ದೃಢ ನಿರ್ಧಾರದಿಂದ ಮಾತ್ರ ರಾಜಕೀಯದಲ್ಲಿರಲು ಸಾಧ್ಯ: ಸಂಸದ ಶ್ರೀನಿವಾಸ್ ಪ್ರಸಾದ್‌

By Govindaraj S  |  First Published Aug 28, 2022, 7:01 PM IST

ಅವಕಾಶ ಸಿಕ್ಕಾಗ, ಜನಸೇವೆ, ದೃಢ ನಿರ್ಧಾರ ಕೈಗೊಂಡಾಗ ಮಾತ್ರ ರಾಜಕೀಯದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್‌ ಹೇಳಿದರು.


ಚಾಮರಾಜನಗರ (ಆ.28): ಅವಕಾಶ ಸಿಕ್ಕಾಗ, ಜನಸೇವೆ, ದೃಢ ನಿರ್ಧಾರ ಕೈಗೊಂಡಾಗ ಮಾತ್ರ ರಾಜಕೀಯದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್‌ ಹೇಳಿದರು. ನಗರದ ಡಾ. ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ, 75ನೇ ಅಮೃತ ಮಹೋತ್ಸವದ ಸೇವಾ ಕಾರ್ಯಗಳು ಮತ್ತು ಕಾಡಾ ಅಧ್ಯಕ್ಷ ನಿಜಗುಣರಾಜು ಅವರ 53ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು. 

ರಾಜಕೀಯ ಇಂದು ಅಷ್ಟೊಂದು ಗೌರವಯುತವಾಗಿಲ್ಲ. ಈ ನಡುವೆ ನಮಗೆ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು ದೀನದಲಿತರ, ಬಡವರ ಸೇವೆ ಮಾಡಿದಾಗ ಜನಮಾನಸದಲ್ಲಿ ಉಳಿದು ಅವರ ಪ್ರೀತಿಗಳಿಸಲು ಸಾಧ್ಯ ಎಂದರು. ನಿಜಗುಣರಾಜು ಕೈಗೊಂಡಿರುವ ಸೇವಾ ಕಾರ್ಯಗಳು ಶ್ಲಾಘನೀಯ, ಇವುಗಳನ್ನು ಮುಂದುವರಿಸಿ, ಉತ್ತಮ ರಾಜಕೀಯ ಭವಿಷ್ಯ ನಿಮ್ಮದಾಗುತ್ತದೆ ಎಂದರು. 48 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಜನರಿಗೆ ದ್ರೋಹ ಬಗೆಯುವ ಯಾವ ಕೆಲಸ ಮಾಡಿಲ್ಲ, ಅವರ ಪ್ರೀತಿ ವಿಶ್ವಾಸ ಗಳಿಸಿದ್ದರಿಂದ ಕಳೆದ ಲೋಕಸಭಾ ಚುನಾವಣೆಯಲ್ಲಿ ಜನ ಗೆಲ್ಲಿಸಿದರು.

Tap to resize

Latest Videos

undefined

3 ತಿಂಗಳೊಳಗೆ ಗ್ರಂಥಾಲಯ ಸಜ್ಜುಗೊಳಿಸಲು ಸೂಚನೆ: ಸಚಿವ ವಿ.ಸೋಮಣ್ಣ

ಇದು ನನ್ನ ಕೊನೆಯ ಚುನವಾಣೆ, ರಾಜಕೀಯದಲ್ಲಿ ಜನರ ಪ್ರೀತಿ ವಿಶ್ವಾಸವೇ ಮುಖ್ಯ, ಸೋಲು, ಗೆಲುವು ಸಮನಾಗಿ ಸ್ವೀಕರಿಸಬೇಕು, ಜನರ ನಡುವೆ ಇದ್ದು ಅವರ ಪ್ರೀತಿಗಳಿಸಬೇಕು ಎಂದರು. ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು ಮಾತನಾಡಿ, ಬಸವಣ್ಣನವರ ಕಾಯಕವೇ ಕೈಲಾಸ, ಅಂಬೇಡ್ಕರ್‌, ಇತರರ ಬದುಕು ಹಸನು ಮಾಡಲು ರಾಜಕೀಯ ಮಾಡು ಎಂಬ ತತ್ವಕ್ಕೆ ಬದ್ದ ಎಂದರು. 25 ವರ್ಷಗಳ ಪಕ್ಷ ನಿಷ್ಠೆ ಮತ್ತು ಸೇವಾ ಕಾರ್ಯ ಗುರುತಿಸಿ ಕಾಡಾ ಅಧ್ಯಕ್ಷ ಸ್ಥಾನ ನೀಡಿದೆ, ಅವಧಿ ಮುಗಿಯುವವರೆಗೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತೇನೆ, ಅಟಲ್‌ ಬಿಹಾರಿ ವಾಜಪೇಯಿ, ಪ್ರಾಮಾಣಿಕ ರಾಜಕೀಯ ಸೇವೆ, ನರೇಂದ್ರಮೋದಿ ಅವರ ಅಭಿವೃದ್ಧಿ ಕಾರ್ಯಗಳು ನನ್ನನ್ನು ರಾಜಕೀಯಕ್ಕೆ ಕರೆ ತಂದಿತು ಎಂದರು. 

ನಮೋ ಸೇವಾ ಟ್ರಸ್ಟ್‌ ಮೂಲಕ 500 ಹೊಲಿಗೆ ಯಂತ್ರ, ಶೌಚಾಲಯ ಬೇಸಿನ್‌, ಟ್ಯಾಂಕರ್‌ ಮೂಲಕ ಉಚಿತ ಕುಡಿವ ನೀರು, 80ಕ್ಕೂ ಹೆಚ್ಚು ತಳ್ಳು ಗಾಡಿ ನೀಡಿರುವೆ, 53ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ 53 ಹೊಲಿಗೆ ಯಂತ್ರ ನೀಡುತ್ತಿದ್ದು, ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದರು. ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಪಕ್ಷ ತೆಗೆದುಕೊಳ್ಳುವ ನಿರ್ಧಾರಗಳಿಗೆ ಬದ್ದನಾಗಿದ್ದೇನೆ, ಪಕ್ಷದ ನಿಷ್ಠೆಯನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ ಎಂದರು. ಹಿರಿಯ ಸ್ವಾತಂತ್ರತ್ರ್ಯ ಹೋರಾಟಗಾರರಾದ ಕರಿನಂಜನಪುರದ ತೋಟದಪ್ಪ, ನಗರದ ಲಲಿತಾ ಜೀ ಟಾಗೆಟ್‌ ಅವರನ್ನು ಸನ್ಮಾನಿಸಲಾಯಿತು.

ಅರಣ್ಯ ಕಳೆ ಲಂಟಾನಾದಿಂದ ನಿರುದ್ಯೋಗಿ ಗಿರಿಜನರಿಗೆ  ಆದಾಯ!

ಅಂಗವಿಕಲ ಮಗುವಿಗೆ ಧನ ಸಹಾಯ ನೀಡಲಾಯಿತು. ವರ್ಚುವಲ್‌ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿ ಶುಭಾಷಯ ಕೋರಿದರು. ಶಾಸಕರಾದ ಎಸ್‌. ನಿರಂಜನಕುಮಾರ್‌, ಎನ್‌. ಮಹೇಶ್‌ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್‌. ಸುಂದರ್‌ ವಹಿಸಿದ್ದರು, ಚಾಮುಲ್‌ ಅಧ್ಯಕ್ಷ ನಾಗೇಂದ್ರ, ನಗರಸಭಾ ಸದಸ್ಯ ಸುರೇಶ್‌, ಮುಖಂಡರಾದ ಬಸವಣ್ಣ, ಅಯ್ಯನಪುರ ಶಿವಕುಮಾರ್‌, ಶಿವಾನಂದ, ವಿಜಯೇಂದ್ರ, ಚಂದ್ರಶೇಖರ್‌, ಕುಮಾರ್‌, ಮಾಂಬಳ್ಳಿ ನಂಜುಂಡಸ್ವಾಮಿ ಇದ್ದರು.

click me!