Asianet Suvarna News Asianet Suvarna News

JNU ಹುಡುಗಿಯರನ್ನು ಹೊಡೆದಿದ್ದು ಪಿಂಕಿ: ಹೊಣೆ ಹೊತ್ತ ಹಿಂದೂ ರಕ್ಷಾ ಸಂಘಟನೆ!

JNU ಮೇಲೆ ದಾಳಿ ಮಾಡಿದ್ದು ನಾನೇ ಎಂದ ಪಿಂಕಿ ಚೌಧರಿ| ವಿದ್ಯಾರ್ಥಿನಿಯರ ಮೇಲಿನ ದಾಳಿಯ ಹೊಣೆ ಹೊತ್ತ ಹಿಂದೂ ರಕ್ಷಾ ದಳ| ನನ್ನ ನೇತೃತ್ವದಲ್ಲೇ ದಾಳಿ ನಡೆದಿದೆ ಎಂದ ಪಿಂಕಿ ಚೌಧರಿ| 'ದೇಶ ವಿರೋಧಿ ಚಟುವಟಿಕೆ ಹಾಗೂ ಧರ್ಮ ವಿರೋಧಿ ಚಟುವಟಿಕೆಗೆ ಇದೇ ಶಿಕ್ಷೆ'| ಪಿಂಕಿ ಚೌಧರಿ ಹೇಳಿಕೆಯನ್ನು ತನಿಖೆ ಮಾಡುವುದಾಗಿ ಹೇಳಿದ ದೆಹಲಿ ಪೊಲೀಸರು|

Hindu Raksha Dal Leader Takes Responsibility For JNU Violence
Author
Bengaluru, First Published Jan 7, 2020, 4:07 PM IST

ನವದೆಹಲಿ(ಜ.07): JNU ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರ ಮೇಲೆ ನಡೆದ ಭೀಕರ ದಾಳಿಯ ಹೊಣೆಯನ್ನು ಹಿಂದೂ ರಕ್ಷಾ ದಳ ಎಂಬ ಸಂಘಟನೆ ಹೊತ್ತುಕೊಂಡಿದೆ.

Hindu Raksha Dal chief takes 'full responsibility' for JNU violence

Read @ANI story | https://t.co/5YVQtL70Cl pic.twitter.com/5tIASGIzCn

— ANI Digital (@ani_digital) January 7, 2020

ಹಿಂದೂ ರಕ್ಷಾ ದಳ ಸಂಘಟನೆಯ ಸದಸ್ಯೆ ಪಿಂಕಿ ಚೌಧರಿ ಎಂಬಾಕೆ ತನ್ನ ನೇತೃತ್ವದಲ್ಲೇ ದಾಳಿ ನಡೆದಿದೆ ಎಂದು ಘೋಷಿಸಿದ್ದಾಳೆ.

ದೇಶ ವಿರೋಧಿ ಚಟುವಟಿಕೆ ಹಾಗೂ ಧರ್ಮ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರನ್ನು ದಂಡಿಸಲು ದಾಳಿ ನಡೆಸಿದ್ದಾಗಿ ಪಿಂಕಿ ಚೌಧರಿ ಹೇಳಿದ್ದಾಳೆ.

ತನ್ನ ನೇತೃತ್ವದಲ್ಲಿ JNU ಕ್ಯಾಂಪಸ್'ಗೆ ನುಗ್ಗಿದ 50ಕ್ಕೂ ಹೆಚ್ಚು ಮುಸುಕುಧಾರಿಗಳು ವಿದ್ಯಾರ್ಥಿನಿಯರ ಮೇಲೆ ದಾಳಿ ಮಾಡಿದ್ದಾರೆ ಎಂದು ಪಿಂಕಿ ಚೌಧರಿ ಸ್ಫೋಟಕ ಹೇಳಿಕೆ ನೀಡಿದ್ದಾಳೆ.

Joint Commissioner Shalini Singh, Delhi Police: We have visited all the spots and interacted with students in JNU. Currently the investigation is in its initial stage.
Students have put their confidence in us& given us few inputs. #JNUViolence pic.twitter.com/LyPNmPm2NA

— ANI (@ANI) January 7, 2020

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ದೆಹಲಿ ಪೊಲೀಸರು, ಪಿಂಕಿ ಚೌಧರಿ ನೀಡಿರುವ ಹೇಳಿಕೆಯನ್ವಯ ತನಿಖೆ ನಡೆಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

JNU ಕ್ಯಾಂಪಸ್‌ಗೆ ನುಗ್ಗಿ ದುಷ್ಕರ್ಮಿಗಳಿಂದ ವಿದ್ಯಾರ್ಥಿಗಳ ಮೇಲೆ ರಕ್ತ ಸುರಿಯುವಂತೆ ಹಲ್ಲೆ

ಕಳೆದ ಜ.05ರಂದು ಏಕಾಏಕಿ JNU ಕ್ಯಾಂಪಸ್'ನಲ್ಲಿರುವ ವಿದ್ಯಾರ್ಥಿನಿಯರ ಹಾಸ್ಟೆಲ್'ಗೆ ನುಗ್ಗಿದ್ದ 50ಕ್ಕೂ ಹೆಚ್ಚು ಮುಸುಕುಧಾರಿಗಳು, ವಿದ್ಯಾರ್ಥಿನಿರು ಹಾಗೂ ಶಿಕ್ಷಕರ ಮೇಲೆ ದೈಹಿಕ ಹಲ್ಲೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios