ಬಿಜೆಪಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ​

By Kannadaprabha News  |  First Published Jan 13, 2023, 6:01 AM IST

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟಬಹುತದೊಂದಿಗೆ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಶಾಸಕ ಬಿ. ಹರ್ಷವರ್ಧನ್‌ ವಿಶ್ವಾಸ ವ್ಯಕ್ತಪಡಿಸಿದರು.


 ನಂಜನಗೂಡ (ಜ. 13):  ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟಬಹುತದೊಂದಿಗೆ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಶಾಸಕ ಬಿ. ಹರ್ಷವರ್ಧನ್‌ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಮುಂಬರುವ ಚುನಾವಣೆ ಬಳಿಕ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ, ಆದರೆ ಅವರ ಕನಸು ನನಸಾಗುವುದಿಲ್ಲ, ರಾಜ್ಯದ ಜನರುಸರ್ಕಾರಕ್ಕೆ ಮತ್ತೊಮ್ಮೆ ಆಶೀರ್ವದಿಸಲಿದ್ದಾರೆ. ಈಗಾಗಲೇ ರಾಜ್ಯ ಬಿಜೆಪಿ ಸರ್ಕಾರ ಪ. ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇ. 17 ಹಾಗೂ ಶೇ. 7ಕ್ಕೆ ಹೆಚ್ಚಳ ಮಾಡುವ ಮೂಲಕ ಶೋಷಿತ ಸಮುದಾಯದ ಜನರ ಬಹು ವರ್ಷಗಳ ಬೇಡಿಕೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

Latest Videos

undefined

ಇನ್ನು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿರುವುದರಿಂದ ಹೆಚ್ಚಳವನ್ನು 9ನೇ ಶೆಡ್ಯೂಲ್‌ನಲ್ಲಿ ಸೇರ್ಪಡೆ ಮಾಡುವ ಮೂಲಕ ಮೀಸಲಾತಿ ಹೆಚ್ಚಳಕ್ಕೆ ಅಧಿಕೃತ ಮಾನ್ಯತೆ ದೊರಕಿಸಿ ಕೊಡಲಾಗುವುದು ಎಂದರು.

ಮೈಸೂರು-ಬೆಂಗಳೂರು ದಶಪಥ ರಸ್ತೆಗೆ ಹೆಸರಿಡುವುದಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಹೊಸದಾಗಿ ನಿರ್ಮಿಸಲಾಗಿರುವ ದಶಪಥ ರಸ್ತೆಗೆ ಸರ್ಕಾರದಿಂದ ಸೂಕ್ತ ಹೆಸರು ನೀಡಲಾಗುತ್ತದೆ. ಇನ್ನು ಮೈಸೂರು ಬೆಂಗಳೂರು ನಡುವಿನ ಪ್ರಯಾಣದ ಅಂತರ ಕೇವಲ 1.5 ಗಂಟೆಯಲ್ಲಿ ಕ್ರಮಿಸಬಹುದಾಗಿರುವ ಈ ರಸ್ತೆಯಲ್ಲಿ ಆಯ್ದ ಸ್ಥಳದಲ್ಲಿ ಹಿರಿಯ ನಾಗರೀಕರಿಗೆ ವಿಶ್ರಾಂತಿ ಗೃಹ ನಿರ್ಮಾಣ ಹಾಗೂ ನಿಗದಿತ ಸ್ಥಳದಲ್ಲಿ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸರ್ವಿಸ್‌ ರಸ್ತೆ ನಿರ್ಮಿಸುವಂತೆ ಮನವಿ ಮಾಡಲಾಗಿದೆ. ಜತೆಗೆ ಪ್ರಾಯೋಗಿಕ ಸಂಚಾರದ ವೇಳೆ ಕೆಲ ಪ್ರದೇಶಗಳಲ್ಲಿ ರಸ್ತೆಯಲ್ಲಿ ದೋಷಗಳು ಕಂಡುಬಂದಿದ್ದು, ಇದನ್ನೂ ಸರಿಪಡಿಸುವಂತೆಯು ಕೇಳಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಗೆಲುವಿಗೆ ಬಿಜೆಪಿ ರಣತಂತ್ರ

ತುಮಕೂರು :  ಬಿಜೆಪಿಯು ಪ್ರತಿ ಮತಗಟ್ಟೆಗಳಲ್ಲಿ ಪೇಜ್‌ ಹಾಗೂ ವಾರ್ಡ್‌ ಸಮಿತಿ ರಚನೆ, ಬೂತ್‌ ಪದಾಧಿಕಾರಿಗಳ ಹಾಗೂ ಪಂಚರತ್ನಗಳ ಕಾರ್ಯನಿರ್ವಹಣೆ, ವಾಟ್ಸ್ಯಾಪ್‌ ಗ್ರೂಪ್‌ ರಚನೆ, ಕೀವೋಟ​ರ್‍ಸ್, ಪ್ರತೀ ತಿಂಗಳ ಅಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿರವರ ಮನ್‌ ಕೀ ಬಾತ್‌ ಕಾರ್ಯಕ್ರಮ ಆಯೋಜನೆ ಮತ್ತು ಎಲ್ಲಾ ವರ್ಗ, ಸಮುದಾಯಗಳ ಮತದಾರರನ್ನು ವಿಶ್ವಾಸಕ್ಕೆ ಪಡೆಯುವ ದೃಷ್ಟಿಯಿಂದ ಬೂತ್‌ ವಿಜಯ್‌ ಅಭಿಯಾನವನ್ನು ನಡೆಸುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹಾಗೂ ಸೋಮೇಶ್ವರ ಶಕ್ತಿಕೇಂದ್ರದ ವಾರ್ಡ್‌ 25ರ ಪ್ರಭಾರಿ ಕೆ.ಪಿ.ಮಹೇಶ ತಿಳಿಸಿದರು.

ನಗರದ ಸೋಮೇಶ್ವರಪುರಂನ ವಾರ್ಡ್‌ 25ರ ಮತಗಟ್ಟೆ ಸಂಖ್ಯೆ 167ರ ವಾರ್ಡ್‌ ಅಧ್ಯಕ್ಷ ರಾಜ್‌ ಕುಮಾರ್‌ ಗುಪ್ತರವರ ಮನೆ ಮೇಲೆ ಬಿಜೆಪಿ ಧ್ವಜವನ್ನು ಹಾರಿಸುವ ಸಂದರ್ಭದಲ್ಲಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ಮತ್ತು ವಿಧಾನಸಭೆ- 2023ರ ಚುನಾವಣೆಯಲ್ಲಿ ಬಿಜೆಪಿ ಅಭೂತ ಪೂರ್ಣ ಸ್ಪಷ್ಟಬಹುಮತಕ್ಕೆ ಬೂತ್‌ ಮಟ್ಟದಲ್ಲಿ ಅತ್ಯಧಿಕ ಮತ ಪಡೆಯುವ ದೃಷ್ಟಿಯಿಂದ ಹಾಗೂ ಕೇಂದ್ರ, ರಾಜ್ಯ ಬಿಜೆಪಿಯ ಡಬ್ಬಲ್‌ ಎಂಜಿನ್‌ ಸರ್ಕಾರಗಳು ನೀಡಿರುವ ಕೊಡುಗೆ ಮತ್ತು ಸಾಧನೆಗಳನ್ನು ಪ್ರತಿ ಮನೆಗೆ ತಲುಪಿಸಿ, ಮತದಾರರ ಮನ ಗೆದ್ದು, ಮತವಾಗಿ ಪರಿವರ್ತಿಸುವ ಕಾರ್ಯಕ್ಕೆ ಬಿಜೆಪಿ ಮುಂದಾಗಿದೆ ಎಂದರು

ಪ್ರಥಮ ಹಂತದಲ್ಲಿ ಪ್ರತಿ ಬೂತ್‌ನ ಬಿಜೆಪಿ ಪದಾಧಿಕಾರಿಗಳು, ಸದಸ್ಯರು ಮತ್ತು ಕೀವೋಟ​ರ್‍ಸ್ನ 25 ಮನೆಗಳ ಮೇಲೆ ಬಾವುಟ ಹಾರಿಸುವುದರ ಮೂಲಕ ಬಿಜೆಪಿ ಬೂತ್‌ ವಿಜಯ್‌ ಅಭಿಯಾನವನ್ನು ಚಾಲನೆಗೊಳಿಸಿದೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಬಿಜೆಪಿ ರಾಜ್ಯ ವಕ್ತಾರ ಹಾಗೂ ಜಿಲ್ಲಾ ಉಪಾಧ್ಯಕ್ಷ ಎಚ್‌.ಎನ್‌.ಚಂದ್ರಶೇಖರ್‌, ತುಮಕೂರು ಮಂಡಲಾಧ್ಯಕ್ಷ ಟಿ.ಎಚ್‌.ಹನುಮಂತರಾಜು, ನಗರ ಮಂಡಲ ಮಹಿಳಾ ಮೋರ್ಚಾ ಪ್ರಧಾನಕಾರ್ಯದರ್ಶಿ ಹಾಗೂ ಬಿಜೆಪಿ ಬೂತ್‌ ವಿಜಯ್‌ ಅಭಿಯಾನದ ಪ್ರಮುಖ್‌ ಕಾವ್ಯ, ಕಾರ್ಯಕರ್ತರಾದ ಮುತ್ತುರಾಜ್‌, ವಾದಿರಾಜ್‌, ಸಿ.ಎನ್‌.ರವಿಕುಮಾರ್‌, ಚೈತ್ರ, ನಂಜುಂಡಿ, ಸೀತಾರಾಮು, ಚಂದ್ರಶೇಖರ್‌ ಉಪಸ್ಥಿತರಿದ್ದರು.

click me!