
ವಿಜಯಪುರ[ಜು.27] ಖಗ್ರಾಸ ಚಂದ್ರಗ್ರಹಣ ಕಾರಣಕ್ಕೆ ವಿಜಯಪುರ ನಗರದ ಬಹುತೇಕ ಹೆರಿಗೆ ಆಸ್ಪತ್ರೆಗಳು ಖಾಲಿ-ಖಾಲಿಯಾಗಿವೆ. ಸಿಜೇರಿಯನ್ ಗೆ ಡೇಟ್ ನೀಡಿದ್ದದರೂ ಆಸ್ಪತ್ರೆಯತ್ತ ತುಂಬು ಗರ್ಭಿಣಿಯರು ತಲೆ ಹಾಕಿಲ್ಲ.
ಹಾಗಾಗಿ ನಿಗದಿ ಪಡಿಸಿದ್ದ ಸಿಜೆರಿಯನ್ ರದ್ದು ಮಾಡಲಾಗಿದೆ. ಗ್ರಹಣದ ಕಾರಣಕ್ಕೆ ಗರ್ಭಿಣಿಯರು ಮನೆಯಿಂದ ಹೊರಬರಲು ಅಂಜುತ್ತಿದ್ದಾರೆ. ಜ್ಯೋತಿಷಿಗಳ ಮಾತಿಗೆ ಕಟ್ಟು ಬಿದ್ದು ಗರ್ಭಿಣಿಯರು ಉಪವಾಸ ವ್ರತ ಕೈಗೊಂಡಿದ್ದಾರೆ.
ದೇವರ ನಾಮಾವಳಿ, ಪುಸ್ತಕಗಳನ್ನ ಓದುತ್ತ ಕುಳಿತಿದ್ದಾರೆ.ಮೈ-ಕೈ ಕೆರೆದುಕೊಳ್ಳುವಂತಿಲ್ಲ, ಉಪಹಾರ ಸೇವಿಸುವಂತಿಲ್ಲ, ಬೆಳಕಿನಲ್ಲಿ ಓಡಾಡುವಂತಿಲ್ಲ ಎಂಬ ಕಟ್ಟುಪಾಡುಗಳು ಒಂದು ಅರ್ಥದಲ್ಲಿ ಶಿಕ್ಷೆಯಾಗಿ ಪರಿಣಮಿಸಿದೆ. ಮಧ್ಯಾಹ್ನ 12 ಗಂಟೆಯಿಂದಲೆ ಗ್ರಹಣದ ವ್ರತ ಆರಂಭಿಸಿದ್ದಾರೆ.