JNU ಬ್ಯಾನ್ ಮಾಡೋದು ಸರಿ ಅಲ್ಲ: ಕಲ್ಲಡ್ಕ ಪ್ರಭಾಕರ್ ಭಟ್

By Suvarna News  |  First Published Jan 7, 2020, 3:36 PM IST

JNU ಕ್ಯಾಂಪಸ್‌ಗೆ ನುಗ್ಗಿ ಮುಸುಕುಧಾರಿ ದುಷ್ಕರ್ಮಿಗಳು ಹಲ್ಲೆ ನಡೆಸಿದ ಬೆನ್ನಲ್ಲೇ ಈ ವಿವಿಯನ್ನು ಕೆಲವು ವರ್ಷಗಳ ಕಾಲ ಮುಚ್ಚಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ. ಆದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಬೇರೆಯದೇ ಪರಿಹಾರ ಸೂಚಿಸಿದ್ದಾರೆ. ಏನದು?


ತುಮಕೂರು(ಜ.07): ಮುಖವಾಡ ಧರಿಸಿದ ಗುಂಪೊಂದು ದೆಹಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ನುಗ್ಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸಿದೆ. ಇದೇ ಬೆನ್ನಲ್ಲೇ ಈ  ವಿವಿಯನ್ನು ನಿಷೇಧಿಸಬೇಕೆಂಬ ಕೂಗು ಕೇಳಿಬರುತ್ತಿದೆ. ಆದರೆ, ಒಂದು ಶೈಕ್ಷಣಿಕ ಸಂಸ್ಥೆಯನ್ನು ಮುಚ್ಚುವುದು ಪರಿಹಾರವಲ್ಲ ಎಂದು ಹೇಳಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಡಂ ಕಲ್ಲಡ್ಕ ಪ್ರಭಾಕರ ಭಟ್ ಮತ್ತೊಂದು ಪರಿಹಾರವನ್ನು ಸೂಚಿಸಿದ್ದಾರೆ. ವಿವಿಯನ್ನು ಮುಚ್ಚುವ ಬದಲು ರಾಷ್ಟ್ರೀಯತೆ ಬಿತ್ತುವುದು ಒಳಿತು ಎಂದಿದ್ದಾರೆ. 

ತುಮಕೂರಲ್ಲಿ ಮಾತನಾಡಿದ ಅವರು, ಜೆಎನ್‌ಯೂವಿನಲ್ಲಿ ದೇಶದ್ರೋಹಿಗಳೇ ತುಂಬಿದ್ದಾರೆ. ಜೆಎನ್‌ಯೂ ಬ್ಯಾನ್ ಮಾಡಬೇಕು ಎನ್ನುವಂತದ್ದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

Tap to resize

Latest Videos

undefined

ಅಷ್ಟಕ್ಕೂ ಜೆಎನ್‌ಯುನಲ್ಲಿ ನಡೆದಿದ್ದೇನು ಏನು?

ಪ್ರೀತಿ ವಿಶ್ವಾಸದಿಂದ ವಿದ್ಯಾರ್ಥಿಗಳ ಮನ ಪರಿವರ್ತನೆ ಮಾಡಬೇಕು. ಆ ಮೂಲಕ‌ ಹೊಸ ಕ್ರಾಂತಿ ಸೃಷ್ಟಿಯಾಗಬೇಕು. ಜೆಎನ್‌ಯುನಲ್ಲಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್‌ನವರು ಸೇರಿ ಅರಾಜಕತೆ ಸೃಷ್ಟಿ ಮಾಡುತ್ತಿದ್ದಾರೆ, ಎಂದು ಆರೋಪಿಸಿದ್ದಾರೆ. 

ಅಷ್ಟಕ್ಕೂ NRC ಎಂದ್ರೇನು? ಸಿಂಪಲ್ಲಾಗಿ ತಿಳಿದುಕೊಳ್ಳಿ

NRC ಜಾರಿಯಾಗೋದ್ರಲ್ಲಿ ಎರಡು ಪ್ರಶ್ನೆಯಿಲ್ಲ. ಮೋದಿ ಮತ್ತು ಅಮಿತ್ ಶಾ ಬಲವಾಗಿದ್ದಾರೆ. ಈ ಚಿಲ್ಲರೆ ಗಲಾಟೆಗೆ ಯಾರಾದ್ರೂ ಹೆದರುತ್ತಾರಾ? ಯಾವುದೇ ರಾಜ್ಯ ಎನ್‌ಆರ್‌ಸಿ ಹಾಗೂ ಸಿಎಎ ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

JNU ಹಲ್ಲೆ: ನೈತಿಕ ಹೊಣೆ ಹೊತ್ತ ಹಿಂದೂ ಸಂಘಟನೆ

click me!