್ಲ. ಕುಂಭಕರ್ಣನಂತೆ ನಿದ್ದೆ ಮಾಡುವುದಿಲ್ಲ, ವೀರಭದ್ರನಂತೆ ಹೋರಾಡುತ್ತೇನೆ ಎಂದು ತಿಳಿಸಿದ್ದಾರೆ. 

ಪಂಚಮಸಾಲಿ ಸಮಾಜಕ್ಕೆ ಕೆಲಸ ಮಾಡಿದವರಿಗೆ ಸಚಿವ ಸ್ಥಾನ ಸಿಗಲಿ: ಜಯಮೃತ್ಯುಂಜಯ ಸ್ವಾಮೀಜಿ

ನಿಪ್ಪಾಣಿಯಿಂದ ಹೋರಾಟ ಆರಂಭಿಸಿದ್ದು ಸಾರ್ವಜನಿಕವಾಗಿ ಲಿಂಗಪೂಜೆ ಮೂಲಕ, ಅದರಲ್ಲೂ ಹೆದ್ದಾರಿಗಳಲ್ಲಿ ಲಿಂಗಪೂಜೆ ಮಾಡಿ ಜಾಗೃತಿ ಮೂಡಿಸುತ್ತೇನೆ. ಲೋಕಸಭೆ ಚುನಾವಣೆ ಮೊದಲು ನಮಗೆ ಮೀಸಲಾತಿ ಬೇಕು. ಇದು ನಮ್ಮ ಹಕ್ಕೊತ್ತಾಯ ಎಂದು ಹೇಳಿದರು.

click me!