ಕೊರೋನಾ ಕಾಟ: ಹೊಸಪೇಟೆ ರೈಲ್ವೆ ನಿಲ್ದಾಣಕ್ಕೆ ಬಂದ ಐಸೋಲೆಷನ್‌ ಕೋಚ್‌ ರೈಲು

By Kannadaprabha News  |  First Published Apr 22, 2020, 9:52 AM IST

ಹೊಸಪೇಟೆ ರೈಲು ನಿಲ್ದಾಣಕ್ಕೆ ಬಂದ ಐಸೋಲೆಷನ್‌ ಕೋಚ್‌| ಈ ರೈಲಿನಲ್ಲಿ ಒಟ್ಟು 23 ಐಸೋಲೇಷನ್‌ ಬೋಗಿಗಳಿವೆ| ಅದರಲ್ಲಿ ಕೊರೋನಾ ಸೋಂಕು ಹೊಂದಿರುವವನ್ನು ಪ್ರತ್ಯೇಕವಾಗಿರಿಸಿ, ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ|


ಹೊಸಪೇಟೆ(ಏ.22): ಕೊರೋನಾ ಸೋಂಕು ಪೀಡಿತರನ್ನು ಪ್ರತ್ಯೇಕವಾಗಿಡಲು ರೈಲು ಬೋಗಿಗಳಲ್ಲಿ ಸಿದ್ಧಪಡಿಸಿರುವ ಪ್ರತ್ಯೇಕತೆ (ಐಸೋಲೆಷನ್‌) ಕೋಚ್‌ನ್ನು ಹೊಂದಿರುವ ರೈಲು ಸ್ಥಳೀಯ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಬಂದು ನಿಂತಿದೆ. 

ಈ ರೈಲು ಬೋಗಿಯಲ್ಲಿ ಒಟ್ಟು 23 ಐಸೋಲೇಷನ್‌ ಬೋಗಿಗಳನ್ನು ಒಳಗೊಂಡಿದ್ದು, ಅದರಲ್ಲಿ ಕೊರೋನಾ ಸೋಂಕು ಹೊಂದಿರುವವನ್ನು ಪ್ರತ್ಯೇಕವಾಗಿರಿಸಿ, ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. 

Tap to resize

Latest Videos

ಬಳ್ಳಾರಿಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್‌!

ಕೊರೋನಾ ವೈರಸ್‌ ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಈ ವಿಶೇಷ ರೈಲು ಸೇವೆಗೆ ಬಳಸಿಕೊಳ್ಳಲಾಗುವುದು. ಸೋಮವಾರ ನಗರಕ್ಕೆ ಬಂದಿರುವ ಈ ರೈಲು ಇನ್ನೂ ಕೆಲ ದಿನಗಳ ವರೆಗೆ ನಗರದ ರೈಲ್ವೆ ನಿಲ್ದಾಣದಲ್ಲೇ ಇರಲಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.
 

click me!