ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗಾಗಿ ಸರ್ಕಾರ ಶೇ. 10ರಷ್ಟುಮೀಸಲಾತಿ ನೀಡಿದೆ. ಆದರೆ ಈಗ ಶೇ. 2ಕ್ಕೆ ಇಳಿಸಿದೆ. ಸರ್ಕಾರ ಸಂಖ್ಯಾಬಲ ಇದ್ದವರಿಗೆ ಆದ್ಯತೆ ನೀಡುತ್ತದೆ. ಯಾರು ಒತ್ತಡ ಹೇರುತ್ತಾರೋ ಅವರಿಗೆ ಪ್ರಾಶಸ್ತ್ಯ ನೀಡುತ್ತಿದೆ. ಎಂದು ‘ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ’ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.
ಧಾರವಾಡ )ಡಿ.31) : ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗಾಗಿ ಸರ್ಕಾರ ಶೇ. 10ರಷ್ಟುಮೀಸಲಾತಿ ನೀಡಿದೆ. ಆದರೆ ಈಗ ಶೇ. 2ಕ್ಕೆ ಇಳಿಸಿದೆ. ಸರ್ಕಾರ ಸಂಖ್ಯಾಬಲ ಇದ್ದವರಿಗೆ ಆದ್ಯತೆ ನೀಡುತ್ತದೆ. ಯಾರು ಒತ್ತಡ ಹೇರುತ್ತಾರೋ ಅವರಿಗೆ ಪ್ರಾಶಸ್ತ್ಯ ನೀಡುತ್ತಿದೆ. ಜನಬಲದ ಸಾಮರ್ಥ್ಯ ತೋರಿಸಿ ಮೀಸಲಾತಿ ಪಡೆದುಕೊಳ್ಳುವ ಸ್ಥಿತಿ ಬಂದಿರುವುದು ದುರ್ದೈವ ಎಂದು ‘ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ’ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.
ನಗರದ ಶ್ರೀಮದ್ ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ 6 ದಿನ ನಡೆದ ಋುಗ್ವೇದ ಸಂಹಿತಾ ಮಹಾಯಾಗದ ಪೂರ್ಣಾಹುತಿ ನಂತರ ಶುಕ್ರವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೀಗಾಗಿ ನಾವು ಸಂಘಟಿತರಾಗಿ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದರು.
ಮೀಸಲಾತಿ ಚುನಾವಣೆ ಗಿಮಿಕ್: ಸಿದ್ದರಾಮಯ್ಯ
ಸನಾತನ ಧರ್ಮ ರಕ್ಷಣೆ ನಮ್ಮ ಹೊಣೆ. ಖಡ್ಗ ಹಿಡಿದು ಮತಪ್ರಚಾರ ಮಾಡುವ ಧರ್ಮ ನಮ್ಮದಲ್ಲ. ನಮ್ಮ ಋುಷಿ ಪ್ರಣೀತ ಸನಾತನ ಧರ್ಮ ಉಳಿಸಿಕೊಂಡು ಬರುವಲ್ಲಿ ಬ್ರಾಹ್ಮಣರ ಕೊಡುಗೆ ಮಹತ್ವದ್ದಾಗಿದೆ. ನಮ್ಮ ಆಚಾರ-ವಿಚಾರ ಶುದ್ಧವಾಗಿರಬೇಕು. ನಾವು ವೇದಾಧ್ಯಯನದಲ್ಲಿ ತೊಡಗಿಕೊಂಡರೆ, ಸಂಪ್ರದಾಯ, ಸಂಸ್ಕೃತಿ ಉಳಿಸಿಕೊಂಡರೆ ಎಷ್ಟೇ ಸಾಂಸ್ಕೃತಿಕ ದಾಳಿಯಾದರೂ ಸನಾತನ ಧರ್ಮಕ್ಕೆ ಹಾನಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಧಾರವಾಡದಲ್ಲಿ ಮಹಾಸಭಾದ 2023ರ ಕ್ಯಾಲೆಂಡರ್ ಬಿಡುಗಡೆ ಮಾಡಿರುವುದು ಖುಷಿ ತಂದಿದ್ದು, ಶೀಘ್ರದಲ್ಲೇ ಮಹಾಸಭಾ ವತಿಯಿಂದ ಪಂಚಾಂಗ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
Belagavi Winter Session: ಅಧಿವೇಶನ ಯಾವ ಪುರುಷಾರ್ಥಕ್ಕೆ?: ಸಿದ್ದು ಆಕ್ರೋಶ
ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರು ಮತ್ತು ಪುರೋಹಿತರ ಪರಿಷತ್ ಕಾರ್ಯಾಧ್ಯಕ್ಷ ಡಾ. ಬಿ.ಎಸ್. ರಾಘವೇಂದ್ರ ಭಟ್ ಮಾತನಾಡಿ, ಬ್ರಾಹ್ಮಣರನ್ನು ಟೀಕಿಸುವವರು ಹೆಚ್ಚಾಗುತ್ತಿದ್ದಾರೆ. ಆದರೆ ನಾವು ರಾಜ್ಯಾದ್ಯಂತ ವೇದ ಆಂದೋಲನ ಮಾಡುವ ಮೂಲಕ ವೇದಪಾರಾಯಣ, ಹೋಮ-ಹವನ ಮಾಡಿ ಟೀಕಾಕಾರರ ಬಾಯಿ ಮುಚ್ಚಿಸಬೇಕು ಎಂದು ಅಭಿಪ್ರಾಯಪಟ್ಟರು.
ಬ್ರಹ್ಮಶ್ರೀ ರಾಜೇಶ್ವರ ಶಾಸ್ತ್ರಿ, ವೇದಮೂರ್ತಿ ಭಾನುಪ್ರಕಾಶ ಶರ್ಮಾ, ಪಂ. ಪ್ರದ್ಯುಮ್ನಾಚಾರ್ಯ ಜೋಶಿ ಮಾತನಾಡಿದರು. ಪ್ರಮೋದ ಮನೋಳಿ, ಎ.ಸಿ. ಗೋಪಾಲ, ವಿನಾಯಕ ತಾಪಸ, ಗುರುರಾಜ ಜೋಶಿ ಇದ್ದರು.