Shivamogga News: ಜಲ ಜೀವನ್ ಕಳಪೆ ಕಾಮಗಾರಿ: ಕುರುಣಿಮಕ್ಕಿ ಗ್ರಾಮಸ್ಥರ ಆರೋಪ

By Kannadaprabha News  |  First Published Nov 20, 2022, 12:33 PM IST
  • ಬೆಕ್ಷೆ-ಕೆಂಜಿಗುಡ್ಡೆಯಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ
  • ಕುರುಣಿಮಕ್ಕಿ ಸರ್ಕಾರಿ ಶಾಲೆಯ ಆವರಣದಲ್ಲಿ ಸಂವಾದ
  • ಗ್ರಾಮಸ್ಥರ ಸಮಸ್ಯೆ ಆಲಿಸಿದ ಡಿಸಿ ಡಾ.ಆರ್‌.ಸೆಲ್ವಮಣಿ

ತೀರ್ಥಹಳ್ಳಿ (ನ.20) : ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ಜಿಲ್ಲಾಧಿಕಾರಿ ಡಾ.ಆರ್‌. ಸೆಲ್ವಮಣಿಯವರು ಶನಿವಾರ ತಾಲೂಕಿನ ಕುಡುಮಲ್ಲಿಗೆ ಗ್ರಾಪಂ ವ್ಯಾಪ್ತಿಯ ಬೆಕ್ಷೆ-ಕೆಂಜಿಗುಡ್ಡೆ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿ ಕುರುಣಿಮಕ್ಕಿ ಸರ್ಕಾರಿ ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು.

ಈ ವೇಳೆ, 1973 ಕ್ಕಿಂತ ಹಿಂದೆ ನೀಡಲಾಗಿದ್ದ ಹಕ್ಕು ಪತ್ರಗಳ ಮೂಲ ದಾಖಲೆ ತಾಲೂಕು ಕಚೇರಿಯಲ್ಲಿ ಇಲ್ಲಾ. ಹಕ್ಕು ಪತ್ರದ ನಕಲಿ ಪ್ರತಿಗಳಿದ್ದರೂ ಮೂಲ ದಾಖಲೆ ಇಲ್ಲದ ಕಾರಣ ಹಲ ವಾರು ಕುಟುಂಬಗಳು ಅಡಮಾನ ಸಾಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. 94ಸಿ ಹಕ್ಕು ಪತ್ರದಲ್ಲಿ ಪರಭಾರೆ ನಿಷೇಧ ಹೇರಿರುವ ಕಾರಣ ಬ್ಯಾಂಕ್‌ ಸಾಲವೂ ದೊರೆಯುತ್ತಿಲ್ಲಾ ಎಂದು ಗ್ರಾಮಸ್ಥರು ಹೇಳಿಕೊಂಡರು.

Tap to resize

Latest Videos

ಬಿಲ್ಲವ,ಈಡಿಗರಿಗೆ 2ಎ ಮೀಸಲು ಹೆಚ್ಚಳಕ್ಕೆ ಪ್ರಣವಾನಂದ ಸ್ವಾಮೀಜಿ ಆಗ್ರಹ

ಜಲಜೀವನ್‌ ಮಿಷನ್‌ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಅತ್ಯಂತ ಕಳಪೆಯಾಗಿದ್ದು, ಹಳೇ ಪೈಪ್‌ ಜೋಡಿಸಿ ನಲ್ಲಿ ಸಂಪರ್ಕ ಕೊಡುತ್ತಿದ್ದಾರೆ. ಮುಖ್ಯವಾಗಿ ನೀರಿನ ಅವಶ್ಯಕತೆ ಇರುವವರಿಗೆ ಈ ಯೋಜನೆಯ ಸೌಲಭ್ಯ ದೊರೆಯುತ್ತಿಲ್ಲಾ. ಅಮ್ತಿ ಗ್ರಾಮದ ಕುಡಿಯುವ ನೀರಿಗಾಗಿ ಕಳೆದ 20 ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಗ್ರಾಪಂ ತಾಲೂಕು ಪಂಚಾಯ್ತಿಯಿಂದಲೂ ನಮ್ಮ ಬೇಡಿಕೆ ಈಡೇರಿಲ್ಲಾ. ಹೀಗಾಗಿ ಇಂದಿಗೂ ಅಲ್ಲಿನ ಜನರು ಕಪ್ಪೆಹೊಂಡ ಮತ್ತು ಗುಮ್ಮಿ ನೀರನ್ನು ಕುಡಿಯುವಂತಾಗಿದೆ ಎಂದೂ ಗ್ರಾಮ ಸ್ಥರು ತಮ್ಮ ಅಹವಾಲನ್ನು ಜಿಲ್ಲಾಧಿಕಾರಿಯವರ ಮುಂದೆ ತೋಡಿಕೊಂಡರು.

ಸಭೆಯಲ್ಲಿ ಸಾಮಾಜಿಕ ಭದ್ರತೆ ಯೋಜನೆಯಡಿ ಅರ್ಹ 7 ಫಲಾನುಭವಿಗಳಿಗೆ ವೃದ್ದಾಪ್ಯ ವೇತನ,8 ಸಂಧ್ಯಾ ಸುರಕ್ಷಾ, 3 ವಿಧವಾ ವೇತನ,ಹಾಗೂ 2 ಜಾತಿ ಪ್ರಮಾಣ ಪತ್ರವನ್ನು ವಿತರಿಸಲಾಯ್ತು.

ಕೃಷಿ, ಆಯುಷ್‌, ತೋಟಗಾರಿಕೆ, ಸಮಾಜ ಕಲ್ಯಾಣ, ತಾಲೂಕು ಪಂಚಾಯತ್‌,ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಮತ್ತು ಅಕ್ಷರದಾಸೋಹ ಹೀಗೆ ಸರ್ಕಾರದ ವಿವಿಧ ಇಲಾಖೆ ಗಳ ವತಿಯಿಂದ ನೀಡಲಾಗುವ ಸೌಲಭ್ಯಗಳ ಮಾಹಿತಿಗಳ ಸ್ಥಾಪಿಸಲಾಗಿದ್ದ ಕೇಂದ್ರವನ್ನು ವೀಕ್ಷಿಸಿದ ಜಿಲ್ಲಾಧಿಕಾರಿಗಳು ಸಾರ್ವಜನಿಕರು ಇದರ ಸದುಪಯೋಗವನ್ನು ಪಡಿಸಿ ಕೊಳ್ಳುವಂತೆ ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಮಮತಾ ಮೋಹನ್‌,ಐಎಎಸ್‌ ಪೊ›ಬೆಶನರಿ ಅಧಿಕಾರಿ ದಲ್ಜಿತ್‌ಕುಮಾರ್‌, ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್‌ ಹೊನ್ನಳ್ಳಿ, ತಹಸಿಲ್ದಾರ್‌ ಅಮೃತ್‌ ಆತ್ರೇಶ್‌, ತಾಪಂ ಇಓ ಶೈಲಾ ಎನ್‌. ಎಸಿಎಫ್‌ ಪ್ರಕಾಶ್‌, ಆರ್‌ಎಫ್‌ಓ ಆದಶ್‌ರ್‍ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ವಿದ್ಯಾರ್ಥಿಗಳೊಂದಿಗೆ ಸಂವಾದ

ತಾಲೂಕಿನ ಬೆಕ್ಷೆ ಕೆಂಜಿಗುಡ್ಡೆ ಗ್ರಾಮದಲ್ಲಿ ಶನಿವಾರ ವಾಸ್ತವ್ಯ ಹೂಡಿದ ಡಿಸಿ ಡಾ.ಆರ್‌.ಸೆಲ್ವಮಣಿ, ಮೊದಲಿಗೆ ಕುಡುಮಲ್ಲಿಗೆಯ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಾಲೆಯ ಹಿರಿಯ ವಿಧ್ಯಾರ್ಥಿಗಳು ನಿರ್ಮಿಸಿದ್ದ ಅಡಕೆ ತೋಟವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕುಡುಮಲ್ಲಿಗೆಯ ನ್ಯಾಯಬೆಲೆ ಅಂಗಡಿ ಹಾಗೂ ಕುಡುಮಲ್ಲಿಗೆ ಪ್ರಾಥಮಿಕ ಪತ್ತಿನ ಸಹಕಾರ ಸಂಘಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಕುರುಣೀಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದರು.

Karnataka Politics: ಬಿಜೆಪಿಗೆ ಮತ್ತೆ ಅಧಿಕಾರ ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ

ಜಿಲ್ಲೆಯಲ್ಲಿ 100 ಸರ್ವೆ ಅಧಿಕಾರಿಗಳ ಕೊರತೆ ಇದ್ದು, ಆ ಸ್ಥಾನದಲ್ಲಿ ಪ್ರಸ್ಥುತ ಕೇವಲ 33 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿರುವ ಕಾರಣ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುವುದು ಅಸಾಧ್ಯವಾಗಿದ್ದು, ಪೋಡಿಮುಕ್ತ ಗ್ರಾಮ ಮಾಡುವುದು ಕಷ್ಟಸಾಧ್ಯವಾಗಿದೆ.

-ಡಾ.ಆರ್‌.ಸೆಲ್ವಮಣಿ ,ಜಿಲ್ಲಾಧಿಕಾರಿ

click me!