ತುಮಕೂರಲ್ಲಿ ಸದ್ದಿಲ್ಲದೇ ನಡೀತಿದೆಯಾ ಮತಾಂತರ ಜಾಲ?

By Girish Goudar  |  First Published Oct 30, 2022, 8:56 AM IST

100 ರೂ.ಮುಖಬೆಲೆಯ ಪುಸ್ತಕಗಳು ಕೇವಲ 10 ರೂ.ಗೆ ಮಾರಾಟ ಮಾಡಲಾಗುತ್ತಿದ್ದು ಪುಸ್ತಕದ ತಲೆಬರಹದಲ್ಲಿ ಬರೆದಿರೋದೇ ಬೇರೆ, ಒಳಗಿರೋ ಮಾಹಿತಿಯೇ ಬೇರೆ


ತುಮಕೂರು(ಅ.30): ಭಗವದ್ಗೀತೆಯನ್ನೇ ಹೋಲುವ ಪುಸ್ತಕ ಹಂಚಿ ಮತಾಂತರಗೊಳಿಸುವ ಹುನ್ನಾರ ಜಿಲ್ಲೆಯಲ್ಲಿ ನಡೆಯುತ್ತಿದೆ. ಗೀತೆ ನಿನ್ನ ಅಮೃತ ಜ್ಞಾನ ಎನ್ನುವ ಪುಸ್ತಕ ಮುದ್ರಿಸಿ ಮಾರಾಟ ಮಾಡಲಾಗುತ್ತಿದೆ. 100 ರೂಪಾಯಿ ಮುಖಬೆಲೆಯ ಪುಸ್ತಕಗಳು ಕೇವಲ 10 ರೂಪಾಯಿಗೆ ಮಾರಾಟ ಮಾಡಲಾಗುತ್ತಿದ್ದು ಪುಸ್ತಕದ ತಲೆಬರಹದಲ್ಲಿ ಬರೆದಿರೋದೇ ಬೇರೆ, ಒಳಗಿರೋ ಮಾಹಿತಿಯೇ ಬೇರೆಯಾಗಿದೆ ಅಂತ ಆರೋಪಿಸಲಾಗಿದೆ. 

ಮುಖಪುಟದಲ್ಲಿ ಮುದ್ರಕರು ಶ್ರೀ ಕೃಷ್ಣ ಪರಮಾತ್ಮನ ಚಿತ್ರ ಮುದ್ರಿಸಿದ್ದಾರೆ. ಆದ್ರೆ ಪುಸ್ತಕದ ಒಳಗೆ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಲೇಖನಗಳಿವೆ. ಕಿಡಿಗೇಡಿಗಳು ಹಿಂದೂ ದೇವಾಲಯಗಳ ಮುಂದೆ ಪುಸ್ತಕ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ತುಮಕೂರಿನ ಎರಡು ಠಾಣೆಗಳಲ್ಲಿ ದೂರು ದಾಖಲಾಗಿದೆ. 

Tap to resize

Latest Videos

ತುಮಕೂರು ನಗರ ಹಾಗೂ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗೂ ಬಜರಂಗದಳದ ಕಾರ್ಯಕರ್ತರು ದೂರು ನೀಡಿದ್ದಾರೆ. 

 

ಮತಾಂತರ, ಒಳನುಸುಳುವಿಕೆಯಿಂದ ಜನಸಂಖ್ಯಾ ಅಸಮಾನತೆ: ಹೊಸಬಾಳೆ


 

click me!