ನಾಲ್ಕು ಗೋಡೆ ಮಧ್ಯ ಕುಳಿತು ಸಾಗುವಳಿ ಭೂಮಿ ಮಂಜೂರಾತಿ ಮಾಡದೇ ನಿಜವಾದ ಶ್ರಮಿಕ ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪಾರದರ್ಶಕವಾಗಿ ಹಾಗೂ ನ್ಯಾಯಾಯುತವಾಗಿ ಭೂ ಮಂಜೂರಾತಿ ಮಾಡಿದ್ದೇವೆ. ಗ್ರಾಮೀಣ ಮುಗ್ದ ಜನರು ಇಟ್ಟಿರುವ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಗೆ ದ್ರೋಹ ಮಾಡುವ, ಗಿಮಿಕ್ ಮಾಡುವ ರಾಜಕಾರಣಿ ನಾನಲ್ಲವೆಂದು ಶಾಸಕ ಎ.ಟಿ.ರಾಮಸ್ವಾಮಿ ಮಾರ್ಮಿಕವಾಗಿ ವಿರೋಧಿಗಳಿಗೆ ಚಾಟಿ ಬೀಸಿದರು.
ಹೊಳೆನರಸೀಪುರ (ಸೆ.10) : ನಾಲ್ಕು ಗೋಡೆ ಮಧ್ಯ ಕುಳಿತು ಸಾಗುವಳಿ ಭೂಮಿ ಮಂಜೂರಾತಿ ಮಾಡದೇ ನಿಜವಾದ ಶ್ರಮಿಕ ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪಾರದರ್ಶಕವಾಗಿ ಹಾಗೂ ನ್ಯಾಯಾಯುತವಾಗಿ ಭೂ ಮಂಜೂರಾತಿ ಮಾಡಿದ್ದೇವೆ. ಗ್ರಾಮೀಣ ಮುಗ್ದ ಜನರು ಇಟ್ಟಿರುವ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಗೆ ದ್ರೋಹ ಮಾಡುವ, ಗಿಮಿಕ್ ಮಾಡುವ ರಾಜಕಾರಣಿ ನಾನಲ್ಲವೆಂದು ಶಾಸಕ ಎ.ಟಿ.ರಾಮಸ್ವಾಮಿ ಮಾರ್ಮಿಕವಾಗಿ ವಿರೋಧಿಗಳಿಗೆ ಚಾಟಿ ಬೀಸಿದರು.
Karnataka Rains: ಕರ್ನಾಟಕದ 6 ಜಿಲ್ಲೆಗಳಲ್ಲಿ ಇಂದೂ ಕೂಡ ಭಾರೀ ಮಳೆ..!
ತಾಲೂಕಿನ ಗೋಹಳ್ಳಿ ಗ್ರಾಮದಲ್ಲಿ ಶಾಸಕ ಎ.ಟಿ.ರಾಮಸ್ವಾಮಿ ಅವರು ಜಲ್ ಜೀವನ್ ಮಿಷನ್ ಯೋಜನೆ(Jala jeevan Mission)ಯಡಿ ಮನೆಗಳಿಗೆ ಕುಡಿಯುವ ನೀರಿನ ನಲ್ಲಿ ಸಂಪರ್ಕ ಹಾಗೂ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.ನ್ಯಾಯ ಹಾಗೂ ಧರ್ಮವನ್ನು ಪಾಲನೆ ಮಾಡಿಕೊಂಡು ಬರುತ್ತಿರುವ ನಮಗೆ ಬಡವರು, ರೈತರು, ಮಹಿಳೆಯರು, ಯುವ ಜನತೆ ನಮ್ಮ ಶಕ್ತಿ ಎಂದು ಭಾವಿಸಿರುವ ನಮ್ಮಲ್ಲಿ ದುಡ್ಡಿಗೆ ಪ್ರಾಮುಖ್ಯತೆ ಇಲ್ಲ. ನಿಮ್ಮ ಜತೆಗೆ ನಾನಿರುವಾಗ ಹರಿದಾಡುತ್ತಿರುವ ಯಾವುದೇ ಮಾತಿಗೆ ಮನ್ನಣೆ ನೀಡುವುದು ಬೇಡ, ನಿಮ್ಮೊಂದಿಗೆ ನಾನಿದ್ದೇನೆ ಎಂದು ತಿಳಿಸಿದರು. ಹಳ್ಳಿಮೈಸೂರು ಹೋಬಳಿಯ 6 ಗ್ರಾಮಗಳಿಗೆ 278.38 ಲಕ್ಷ ರೂ.ಗಳಲ್ಲಿ 9623 ಮೀಟರ್ ಪೈಪ್ ಅಳವಡಿಸಿ, 610 ನಲ್ಲಿ ಸಂಪರ್ಕ ಕಲ್ಪಿಸಲಾಗುತ್ತದೆ ಎಂದರು.
ಕಾಂಕ್ರಿಟ್ ರಸ್ತೆಗಳನ್ನು ಆಧುನಿಕ ಯಂತ್ರ ಬಳಸಿ, ಬೆಲ್ಲದ ಅಚ್ಚಿನಂತೆ ಕತ್ತರಿಸಿ, ಪೈಪ್ ಅಳವಡಿಸಲು ಸೂಚಿಸಿದ್ದೇವೆ. ಇದರ ಬಗ್ಗೆ ನೀವುಗಳ ಗಮನ ಹರಿಸಬೇಕು, ತಪ್ಪಿದಲ್ಲಿ ರಸ್ತೆಗಳು ಹಾಳಾಗುತ್ತದೆ ಎಂದರು. ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಜಿ.ಪಂ. ಇಂದ 4.54 ಕೋಟಿ ರೂ. ಹಣ ನೀಡಲಾಗಿದೆ ಮತ್ತು ರಸ್ತೆ ನಿರ್ಮಾಣದ ಸಮಯದಲ್ಲಿ ಗುಣಮಟ್ಟು ಕಾಯ್ದುಕೊಳ್ಳಲು ನೀವುಗಳು ಪರಿಶೀಲನೆ ನಡೆಸಬೇಕು ಎಂದು ಸಲಹೆ ನೀಡಿದರು. ಹಳ್ಳಿಮೈಸೂರು ಗ್ರಾ.ಪಂ. ಅಧ್ಯಕ್ಷ ಮಹೇಶ್, ಗ್ರಾ.ಪಂ. ಸದಸ್ಯೆ ಚಿನ್ನಮ್ಮ, ತಾ.ಪಂ. ಇಒ ಗೋಪಾಲ್, ಜಿ.ಪಂ. ಸಹಾಯಕ ಎಂಜಿನಿಯರ್ ಪ್ರಶಾಂತ್, ಪಿಡಿಒ ಸವಿತ ಸೇರಿದಂತೆ ಇತರರು ಇದ್ದರು. Hassan: ಕುಡಿಯಲು ಹಣ ಕೊಡದ ಕಾರಣಕ್ಕೆ ಪತ್ನಿಯ ಬರ್ಬರ ಹತ್ಯೆಗೈದ ಪತಿ!